ಲಾಂಗ್ ತೋರಿಸಿ ಹಣ ವಸೂಲಿ: ಖಾಕಿ ಖೆಡ್ಡಾಗೆ ಬಿದ್ದ ಬರ್ನಲ್ ಸಿದ್ದಿಕಿ; ಬಂಧನ ವೇಳೆ ಹೈ ಡ್ರಾಮಾ, ಬ್ಲೇಡ್ ನುಂಗಿದ್ದೇನೆ ಎಂದ ಆರೋಪಿ!
ವಸಂತನಗರದಲ್ಲಿ ಹಾಡಹಗಲೇ ಲಾಂಗ್ ತೋರಿಸಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೌಡಿಯೋರ್ವನನ್ನು ಬಂಧಿಸಿದ್ದಾರೆ.
Published: 01st December 2021 02:03 PM | Last Updated: 01st December 2021 02:03 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ವಸಂತನಗರದಲ್ಲಿ ಹಾಡಹಗಲೇ ಲಾಂಗ್ ತೋರಿಸಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೌಡಿಯೋರ್ವನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಎಂಎಲ್ ಎ ವಿಶ್ವನಾಥ್ ಹತ್ಯೆಗೆ ನಡೆದಿತ್ತಾ ತಂತ್ರ? ಶಾಸಕರೇ ಮಾಡಿಸಿದ್ರಾ ವಿಡಿಯೋ? ತನಿಖೆ ಸಿಸಿಬಿ ಹೆಗಲಿಗೆ
ಲಾಂಗ್ ತೋರಿಸಿ ಅಂಗಡಿಗಳಲ್ಲಿ ಹಣ ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಕೆ.ಜಿ.ಹಳ್ಳಿಯ ಬರ್ನಲ್ ಸಿದ್ದಿಕಿಯನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಸಂತನಗರದಲ್ಲಿ ಹಾಡಹಗಲೇ ಲಾಂಗ್ ಬೀಸಿದ್ದ ಬರ್ನಾಲ್ ಸಿದ್ದಿಕಿ ಇದೀಗ ಪೊಲೀಸರ ಅತಿಥಿಯಾಗಿದ್ದು, ಆತನ ವಿರುದ್ಧ ಪೊಲೀಸರು ಹಲವು ಪ್ರಕರಣಗಳನ್ನು ದಾಖಲಿಸಿ ಒಳಗೆ ಹಾಕಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಲಸಿಕೆ ನೀಡುವ ನೆಪದಲ್ಲಿ ಮನೆಗೆ ನುಗ್ಗಿ, ಗನ್ ನಿಂದ ಬೆದರಿಸಿ ದರೋಡೆ
ಬರ್ನಲ್ ಸಿದ್ದಿಕಿ ಆಗಾಗ ಲಾಂಗ್ ತೋರಿಸಿ ಏರಿಯಾಗಳಲ್ಲಿ ಹಾವಳಿ ಕೊಡುತ್ತಿದ್ದ. ಕಳೆದ ಭಾನುವಾರ ಸಂಜೆ ವಸಂತನಗರದ 8ನೇ ಕ್ರಾಸ್ಗೆ ಬಂದಿದ್ದ ಸಿದ್ದಿಕಿ ರಸ್ತೆ ಬದಿಯ ಅಂಗಡಿಗಳಿಗೆ ನುಗ್ಗಿ ಲಾಂಗ್ ತೋರಿಸಿ ಹಣ ವಸೂಲಿ ಮಾಡಿದ್ದ. ಸಿದ್ದಿಕಿ ಬೆದರಿಕೆಗೆ ಅಂಜಿ ಅಂಗಡಿ ಕೆಲಸಗಾರರು, ಮಾಲೀಕರು ಹಣ ನೀಡುತ್ತಿದ್ದರು. ಈತನ ಇತ್ತೀಚಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಬಂಧನ ವೇಳೆ ಹೈ ಡ್ರಾಮಾ, ಬ್ಲೇಡ್ ನುಂಗಿದ್ದೇನೆ ಎಂದ ಆರೋಪಿ!
ಇನ್ನು ಪೊಲೀಸರು ಆರೋಪಿ ಬರ್ನಲ್ ಸಿದ್ದಿಕಿಯನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆದುಕೊಂಡು ಬರುತ್ತಿದ್ದಂತೆಯೇ ಆರೋಪಿ ಹೈಡ್ರಾಮಾವನ್ನೇ ಮಾಡಿದ್ದ ಎನ್ನಲಾಗಿದೆ. ಬಾಯಿಗೆ ಕೈ ಹಾಕಿಕೊಂಡು ಬ್ಲೇಡ್ ನುಂಗಿದ್ದೇನೆ ಎಂದಿದ್ದಾನೆ. ಬ್ಲೇಡ್ ಅಂದಾಕ್ಷಣ ಬೆಚ್ಚಿ ಬಿದ್ದ ಪೊಲೀಸರು ಆರೋಪಿ ಸಿದ್ದಿಕಿಯನ್ನು ಅಸ್ಪತ್ರೆಗೆ ಕರೆತಂದು ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಈ ವೇಳೆ ಬ್ಲೇಡ್ ಇಲ್ಲ ಎಂಬುದು ಪತ್ತೆಯಾಗಿದೆ. ನಂತರ ಸುಮ್ಮನೆ ಬಿಟ್ಟು ಬಿಡ್ತೀರಿ ಅಂತ ಹಾಗೆ ಹೇಳಿದೆ ಎಂದು ಪೊಲೀಸರಿಗೆ ಯಾಮಾರಿಸಲು ಯತ್ನಿಸಿದ್ದಾನೆ. ಅಲ್ಲದೇ ಇದೇ ರೀತಿ ಹಲವು ಠಾಣೆಗಳಲ್ಲಿ ಈತ ಡ್ರಾಮಾ ಮಾಡಿದ್ದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ಶವಾಗಾರದಲ್ಲಿ ಕೋವಿಡ್ ಶವಗಳು ಕೊಳೆತ ಪ್ರಕರಣ: ಪಾಲಿಕೆ, ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ
ಸಿದ್ದಿಕಿ ಕಳ್ಳತನ, ಸುಲಿಗೆ ಪ್ರಕರಣ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿಂದೆ ಪೊಲೀಸರು ಕರೆದೊಯ್ದಾಗ ಪೇಪರ್ ನುಂಗಿ ಸೈನೇಡ್ ಎಂದಿದ್ದ. ಇವನ ಹೈಡ್ರಾಮಾ ಕಂಡು ಪೊಲೀಸರು ಬೆರಗಾಗಿದ್ದರು. ವಾರೆಂಟ್ ಇದ್ರು ಪೊಲೀಸರ ಕಣ್ತಪ್ಪಿಸಿ ಸುತ್ತಾಡುತ್ತಿದ್ದ. ಸದ್ಯ ವಸಂತನಗರ ಸುಲಿಗೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದು ಈ ಬಾರಿ ಆರೋಪಿಯ ಯಾವುದೇ ಡ್ರಾಮಕ್ಕೂ ತಲೆ ಕೆಡಿಸಿಕೊಳ್ಳದ ಪೊಲೀಸರು ಆರೋಪಿಯನ್ನು ಜೈಲಿಗಟ್ಟಿದ್ದಾರೆ.