ಬೆಂಗಳೂರು: ರೈಲು ಹತ್ತುವ ವೇಳೆ ದುರಂತ: ಹಳಿ ಮೇಲೆ ಬಿದ್ದು ಮಹಿಳೆ ಸಾವು

ರೈಲು ಹತ್ತುವ ಧಾವಂತದಲ್ಲಿ ಆಯತಪ್ಪಿ ಹಳಿ ಮೇಲೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹಳಿ ಮೇಲೆ ಬಿದ್ದ ಮಹಿಳೆ
ಹಳಿ ಮೇಲೆ ಬಿದ್ದ ಮಹಿಳೆ
Updated on

ಬೆಂಗಳೂರು: ರೈಲು ಹತ್ತುವ ಧಾವಂತದಲ್ಲಿ ಆಯತಪ್ಪಿ ಹಳಿ ಮೇಲೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ನಲ್ಲಿ ಶನಿವಾರ ಬೆಳಗ್ಗೆ ಈ ದಾರುಣ ಘಟನೆ ನಡೆದಿದ್ದು, ಕಾಮಾಖ್ಯ ಎಸಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹೊರಡುವ ವೇಳೆ ರೈಲು ಹತ್ತಲು ಮುಂದಾದ ಮಹಿಳೆ ಕಾಲು ಜಾರಿ ಹಳಿ ಮೇಲೆ ಬಿದ್ದಿದ್ದಾರೆ. ಈ ವೇಳೆ 31 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಪ್ರಯಾಣ ಮುಂದುವರಿಸಿದ ರೈಲಿನಲ್ಲಿ ಆಕೆಯ 3 ವರ್ಷದ ಮಗಳು ಮತ್ತು ತಾಯಿ ಇದ್ದರು ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಶೀತಲ್ ಬೆಂಗಳೂರಿನಿಂದ ಪಶ್ಚಿಮ ಬಂಗಾಳದ ನ್ಯೂ ಅಲಿಪುರದೌರ್ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. 12551 ಸಂಖ್ಯೆಯ ರೈಲು ಅಪಘಾತ ಸಂಭವಿಸಿದಾಗ ಪ್ಲಾಟ್‌ಫಾರ್ಮ್ ಒಂದರಿಂದ ಬೆಳಿಗ್ಗೆ 9.03 ಕ್ಕೆ ಹೊರಟಿತ್ತು.

ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, “ಮಹಿಳೆ ತನ್ನ ಮಗಳಿಗೆ ಪ್ಲಾಟ್‌ಫಾರ್ಮ್‌ನಲ್ಲಿರುವ ಸ್ಟಾಲ್‌ನಲ್ಲಿ ಕೆಲವು ಚಿಪ್ಸ್ ಖರೀದಿಸಲು ತನ್ನ ಎಸಿ ಕೋಚ್‌ನಿಂದ ಹೊರಬಂದಳು. ರೈಲು ಚಲಿಸುತ್ತಿರುವುದನ್ನು ಗಮನಿಸಿದ ಆಕೆ ರೈಲು ಹತ್ತಲು ಓಡಿ ಬಂದು ಕಾಲು ಜಾರಿ ಹಳಿಗಳ ಮೇಲೆ ಬಿದ್ದಿದ್ದಾಳೆ. ಪ್ಲಾಟ್‌ಫಾರ್ಮ್‌ನಲ್ಲಿ ಗಸ್ತು ತಿರುಗುತ್ತಿದ್ದ ಸರ್ಕಾರಿ ರೈಲ್ವೆ ಪೊಲೀಸ್ ಪೇದೆ ಶಿವರಾಜ್ ತಕ್ಷಣ ಆಕೆಯನ್ನು ಪ್ಲಾಟ್‌ಫಾರ್ಮ್‌ಗೆ ಎಳೆದರು. ನಂತರ ರೈಲ್ವೆ ರಕ್ಷಣಾ ಪಡೆ ಅವರಿಗೆ ಸಹಾಯ ಮಾಡಿತು. ಮಹಿಳೆಯನ್ನು ಟ್ರ್ಯಾಕ್‌ನಿಂದ ಹೊರತೆಗೆದಾಗ, ಆಕೆಯ ಒಂದು ಕೈ ತೀವ್ರವಾಗಿ ಮುರಿದು ತೂಗಾಡುತ್ತಿತ್ತು.

ಈ ಕುರಿತು ಮಾತನಾಡಿರುವ ರಕ್ಷಣಾ ಸಿಬ್ಬಂದಿ, "ಮಹಿಳೆ ನಮ್ಮೊಂದಿಗೆ ಹಿಂದಿಯಲ್ಲಿ ಮಾತನಾಡುತ್ತಿದ್ದಳು. ನಾವು ಆಕೆಯನ್ನು ಆಂಬ್ಯುಲೆನ್ಸ್ ಮೂಲಕ ಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದೆವು. ಆಕೆ ಸ್ವಲ್ಪ ಸಮಯದ ನಂತರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದಳು ಎಂದು ಹೇಳಿದ್ದಾರೆ.

ದುಃಖಕರವೆಂದರೆ ಆಕೆ ಹಳಿ ಬಿದ್ದಿದ್ದರೂ ಅದರ ಅರಿವಿಲ್ಲದೆ ಆಕೆಯ ಕುಟುಂಬವು ರೈಲಿನಲ್ಲಿ ತಮ್ಮ ಪ್ರಯಾಣವನ್ನು ಮುಂದುವರೆಸಿತು. ಸಂತ್ರಸ್ಥ ಮಹಿಳೆಯನ್ನು ಎಚ್ಚರಿಸಿದಾಗ ಆಕೆ ನಮಗೆ ಕುಟುಂಬಸ್ಥರ ಮೊಬೈಲ್ ಸಂಖ್ಯೆಯನ್ನು ಕೊಟ್ಟರು. ನಾವು ಅದಕ್ಕೆ ಕರೆ ಮಾಡಿದಾಗ ಅವರು ಉತ್ತರಿಸಲಿಲ್ಲ ಎಂದು ಹೇಳಿದ್ದಾರೆ.

ಆಸ್ಪತ್ರೆಯ ವೈದ್ಯರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಈ ಕುರಿತು ಮಾಹಿತಿ ನೀಡಿದ್ದು, ಮೇಲ್ನೋಟಕ್ಕೆ ಆಕೆ ತನ್ನ ಬಲಗೈ ಮುರಿತವಾಗಿತ್ತು. ಆದರೆ ಆಕೆಯ ಸಾವಿಗೆ ತಲೆಯ ಆಂತರಿಕ ಗಾಯವೇ ಕಾರಣ ಎಂದು ನಾವು ಶಂಕಿಸುತ್ತಿದ್ದೇವೆ ಮತ್ತು ಮರಣೋತ್ತರ ಪರೀಕ್ಷೆಯು ನಮಗೆ ಸರಿಯಾದ ಚಿತ್ರಣವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com