ಕಸದ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಬಳಸುವಂತಿಲ್ಲ!

ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಗುತ್ತಿಗೆದಾರರು ಕಸ ಸಂಗ್ರಹಿಸುವ ವಾಹನಗಳ ಮೇಲೆ ಇನ್ನು ಮುಂದೆ ಪಾಲಿಕೆ ಸ್ಟಿಕ್ಕರ್‌ಗಳನ್ನು ಪ್ರದರ್ಶಿಸುವುದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿಷೇಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಗುತ್ತಿಗೆದಾರರು ಕಸ ಸಂಗ್ರಹಿಸುವ ವಾಹನಗಳ ಮೇಲೆ ಇನ್ನು ಮುಂದೆ ಪಾಲಿಕೆ ಸ್ಟಿಕ್ಕರ್‌ಗಳನ್ನು ಪ್ರದರ್ಶಿಸುವುದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿಷೇಧಿಸಿದೆ.

ಹೌದು.. ಕಸದ ವಾಹನಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಹೊಸ ನಿಯಮವನ್ನು ತಂದಿದೆ. ಪಾಲಿಕೆ ವ್ಯಾಪ್ತಿಯ ಕಸದ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಹಾಕುವಂತಿಲ್ಲ. ಗುತ್ತಿಗೆದಾರರು ಮೂಲಕ ಸರಬರಾಜು ಮಾಡಲಾದ ಎಲ್ಲಾ ವಾಹನಗಳಿಗೂ ಹೊಸ ಆದೇಶ ಅನ್ವಯವಾಗುತ್ತದೆ. ಕಸದ ವಾಹನಗಳಿಂದ ಅಪಘಾತ ಸಂಭವಿಸಿ ಸಾವು ನೋವಾದರೆ. ದಂಡದ ರೂಪದಲ್ಲಿ ಆ ವಾಹನ ಮಾಲೀಕರೇ ಪರಿಹಾರ ನೀಡಬೇಕು ಎಂದು ಹೊರಡಿಸಿದ ಬಿಬಿಎಂಪಿ ಘನತ್ಯಾಜ ವಿಶೇಷ ಆಯುಕ್ತ ಆದೇಶಿದ್ದಾರೆ.

ಬಿಬಿಎಂಪಿ ಕಸದ ಲಾರಿಗಳಿಂದ ಅಪಘಾತ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಮಾಡಲಾಗುತ್ತಿದೆ ಎನ್ನಲಾಗುತ್ತದೆ. ಜೊತೆಗೆ ಅನಾಮಾಧೇಯ ವ್ಯಕ್ತಿಗಳಿಂದ ಸ್ವಂತ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಅಳವಡಿಕೆ ಹಿನ್ನೆಲೆ ಬ್ರೇಕ್ ಹಾಕಲು ಆದೇಶ ಹೊರಡಿಸಿದೆ. 

ಈ ನಿಯಮವು ಘನತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಗುತ್ತಿಗೆಯ ಮೇಲಿನ ಎಲ್ಲಾ ವಾಹನಗಳಿಗೆ ಅನ್ವಯಿಸುತ್ತದೆ ಎಂದು ಪಾಲಿಕೆ ಸೂಚನೆಯಲ್ಲಿ ತಿಳಿಸಿದೆ. ಯಾವುದೇ ಅಪಘಾತ ಸಂಭವಿಸಿದಲ್ಲಿ ಮತ್ತು ಜನರು ಪ್ರಾಣ ಕಳೆದುಕೊಂಡರೆ, ಸಂತ್ರಸ್ತರಿಗೆ ಸಂಬಂಧಿಸಿದ ಗುತ್ತಿಗೆದಾರರು ಪರಿಹಾರವನ್ನು ನೀಡಬೇಕು ಎಂದು ಪಾಲಿಕೆ ಸ್ಪಷ್ಟಪಡಿಸಿದೆ.

ಬಿಬಿಎಂಪಿ ಸ್ಟಿಕ್ಕರ್‌ಗಳನ್ನು ಬಳಸುವ ವಾಹನಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆಯನ್ನೂ ನೋಟಿಸ್‌ನಲ್ಲಿ ನೀಡಲಾಗಿದ್ದು, ತಪಾಸಣೆಯ ಸಮಯದಲ್ಲಿ ಚಾಲಕರು ಪರವಾನಗಿ, ಫಿಟ್‌ನೆಸ್ ಪ್ರಮಾಣಪತ್ರ ಮತ್ತು ವಾಹನ ವಿಮೆಯನ್ನು ಹೊಂದಿರಬೇಕು. ದಾಖಲೆಗಳನ್ನು ಪರಿಶೀಲಿಸುವಂತೆ ಬಿಬಿಎಂಪಿ ಮಾರ್ಷಲ್‌ಗಳು ಮತ್ತು ಕಿರಿಯ ಆರೋಗ್ಯ ನಿರೀಕ್ಷಕರನ್ನು ಕೇಳಿದೆ. ಅಗತ್ಯ ದಾಖಲೆಗಳಿಲ್ಲದ ಗುತ್ತಿಗೆದಾರರಿಗೆ ಆದಷ್ಟು ಬೇಗ ಏರಿಯಾ ಸೂಪರಿಂಟೆಂಡೆಂಟ್ ಎಂಜಿನಿಯರ್‌ಗಳಿಂದ ಲಿಖಿತ ಅನುಮತಿ ಪಡೆಯುವಂತೆ ಬಿಬಿಎಂಪಿ ಸೂಚಿಸಿದೆ.

ಈ ಕುರಿತು ಮಾತನಾಡಿರುವ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ಆಯುಕ್ತ ಹರೀಶ್ ಕುಮಾರ್ ಅವರು, 'ನಾವು ಕಸ ಸಂಗ್ರಹಣೆಯನ್ನು ಹೊರಗುತ್ತಿಗೆ ನೀಡಿದ್ದೇವೆ. ಆದರೆ ತ್ಯಾಜ್ಯ ಲಾರಿ ಅಥವಾ ಟಿಪ್ಪರ್ ಅಪಘಾತ ಸಂಭವಿಸಿದಾಗ, ಬಿಬಿಎಂಪಿಯನ್ನು ದೂಷಿಸಲಾಗುತ್ತಿದೆ. ಅಪಘಾತಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ, ಆದರೆ ಗುತ್ತಿಗೆದಾರರು ಹಾಕಿರುವ ಬಿಬಿಎಂಪಿ ಸ್ಟಿಕ್ಕರ್ ಗಳನ್ನು ನೋಡಿದರೆ ಈ ವಾಹನ ಪಾಲಿಕೆಗೆ ಸೇರಿದ್ದು ಎಂದು ಊಹಿಸಲಾಗುತ್ತಿದೆ. ಇದರಿಂದ ನಮ್ಮ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ ಎಂದು ಹೇಳಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com