ಮಳೆನೀರು ಕೊಯ್ಲು ವ್ಯವಸ್ಥೆ ಬಳಿಕ ಸೋಲಾರ್ ಪವರ್ ಬಳಕೆ ಕುರಿತು ಬೆಂಗಳೂರು ಟೆಕಿಯ ಅಭಿಯಾನ

ಈ ಹಿಂದೆ ಬೆಂಗಳೂರಿನ ಹಲವಾರು ಅಪಾರ್ಟ್‌ಮೆಂಟ್ ಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿ ಸಾಕಷ್ಟು ಖ್ಯಾತಿಗಳಿಸಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಈಗ ಸೌರಶಕ್ತಿಯ ಸಾಮರ್ಥ್ಯವನ್ನು ಬಳಸಿಕೊಳ್ಳುವತ್ತ ತಮ್ಮ ಚಿತ್ತ ಹರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಈ ಹಿಂದೆ ಬೆಂಗಳೂರಿನ ಹಲವಾರು ಅಪಾರ್ಟ್‌ಮೆಂಟ್ ಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿ ಸಾಕಷ್ಟು ಖ್ಯಾತಿಗಳಿಸಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಈಗ ಸೌರಶಕ್ತಿಯ ಸಾಮರ್ಥ್ಯವನ್ನು ಬಳಸಿಕೊಳ್ಳುವತ್ತ ತಮ್ಮ ಚಿತ್ತ ಹರಿಸಿದ್ದಾರೆ.

ಗಣೇಶ್ ಶಾನಭಾಗ್.. ಬಹುಶಃ ಈ ಹೆಸರು ನಗರದ ಸಾಕಷ್ಟು ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಚಿರಪರಿಚಿತವಾಗಿರಬಹುದು. ಈ ಹಿಂದೆ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸುವ ಮೂಲಕ ಗಣೇಶ್ ಸಾಕಷ್ಟು ಸುದ್ದಿಗೆ ಗ್ರಾಸವಾಗಿ ಹೆಸರು ಮಾಡಿದ್ದರು. ಇದೀಗ ಇದೇ ಗಣೇಶ್ ಶಾನ್ಭಾಗ್ ಸೌರಶಕ್ತಿಯ ಸಾಮರ್ಥ್ಯ ಬಳಕೆಯ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಗಣೇಶ್, ವಿದ್ಯುತ್ ಉತ್ಪಾದನೆ ದೀರ್ಘಕಾಲಿಕ ಸಮಸ್ಯೆಯಾಗಿದೆ. ಇದಕ್ಕೆ ಸೌರಶಕ್ತಿ ಉತ್ತಮ ಪರಿಹಾರವಾಗಬಹುದು.  ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ವರದಿಯು ನಾವು ದಿನಕ್ಕೆ ಸುಮಾರು 180 kW-220 kW ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದು ಉಲ್ಲೇಖಿಸಿದೆ. ಆದರೆ ಅದನ್ನು ವಿದ್ಯುತ್ ಜಾಲಕ್ಕೆ ಹರಿಸುವುದೇ ಸಮಸ್ಯೆಯಾಗಿದೆ. ವಿವಿಧ ಮೂಲಸೌಕರ್ಯ-ಸಂಬಂಧಿತ ಸಮಸ್ಯೆಗಳಿವೆ. ಇದು ಪರಿಹರಿಸಬೇಕಾದ ಪ್ರಮುಖ ಅಡಚಣೆಯಾಗಿದೆ. ನಾವು ಈ ಕುರಿತ ವಿಷಯಗಳನ್ನು ವಿಂಗಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು. 

ಅಂತೆಯೇ ತಮ್ಮ ಈ ಯೋಜನೆಯಲ್ಲಿ ದೀರ್ಘಕಾಲ ಕೆಲಸ ಮಾಡಲು ಹಣ ಮತ್ತು ಹೂಡಿಕೆದಾರರನ್ನು ಹುಡುಕುತ್ತಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ ಕೇವಲ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಿದ್ದ ಶಾನಭಾಗ್ ಪೆಟ್ರೋಲ್ ಮತ್ತು ಡೀಸೆಲ್ ಆಧಾರಿತ ವಾಹನಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೆ ನನ್ನ ಅಪಾರ್ಟ್ಮೆಂಟ್ನಲ್ಲಿ ಚಾರ್ಜಿಂಗ್ ಪಾಯಿಂಟ್ ಗಳನ್ನು ಸ್ಥಾಪಿಸಲು ನಾನು ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುಮಾರು 23,800 ಅಪಾರ್ಟ್‌ಮೆಂಟ್‌ಗಳಿವೆ. ಸರ್ಕಾರವು ಮಳೆನೀರು ಕೊಯ್ಲು ಸೌಲಭ್ಯಗಳನ್ನು ಕಡ್ಡಾಯವಾಗಿ ಬಳಸಬೇಕೆಂದು ಆದೇಶಿಸಿದ್ದರೂ, ಇದು ಬಹುತೇಕ ಮಂದಿ ಬಳಕೆ ಮಾಡುತ್ತಿಲ್ಲ. ನಗರದಲ್ಲಿ ಶೇ.5ರಷ್ಟು ಜನರು ಮಾತ್ರ ಮಳೆ ನೀರು ಕೊಯ್ಲು ವ್ಯವಸ್ಥೆ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

2018 ರಲ್ಲಿ, ಅವರು ತಮ್ಮ ಅಪಾರ್ಟ್ಮೆಂಟ್ ನ ಬೋರ್ವೆಲ್ ಬತ್ತಿದ್ದನ್ನು ಮನಗಂಡ ಗಣೇಶ್ ಶಾನ್ ಭಾಗ್,  ಮಳೆ ನೀರು ಕೊಯ್ಲಿನ ಪ್ರಯೋಜಕತ್ವ ಅರಿತರು. ಇದೊಂದು ಬಹಳ ಗಂಭೀರ ಸಮಸ್ಯೆ,. ಬೆಂಗಳೂರಿನಲ್ಲಿ ಪ್ರತಿ ದಿನವೂ ಮಳೆಯಾಗುತ್ತದೆ. ಆದರೆ ಈ ನೀರೆಲ್ಲ ವ್ಯರ್ಥವಾಗುತ್ತದೆ. ಇದಕ್ಕೆ ಮಳೆ ಕೊಯ್ಲು ವ್ಯವಸ್ಥೆಯೇ ಪರಿಹಾರ ಎಂದು ಗಣೇಶ್ ಹೇಳುತ್ತಾರೆ. ಅಂತೆಯೇ ಮಳೆನೀರನ್ನು ಕೊಯ್ಲು ಮಾಡಲು ಸುಲಭವಾದ ಮತ್ತು ಕಡಿಮೆ ವೆಚ್ಚದ ಮಾರ್ಗವನ್ನು ಕಂಡುಕೊಂಡ ಗಣೇಶ್, ಕಾರ್ಯಾಗಾರಗಳನ್ನು ನಡೆಸಿ ಮತ್ತು ಇತರ ಅಪಾರ್ಟ್ಮೆಂಟ್ಗಳಿಗೆ ಸಹಾಯ ಮಾಡಲು ಮುಂದಾದರು. 

ಅದರಂತೆ ಇಲ್ಲಿಯವರೆಗೆ ಸುಮಾರು 150 ಅಪಾರ್ಟ್‌ಮೆಂಟ್‌ಗಳಿಗೆ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಕೆ ಸಹಾಯ ಮಾಡಿದ್ದೇವೆ. ಆ ಮೂಲಕ ಈ ಅಪಾರ್ಟ್‌ಮೆಂಟ್‌ಗಳು ಸುಮಾರು ಆರು ತಿಂಗಳ ಕಾಲ ಮಳೆನೀರಿನ ಮೇಲೆ ಅವಲಂಬಿತವಾಗಲು ಅನುವು ಮಾಡಿಕೊಡುತ್ತದೆ. ಅಂತೆಯೇ ಬೋರ್‌ವೆಲ್‌ಗಳು ರೀಚಾರ್ಜ್ ಮಾಡಲು ನೆರವಾಗುತ್ತದೆ. ಬಳಿಕ ಮುಂದಿನ ಆರು ತಿಂಗಳವರೆಗೆ ರೀಚಾರ್ಜ್ ಮಾಡಿದ ಬೋರ್‌ವೆಲ್‌ಗಳಿಂದ ನೀರು ಪಡೆಯುತ್ತಾರೆ ಎಂದು ಹೇಳಿದರು. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com