ಶಿವಾಜಿನಗರದ ಮಿಲಿಟರಿ ಹೋಟೆಲ್ ಊಟಕ್ಕೆ ಮನಸೋತ ನಟ ಆಶಿಶ್ ವಿದ್ಯಾರ್ಥಿ

ನಟ ಆಶಿಶ್ ವಿದ್ಯಾರ್ಥಿ ಆಹಾರ ಪ್ರಿಯರು. ಅವರು ಇದಕ್ಕಾಗಿ ವಿಲಾಗ್ ಅನ್ನೇ ಆರಂಭಿಸಿ ಬಿಟ್ಟಿದ್ದಾರೆ. ಬೆಂಗಳೂರು ಸೇರಿದಂತೆ ಬೇರೆ ಎಲ್ಲೆಡೆ ಹೋದರೂ ಅಲ್ಲಿನ ಪ್ರಸಿದ್ಧ ಸ್ವಾದಿಷ್ಟಕರ ಊಟ ಸವಿದು ಅದರ ವಿಡಿಯೋ ಮಾಡಿ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಆಶಿಶ್ ವಿದ್ಯಾರ್ಥಿ
ಆಶಿಶ್ ವಿದ್ಯಾರ್ಥಿ
Updated on

ಬೆಂಗಳೂರು: ನಟ ಆಶಿಶ್ ವಿದ್ಯಾರ್ಥಿ ಆಹಾರ ಪ್ರಿಯರು. ಅವರು ಇದಕ್ಕಾಗಿ ವಿಲಾಗ್ ಅನ್ನೇ ಆರಂಭಿಸಿ ಬಿಟ್ಟಿದ್ದಾರೆ. ಬೆಂಗಳೂರು ಸೇರಿದಂತೆ ಬೇರೆ ಎಲ್ಲೆಡೆ ಹೋದರೂ ಅಲ್ಲಿನ ಪ್ರಸಿದ್ಧ ಸ್ವಾದಿಷ್ಟಕರ ಊಟ ಸವಿದು ಅದರ ವಿಡಿಯೋ ಮಾಡಿ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಕಳೆದ ಬಾರಿ ಮುದ್ದೆ ಊಟ ಮಾಡಿ ಸೂಪರ್ ಎಂದಿದ್ದ ಆಶಿಶ್ ಅವರು ಇದೀಗ ಮಾಂಸಾಹಾರ ಊಟದ ರುಚಿಯನ್ನು ಸವಿದು ತೃಪ್ತಿಪಟ್ಟಿದ್ದಾರೆ. ಈ ಬಾರಿ ಅವರ ವಿ ಲಾಗ್ ನಲ್ಲಿ ಬೆಂಗಳೂರಿನ ಶಿವಾಜಿ ನಗರದಲ್ಲಿನ ಒಂದು ಹೋಟೆಲ್ ಮತ್ತು ಅಲ್ಲಿನ ಆಹಾರದ ರುಚಿ, ವಿಶೇಷತೆಯನ್ನು ವಿವರಿಸಿದ್ದಾರೆ.

ಹೌದು ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಮಿಲಿಟರಿ ಹೋಟೆಲ್ ನಲ್ಲಿ ಆಹಾರದ ರುಚಿ ಇದೆ ಎಂದು ಊಟ ಮಾಡುತ್ತಲೇ ವಿವರಿಸಿದ್ದಾರೆ. ಶಿವಾಜಿ ನಗರದಲ್ಲಿರುವ ಮಿಲಿಟರಿ ಹೋಟೆಲ್ ನಲ್ಲಿ ದೊನ್ನೆ ಬಿರಿಯಾನಿ, ಚಿಕನ್ ಕರಿ, ಮಟನ್ ಸುಕ್ಕಾ, ಪಾಯಾ ಸೂಪ್ ಹಲವು ಫುಡ್ ಸವಿದು ವಾವ್ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com