ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಜಾಲ ಪತ್ತೆ: ಇಬ್ಬರ ಬಂಧನ

ಬೆಂಗಳೂರಿನಿಂದ ವಿದೇಶಕ್ಕೆ ಕೊರಿಯರ್ ಮೂಲಕ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳನ್ನು ಎನ್ ಸಿ ಬಿ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. 
ಬ್ಯಾಗ್ ನಲ್ಲಿ ಪತ್ತೆಯಾಗಿರುವ ಡ್ರಗ್ಸ್
ಬ್ಯಾಗ್ ನಲ್ಲಿ ಪತ್ತೆಯಾಗಿರುವ ಡ್ರಗ್ಸ್

ಬೆಂಗಳೂರು: ಬೆಂಗಳೂರಿನಿಂದ ವಿದೇಶಕ್ಕೆ ಕೊರಿಯರ್ ಮೂಲಕ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳನ್ನು ಎನ್ ಸಿ ಬಿ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. 

ಬಂಧಿತರನ್ನು ಹೆಚ್.ಹುಸೇನ್ ಮತ್ತು ಆರ್.ಖಾನ್ ಎಂದು ಗುರ್ತಿಸಲಾಗಿದೆ. ಬಂಧಿತ ಆರೋಪಿಗಳಿಂದ ರೂ.25 ಲಕ್ಷ ಮೌಲ್ಯದ 3.8 ಕೆಜಿ ಚರಸ್ ಪತ್ತೆಯಾಗಿದೆ.

ಬೆಂಗಳೂರಿನಿಂದ ಕತಾರ್ ಗೆ ಕೊರಿಯರ್ ಮೂಲಕ ಮಾದಕ ವಸ್ತು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಎನ್ ಸಿಬಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕತಾರ್ ಗೆ ಕಳುಹಿಸಿದ್ದ ಕೊರಿಯರ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ 1.2 ಕೆಜಿ ತೂಕದ ಹಶಿಶ್ ಸಿಕ್ಕಿದೆ. ಇದರ ಜಾಡು ಹಿಡಿದು ಕೇರಳ ಮೂಲದ ಹುಸೇನ್ ಮತ್ತು ಖಾನ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಮಾರು 13 ಬ್ಯಾಗ್ ಗಳಲ್ಲಿ ತುಂಬಿಸಿದ್ದ ಚರಸ್ ನ್ನು ವಶಪಡಿಸಿಕೊಂಡಿದ್ದಾರೆ. ವಿದೇಶಕ್ಕೆ ಮಾದಕ ವಸ್ತು ರವಾನಿಸುವ ಸಕ್ರಿಯ ಜಾಲ ಹಿಡಿದು ಶೋಧ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com