ಕಮಾಂಡೊ ಸುಬೇದಾರ್ ಮೇಜರ್ ಸಿಂಗ್ ನಾಪತ್ತೆ ಪ್ರಕರಣ: ತಂಡ ರಚಿಸಿ, ಹುಡುಕಾಟ ತೀವ್ರಗೊಳಿಸಿದ ಪೊಲೀಸರು

ಜೂನ್ 11 ರಂದು ಬೆಳಗಾವಿಯಿಂದ ನಿಗೂಢವಾಗಿ ನಾಪತ್ತೆಯಾಗಿರುವ ಕಮಾಂಡೋ ಸುಬೇದಾರ್ ಮೇಜರ್ ಸಿಂಗ್ ಪತ್ತೆಗೆ ಪೊಲೀಸರು ತಂಡ ರಚಿಸಿದ್ದು, ಹುಡುಕಾಟ ತೀವ್ರಗೊಳಿಸಿದ್ದಾರೆ.
ಸುಬೇದಾರ್ ಮೇಜರ್ ಸಿಂಗ್
ಸುಬೇದಾರ್ ಮೇಜರ್ ಸಿಂಗ್
Updated on: 

ಬೆಳಗಾವಿ: ಜೂನ್ 11 ರಂದು ಬೆಳಗಾವಿಯಿಂದ ನಿಗೂಢವಾಗಿ ನಾಪತ್ತೆಯಾಗಿರುವ ಕಮಾಂಡೋ ಸುಬೇದಾರ್ ಮೇಜರ್ ಸಿಂಗ್ ಪತ್ತೆಗೆ ಪೊಲೀಸರು ತಂಡ ರಚಿಸಿದ್ದು, ಹುಡುಕಾಟ ತೀವ್ರಗೊಳಿಸಿದ್ದಾರೆ.

ಸುಬೇದಾರ್ ಎಂಎಲ್ಐಆರ್'ಸಿ ಬೆಳಗಾವಿಯ ಕಮಾಂಡೋ ವಿಂಗ್‌'ಗೆ ಸೇರಿದವರಾಗಿದ್ದು, ಪಂಜಾಬ್'ನ ಗುರುದಾಸ್ ಪುರ ಜಿಲ್ಲೆಯ ಮೂಲದವರಾಗಿದ್ದಾರೆ. ಫೋನ್ ರಿಪೇರಿ ಮಾಡಿಸಲೆಂದು ಸುಬೇದಾರ್ ಅವರು ಜೂನ್.11 ರಂದು ಓಲ್ಡ್ ಸಿಟಿಗೆ ಬಂದಿದ್ದಾರೆ.

ಕೇಳ್ಕರ್ ಬಾಗ್‌ನಲ್ಲಿರುವ ವೈಶಾಲಿ ಕಿಚನ್ ಬಳಿ ಸುಬೇದಾರ್ ಅವರು ತಮ್ಮ ಸೈಕಲ್ ಪಾರ್ಕ್ ಮಾಡಿರುವುದು ಕಂಡು ಬಂದಿದೆ. ಸಾಕಷ್ಟು ಸಮಯವಾದರೂ ಸುಬೇದಾರ್ ಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸುಬೇದಾರ್ ಜೊತೆಗೆ ಕೆಲಸ ಮಾಡುತ್ತಿದ್ದ ಇತರೆ ಯೋಧರು ಹುಡುಕಾಡಿದ್ದಾರೆ. ಆದರೆ, ಎಲ್ಲಿಯೂ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ವೈಶಾಲಿ ಕಿಚನ್ ಬಳಿಕ ಸುಬೇದಾರ್ ಅವರ ಸೈಕಲ್ ಪತ್ತೆಯಾಗಿದೆ. ಸುಬೇದಾರ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಚಿಂತಿತರಾಗಿದ್ದಾರೆ. ಇವರ ಬಗ್ಗೆ ಯಾರಿಗೇ ಮಾಹಿತಿ ಸಿಕ್ಕರೂ 9899217518 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಉಪ ಪೊಲೀಸ್ ಆಯುಕ್ತ ಪಿವಿ ಸ್ನೇಹಾ ಅವರು ಮಾತನಾಡಿ, ಸುಬೇದಾರ್ ನಾಪತ್ತೆ ಕುರಿತು ತನಿಖೆ ಆರಂಭಿಸಲಾಗಿದೆ. ಆವರ ಬಗ್ಗೆ ಮಾಹಿತಿ ನೀಡಿದವರಿಗೆ ರೂ.50,000 ಬಹುಮಾನ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com