ಬೆಂಗಳೂರಿಗೆ ಆಮ್ಲಜನಕ ಹೊತ್ತ 9ನೇ ರೈಲು ಆಗಮನ

ಜಾರ್ಖಂಡ್ ನ ಟಾಟಾ ನಗರದಿಂದ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಹೊತ್ತ 9ನೇ ಆಕ್ಸಿಜನ್  ಎಕ್ಸ್ ಪ್ರೆಸ್ ರೈಲು ಭಾನುವಾರ ನಗರದ ವೈಟ್ ಫೀಲ್ಡ್ ತಲುಪಿದೆ.
ಆಕ್ಸಿಜನ್ ಎಕ್ಸ್ ಪ್ರೆಸ್
ಆಕ್ಸಿಜನ್ ಎಕ್ಸ್ ಪ್ರೆಸ್
Updated on: 

ಬೆಂಗಳೂರು: ಜಾರ್ಖಂಡ್ ನ ಟಾಟಾ ನಗರದಿಂದ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಹೊತ್ತ 9ನೇ ಆಕ್ಸಿಜನ್  ಎಕ್ಸ್ ಪ್ರೆಸ್ ರೈಲು ಭಾನುವಾರ ನಗರದ ವೈಟ್ ಫೀಲ್ಡ್ ತಲುಪಿದೆ.

ಆಕ್ಸಿಜನ್  ಎಕ್ಸ್ ಪ್ರೆಸ್ ನ ತ್ವರಿತ ಸಂಚಾರ ಸುಗಮಗೊಳಿಸಲು ರೈಲ್ವೆ ಸಿಗ್ನಲ್ ಮುಕ್ತ 'ಗ್ರೀನ್ ಕಾರಿಡಾರ್' ಅನ್ನು ರೈಲ್ವೆ ರೂಪಿಸಿದೆ. ಈ ರೈಲು 120 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು  6 ಕ್ರಯೋಜೆನಿಕ್ ಕಂಟೈನರ್ ಗಳಲ್ಲಿ ಹೊತ್ತು ತಂದಿದೆ. ಪ್ರತಿ ಕ್ರಯೋಜೆನಿಕ್ ಕಂಟೇನರ್ 20 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕ ಹೊಂದಿದೆ.

ಈವರೆಗೆ ಕರ್ನಾಟಕಕ್ಕೆ 1062.14 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಆಕ್ಸಿಜನ್  ಎಕ್ಸ್  ಪ್ರೆಸ್  ಮೂಲಕ ಸಾಗಿಸಲಾಗಿದೆ. 

ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರಗಳಿಗೆ ನೆರವಾಗಲು ಭಾರತೀಯ ರೈಲ್ವೆ ಈವರೆಗೆ 224 ರೈಲುಗಳಲ್ಲಿ 884 ಟ್ಯಾಂಕರ್ ಗಳ ಮೂಲಕ ಸುಮಾರು 14,500 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ವಿವಿಧ ರಾಜ್ಯಗಳಿಗೆ ಸಾಗಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com