ಬ್ಲಾಕ್ ಫಂಗಸ್: ಕರ್ನಾಟಕಕ್ಕೆ ಮತ್ತೆ 9750 ವೈಯಲ್ಸ್ ಆಂಫೊಟೆರಿಸಿನ್-ಬಿ ಪೂರೈಕೆ- ಕೇಂದ್ರ ಸಚಿವ ಸದಾನಂದಗೌಡ

ಕೋವಿಡ್ ಸಾಂಕ್ರಾಮಿಕದ ನಡುವೆಯೇ ಕರ್ನಾಟಕದಲ್ಲಿ ಉಲ್ಬಣವಾಗಿರುವ ಬ್ಲಾಕ್ ಫಂಗಸ್ ಸೋಂಕು ನಿರ್ವಹಣೆ ನಿಮಿತ್ತ ಇಂದು ಹೆಚ್ಚುವರಿಯಾಗಿ 9750 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ.
ಆಂಫೊಟೆರಿಸಿನ್-ಬಿ ಪೂರೈಕೆ
ಆಂಫೊಟೆರಿಸಿನ್-ಬಿ ಪೂರೈಕೆ
Updated on

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ನಡುವೆಯೇ ಕರ್ನಾಟಕದಲ್ಲಿ ಉಲ್ಬಣವಾಗಿರುವ ಬ್ಲಾಕ್ ಫಂಗಸ್ ಸೋಂಕು ನಿರ್ವಹಣೆ ನಿಮಿತ್ತ ಇಂದು ಹೆಚ್ಚುವರಿಯಾಗಿ 9750 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ.

ಈ ಬಗ್ಗೆ ಕೇಂದ್ರ ಸಚಿವ ಸದಾನಂದಗೌಡ ಅವರು ಮಾಹಿತಿ ನೀಡಿದ್ದು, ಕರ್ನಾಟಕಕ್ಕೆ ಮತ್ತೆ 9750 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಕರ್ನಾಟಕಕ್ಕೆ ಹೆಚ್ಚುವರಿ 9750 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿಯನ್ನು ಹಂಚಿಕೆ ಮಾಡಲಾಗಿದ್ದು, ಆ ಮೂಲಕ ಈ ವರೆಗೂ ಕರ್ನಾಟಕಕ್ಕೆ 22460 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ ಇಲ್ಲಿಯವರೆಗೂ ದೇಶದ ವಿವಿಧ ರಾಜ್ಯಗಳಿಗೆ 121000 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಅತ್ತ ತಮಿಳುನಾಡಿನಲ್ಲೂ ಬ್ಲಾಕ್ ಫಂಗಸ್ ಸೋಂಕು ಪ್ರಕರಣಗಳು ಹೆಚ್ಚಾಗಿದ್ದು, ಈ ಕೂಡಲೇ ತಮಿಳುನಾಡಿಗೆ ಕನಿಷ್ಠ 30,000 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿಯನ್ನು ಪೂರೈಕೆ ಮಾಡುವಂತೆ ತಮಿಳುನಾಡು ರಾಜ್ಯದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com