ಬೆಂಗಳೂರು: ಮೆಟ್ರೋ ಟಿಕೆಟ್‌ನೊಂದಿಗೆ ಕ್ಯಾಬ್, ಆಟೋ ಬುಕ್ ಮಾಡಲು ಶೀಘ್ರದಲ್ಲೇ ಬರಲಿದೆ ಆ್ಯಪ್!

ಪ್ರಯಾಣಿಕರು ತಮ್ಮ ಫೋನ್ ಗಳಲ್ಲಿ ಮೆಟ್ರೋ ಟಿಕೆಟ್‌ನೊಂದಿಗೆ ಆಟೋರಿಕ್ಷಾ ಅಥವಾ ಕ್ಯಾಬ್ ಅನ್ನು ಬುಕ್ ಮಾಡಲು ಆ್ಯಪ್ ವೊಂದನ್ನು ಅಭಿವೃದ್ಧಿಪಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರಯಾಣಿಕರು ತಮ್ಮ ಫೋನ್ ಗಳಲ್ಲಿ ಮೆಟ್ರೋ ಟಿಕೆಟ್‌ನೊಂದಿಗೆ ಆಟೋರಿಕ್ಷಾ ಅಥವಾ ಕ್ಯಾಬ್ ಅನ್ನು ಬುಕ್ ಮಾಡಲು ಆ್ಯಪ್ ವೊಂದನ್ನು ಅಭಿವೃದ್ಧಿಪಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಮುಂದಾಗಿದೆ.

ಈ ಸಂಬಂಧ ಆ್ಯಪ್ ಅಭಿವೃದ್ಧಿ ಪಡಿಸಲು ಎರಡು ಖಾಸಗಿ ಕಂಪನಿಗಳ ಸೇವೆಗಳನ್ನು ಬಿಎಂಆರ್'ಸಿಎಲ್ ಅಧಿಕಾರಿಗಳು ಕೋರಿದ್ದಾರೆಂದು ತಿಳಿದುಬಂದಿದೆ.

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾತನಾಡಿ, ಬಹು-ಮಾದರಿ ನಗರ ಚಲನಶೀಲ ವೇದಿಕೆ ಸಿಟಿಲಿಟಿ ಮತ್ತು ಬೋಷ್ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ನಗರದ ಮೊದಲ ಗ್ರೀನ್ ಅರ್ಬನ್ ಮೊಬಿಲಿಟಿ ಇನ್ನೋವೇಶನ್ ಲಿವಿಂಗ್ ಲ್ಯಾಬ್ ಅನ್ನು ಸ್ಥಾಪಿಸಿದ ಗಿಜ್ ಇಂಡಿಯಾ ವನ್ನು ಅಪ್ಲಿಕೇಶನ್ ಅಭಿವೃದ್ಧಿಪಡಿಸುವಂತೆ ಕೇಳಲಾಗಿದೆ ಎಂದು ಹೇಳಿದ್ದಾರೆ.

ನಮ್ಮ ಅವಶ್ಯಕತೆಗಳನ್ನು ಅವರಿಗೆ ವಿವರಿಸಲಾಗಿದೆ. ಆ್ಯಪ್ ಅಭಿವೃದ್ಧಿ ಪ್ರಗತಿಯಲ್ಲಿದೆ. ಸಂಪೂರ್ಣವಾಗಿ ಆ್ಯಪ್ ಅಭಿವೃದ್ಧಿಪಡಿಸಲು ಕೆಲವು ತಿಂಗಳುಗಳ ಕಾಲ ಕಾಲಾವಕಾಶ ಕೇಳಿದ್ದಾರೆ. ಆ್ಯಪ್ ಸಿದ್ಧಗೊಂಡಿದ್ದೇ ಆದರೆ, ಶೀಘ್ರದಲ್ಲಿಯೇ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಪೈಲಟ್ ಪ್ರಾಜೆಕ್ಟ್ ಆಗಿ ಗಿಜ್ ಕಾರ್ಯನಿರ್ವಹಿಸುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಅಪ್ಲಿಕೇಶನ್ ಮೂರನೇ ವ್ಯಕ್ತಿಗಳನ್ನು ಲಿಂಕ್ ಮಾಡುತ್ತದೆ. ಇದರಿಂದ ಪ್ರಯಾಣಿಕರು ಮನೆಯಲ್ಲಿದ್ದಾಗ, ಮೆಟ್ರೋ ಸವಾರಿ ಮಾಡುವ ಮೊದಲು ಆಟೋರಿಕ್ಷಾಗಳು ಅಥವಾ ಕ್ಯಾಬ್‌ಗಳನ್ನು ಬುಕ್ ಮಾಡಬಹುದು. ಯೋಜನೆಯನ್ನು ಕಾರ್ಯಗತಗೊಳಿಸಲು ವಿವಿಧ ಆಯ್ಕೆಗಳ ಕುರಿತು ಚರ್ಚಿಸಲಾಗುತ್ತಿದೆ, ”ಎಂದು ಅಧಿಕಾರಿ ತಿಳಿಸಿದ್ದಾರೆ.

ನಗರದ ಸಾರಿಗೆ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುತ್ತಿರುವ ಗಿಜ್ ಇಂಡಿಯಾ ಆ್ಯಪ್ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ ಎಂದು ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತೆ ವಿ ಮಂಜುಳಾ ಅವರು ದೃಢಪಡಿಸಿದ್ದಾರೆ.

ಹೊಸ ಆ್ಯಪ್ ಬಳಸಿ ಟಿಕೆಟ್ ಬುಕ್ ಮಾಡುವುದಾದರೆ ಈಗಾಗಲೇ ಇರುವ ನಮ್ಮ ಮೆಟ್ರೋ ಅಪ್ಲಿಕೇಶನ್ ಅನಗತ್ಯವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪರ್ವೇಜ್ ಅವರು, "ಪ್ರಯಾಣಿಕರಿಗೆ ಪ್ರಕ್ರಿಯೆಯ ಬಗ್ಗೆ ತಿಳಿದಿರುವುದಿಲ್ಲ. ಆದರೆ, ನಮ್ಮ ಅಪ್ಲಿಕೇಶನ್ ಉಪಯೋಗಕ್ಕೆ ಬರಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com