ಕೋವಿಡ್-19: ರಾಜ್ಯದಲ್ಲಿ ಸೋಂಕು ಹೆಚ್ಚುತ್ತಿದ್ದರೂ ಪರೀಕ್ಷೆಗಳ ಸಂಖ್ಯೆ ಇಳಿಕೆ, ಹೆಚ್ಚಿದ ಆತಂಕ

ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಸೋಂಕು ಹೆಚ್ಚಾಗುತ್ತಿದ್ದರೂ, ಪರೀಕ್ಷೆಗಳ ಸಂಖ್ಯೆ ಹೆಚ್ಚಳಗೊಳ್ಳದೆ ಇಳಿಕೆಯಾಗಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಸೋಂಕು ಹೆಚ್ಚಾಗುತ್ತಿದ್ದರೂ, ಪರೀಕ್ಷೆಗಳ ಸಂಖ್ಯೆ ಹೆಚ್ಚಳಗೊಳ್ಳದೆ ಇಳಿಕೆಯಾಗಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.

ರಾಜ್ಯದಲ್ಲಿ ಕಳೆದ 10 ದಿನಗಳಲ್ಲಿ, ದೈನಂದಿನ ಕೋವಿಡ್ -19 ಪರೀಕ್ಷಾ ಸಂಖ್ಯೆಗಳು ಕೇವಲ ಮೂರು ಬಾರಿ ಮಾತ್ರ 1 ಲಕ್ಷದ ಗಡಿ ದಾಟಿರುವುದು ಕಂಡು ಬಂದಿದೆ.

ಡಿಸೆಂಬರ್ 27 ರಂದು ರಾಜ್ಯದಲ್ಲಿ 58,495 ರಷ್ಟಿದ್ದ ಪರೀಕ್ಷೆಗಳ ಸಂಖ್ಯೆ, ಮರುದಿನ ಅದು 69,993ಕ್ಕೆ ಏರಿಕೆಯಾಗಿತ್ತು. ಈ ಸಮಯದಲ್ಲಿ ರಾಜ್ಯದಲ್ಲಿ ದೈನಂದಿನ ಸೋಂಕಿತ ಪ್ರಕರಣಗಳ ಸಂಖ್ಯೆ 200-400 ರಷ್ಟಿತ್ತು.

ಡಿಸೆಂಬರ್ 24 ರಂದು 1,14,559 ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ಸಂದರ್ಭದಲ್ಲಿ ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಸಂಖ್ಯೆ 405ಕ್ಕೆ ತಲುಪಿತ್ತು. ಸಾಂಕ್ರಾಮಿಕ ರೋಗದ ಆರಂಭದಿಂದ ಇಲ್ಲಿಯವರೆಗೂ ರಾಜ್ಯದಲ್ಲಿ 5,61,26,868 ಪರೀಕ್ಷೆಗಳನ್ನು ನಡೆಸಲಾಗಿದೆ.

ರಾಜ್ಯದಲ್ಲಿ ಮಂಗಳವಾರ 356 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 30,05,232 ಕ್ಕೆ ತಲುಪಿದೆ.

ಈ ನಡುವೆ ರಾಜ್ಯದಲ್ಲಿ ನಿನ್ನೆ 2 ಸಾವುಗಳು ಸಂಭವಿಸಿದ್ದು, ಮಹಾಮಾರಿ ವೈರಸ್ ಈ ವರೆಗೂ ಒಟ್ಟು 38,318 ಮಂದಿಯನ್ನು ಬಲಿ ಪಡೆದುಕೊಂಡಿದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ 269 ಪ್ರಕರಣಗಳು ವರದಿಯಾಗಿದ್ದು, ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12,61,997 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ 7,456 ಸಕ್ರಿಯ ಪ್ರಕರಣಗಳಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 6,122 ರಷ್ಟಿದೆ.

ರಾಜ್ಯದಲ್ಲಿ ಹೆಚ್ಚು ಸಕ್ರಿಯ ಪ್ರಕರಣಗಳು ಹೊಂದಿರುವ ಇತರೆ ಜಿಲ್ಲೆಗಳ ಪೈಕಿ ಕೊಡಗಿನಲ್ಲಿ 221 ಪ್ರಕರಣಗಳು, ದಕ್ಷಿಣ ಕನ್ನಡ 123 ಪ್ರಕರಣಗಳು, 103 ಪ್ರಕರಣಗಳೊಂದಿಗೆ ಮೈಸೂರು, 102 ಪ್ರಕರಣಗಳೊಂದಿಗೆ ಬಳ್ಳಾರಿ ಮತ್ತು 100 ಪ್ರಕರಣಗಳೊಂದಿಗೆ ಉತ್ತರ ಕನ್ನಡ ಸೇರಿವೆ.

ಕೋವಿಡ್ ವಾರ್ ರೂಮ್ ಪ್ರಕಾರ, ಶಿರಸಿ, ದಾಂಡೇಲಿ, ಉಡುಪಿ, ಹುಬ್ಬಳ್ಳಿ-ಧಾರವಾಡ, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪ್ರದೇಶಗಳು, ಬೆಳಗಾವಿ, ತುಮಕೂರು, ಮೈಸೂರು ಮತ್ತು ಮಂಗಳೂರು ನಗರ ಪ್ರದೇಶಗಳು ಹೆಚ್ಚು ಸೋಂಕು ಪೀಡಿತ ಪ್ರದೇಶಗಳಾಗಿವೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com