ಗ್ಯಾಂಗ್ ರೇಪ್ ಪ್ರಕರಣ: 6 ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ- ಗೃಹ ಸಚಿವ ಬೊಮ್ಮಾಯಿ

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣವನ್ನು ತನಿಖೆ ಆದೇಶಿಸಲಾಗಿದ್ದು, ಈ ವರೆಗೂ ಇಬ್ಬರು ಮಹಿಳೆಯರು ಸೇರಿ 6 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣವನ್ನು ತನಿಖೆ ಆದೇಶಿಸಲಾಗಿದ್ದು, ಈ ವರೆಗೂ ಇಬ್ಬರು ಮಹಿಳೆಯರು ಸೇರಿ 6 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾಂಗ್ ರೇಪ್ ವಿಡಿಯೋ ವೈರಲ್ ಆಗಿತ್ತು, ಕೇಂದ್ರ ಸಚಿವರು ಈ ಬಗ್ಗೆ ಟ್ವೀಟ್ ಮಾಡಿದ್ದರು, ನಮ್ಮ ರಾಜ್ಯದ ಪೊಲೀಸರು ಅದನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಎಫ್ಐಆರ್ ನಲ್ಲಿ ಸಂತ್ರಸ್ತ ಯುವತಿಯ ಹೆಸರು ದಾಖಲಾಗಿಲ್ಲ. ಪೂರ್ಣ ಪ್ರಮಾಣದ ತನಿಖೆಯ ಮೇಲೆ ಸತ್ಯಾಂಶ ಹೊರಬರುತ್ತದೆ ಎಂದು ಹೇಳಿದ್ದಾರೆ. 

ಆರಂಭದಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಪ್ರದೇಶ ಯಾವುದೆಂದು ಗೊತ್ತಿರಲಿಲ್ಲ, ವೀಡಿಯೋ ವೈರಲ್ ಆದ ಮೂಲ ಹಿಡಿದು ತನಿಖೆ ನಡೆಸಿದಾಗ ಆ ಪ್ರದೇಶ ಬೆಂಗಳೂರೆಂದು ತಿಳಿದುಬಂದಿದೆ. ರಾಮಮೂರ್ತಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ಕಮಿಷನರ್ ಅವರೇ ಈ ಪ್ರಕರಣದ ಜಾಲ ಪತ್ತೆ ಹಚ್ಚಲು ನೇತೃತ್ವ ವಹಿಸಿದ್ದರು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೆಣ್ಣು ಮಗಳು ದೂರು ಕೊಡಲು ಬಂದಾಗ ತಡೆದವರು ಯಾರು? ಈಗ ದೂರು ಕೊಟ್ಡ ಮೇಲೆ ತನಿಖೆ ನಡೆಯಬೇಕಲ್ವಾ? ಪ್ರಕರಣದಲ್ಲಿ ನಾವು ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ. ಎಸ್ಐಟಿಯಲ್ಲೂ ಹಸ್ತಕ್ಷೇಪವಾಗಿಲ್ಲ. ಸೌಮೇಂದ್ರ ಮುಖರ್ಜಿ ಅವರಿಗೆ ಆರೋಗ್ಯದ ದೃಷ್ಟಿಯಿಂದ ರಜಾ ಕೊಟ್ಟಿದ್ದೇವೆ ಎಂದಿದ್ದಾರೆ.

ಸಿಪಿ ಯೋಗೇಶ್ವರ್ ಅವರು ವಿಜಯೇಂದ್ರ ವಿರುದ್ದ ಮಾಡಿರುವ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ಎಲ್ಲರ ಹೇಳಿಕೆಗೆ ನಾನು ಉತ್ತರ ಕೊಡಲು‌ ಆಗುವುದಿಲ್ಲ. ಅವರವರ ಹೇಳಿಕೆ ಅವರೇ ಬದ್ದರು ಎಂದು ಹೇಳಿದ್ದಾರೆ.

ಸಂತ್ರಸ್ತ ಯುವತಿ ಪತ್ತೆಗಾಗಿ ತಂಡ ರಚನೆ: ಕಮಲ್ ಪಂತ್

ವಿಡಿಯೋ ಕುರಿತು ನಡೆಸಲಾದ ಪ್ರಾಥಮಿಕ ತನಿಖಾ ವರದಿ ಆಧರಿಸಿ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 6 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ಇದೀಗ ಸಂತ್ರಸ್ತ ಯುವತಿ ಪತ್ತೆಯಾಗಿ ತಂಡವನ್ನು ರಚನೆ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಹೇಳಿದ್ದಾರೆ. 

ಬಂಧನಕ್ಕೊಳಗಾಗಿರುವ ಎಲ್ಲರೂ ಒಂದೇ ಗುಂಪಿಗೆ ಸೇರಿದವರಾಗಿದ್ದಾರೆ. ಎಲ್ಲರೂ ಬಾಂಗ್ಲಾದೇಶ ಮೂಲದವರೇ ಆಗಿದ್ದಾರೆ. ಸಂತ್ರಸ್ತ ಯುವತಿಯನ್ನೂ ಬಾಂಗ್ಲಾದೇಶದಿಂದ ಅಪಹರಿಸಿ ಕರೆತಂದಂತಿದೆ. ಆರ್ಥಿಕ ವಿಚಾರವಾಗಿ ಆರೋಪಿಗಳು ಯುವತಿಯ ಕಿರುಕುಳ ನೀಡಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com