TNIE ವರದಿ ಇಂಪ್ಯಾಕ್ಟ್: 'ಪಾದರಾಯನಪುರ' ಹಿಂದೂ ಸ್ಮಶಾನ ಅತಿಕ್ರಮಣ, ಪೊಲೀಸರಿಗೆ ಲೋಕಾಯುಕ್ತ ಛೀಮಾರಿ, ಬಿಬಿಎಂಪಿಗೆ ನೋಟಿಸ್

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಬೆನ್ನಲ್ಲೇ ಎಚ್ಚೆತ್ತ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳು ಜೆಜೆ ನಗರ ಹಿಂದೂ ಸ್ಮಶಾನ ಅತಿಕ್ರಮಣ ಪ್ರಕರಣ ಕೈಗೆತ್ತಿಕೊಂಡು ವಿಚಾರಣೆಗೆ ಮುಂದಾಗಿದ್ದು, ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ಛೀಮಾರಿ ಹಾಕಿದ್ದು ಮಾತ್ರವಲ್ಲದೇ ಬಿಬಿಎಂಪಿಗೆ ನೋಟಿಸ್ ಕೂಡ ಜಾರಿ ಮಾಡಿದೆ.
ವಿವಾದಿತ ಹಿಂದೂ ಸ್ಮಶಾನ ಜಾಗದಲ್ಲಿ ತಲೆ ಎತ್ತಿರುವ ಬಿಬಿಎಂಪಿ ಕಚೇರಿ
ವಿವಾದಿತ ಹಿಂದೂ ಸ್ಮಶಾನ ಜಾಗದಲ್ಲಿ ತಲೆ ಎತ್ತಿರುವ ಬಿಬಿಎಂಪಿ ಕಚೇರಿ

ಬೆಂಗಳೂರು: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಬೆನ್ನಲ್ಲೇ ಎಚ್ಚೆತ್ತ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳು ಜೆಜೆ ನಗರ ಹಿಂದೂ ಸ್ಮಶಾನ ಅತಿಕ್ರಮಣ ಪ್ರಕರಣ ಕೈಗೆತ್ತಿಕೊಂಡು ವಿಚಾರಣೆಗೆ ಮುಂದಾಗಿದ್ದು, ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ಛೀಮಾರಿ ಹಾಕಿದ್ದು ಮಾತ್ರವಲ್ಲದೇ ಬಿಬಿಎಂಪಿಗೆ ನೋಟಿಸ್ ಕೂಡ ಜಾರಿ ಮಾಡಿದೆ.

ಹೇಳಿಕೆ ದಾಖಲಿಸಲು ತಡವಾಗಿ ನೋಟಿಸ್ ಜಾರಿ ಮಾಡಿರುವ ಲೋಕಾಯುಕ್ತ ಪೊಲೀಸರ 'ಮೂರ್ಖತನ' ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಟಿಸಿದ 15 ದಿನಗಳ ನಂತರ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಅವರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗೆ ಛೀಮಾರಿ ಹಾಕಿದ್ದು, ಅರ್ಜಿದಾರರಿಗೆ ಹಾಗೂ ಬಿಬಿಎಂಪಿ ಮುಖ್ಯಸ್ಥರಿಗೆ ನೋಟಿಸ್ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. 

ಜೆಜೆ ನಗರದ ಪಾದರಾಯನಪುರ ಹಿಂದೂ ಸ್ಮಶಾನ ಭೂಮಿ ಅತಿಕ್ರಮಣ ಮತ್ತು ಅಸ್ಥಿಪಂಜರ ಮತ್ತು ಮೃತದೇಹಗಳನ್ನು ನಾಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 5 ರಂದು ಸ್ಥಳ ಪರಿಶೀಲನೆಗಾಗಿ ಕಮಿಷನರ್ ಮತ್ತು ಜಂಟಿ ಆಯುಕ್ತ ಪಶ್ಚಿಮ ವಿಭಾಗದವರಿಗೆ ಸೂಚಿಸಿದ್ದಾರೆ.

ಅರ್ಜಿದಾರರಾದ ಎಸ್ ಭಾಸ್ಕರನ್ ಅವರ ಪ್ರಕಾರ, ಹೇಳಿಕೆ ದಾಖಲಿಸಲು ಮಾರ್ಚ್ 13 ರಂದು ದಿನಾಂಕ ನಿಗದಿಯಾಗಿದ್ದರೂ, ಲೋಕಾಯುಕ್ತ ಪೊಲೀಸರು ಮಾರ್ಚ್ 14 ರಂದು ಅವರಿಗೆ ಹೇಳಿಕೆ ದಾಖಲಿಸಲು ನೋಟಿಸ್ ಕಳುಹಿಸಿದ್ದಾರೆ ಎಂದು ಕಿಡಿಕಾರಿದರು. ಅಲ್ಲದೆ ಮಾಧ್ಯಮ ವರದಿಯ ನಂತರ, ಲೋಕಾಯುಕ್ತರು ಎಸ್‌ಪಿ ಲಕ್ಷ್ಮೀ ಗಣೇಶ್‌ಗೆ ವಾಗ್ದಂಡನೆ ನೀಡಿದ್ದರು. ಈಗ ನಮಗೆ ನೋಟಿಸ್ ನೀಡಲಾಗಿದೆ ಮತ್ತು ಸ್ಥಳ ಪರಿಶೀಲನೆಗಾಗಿ ಏಪ್ರಿಲ್ 5 ರಂದು ಹಿಂದೂ ರುದ್ರಭೂಮಿಗೆ ಹಾಜರಾಗಬೇಕು. ಬಿಬಿಎಂಪಿ ಆಯುಕ್ತರು ಮತ್ತು ಜಂಟಿ ಆಯುಕ್ತರು ಸಹ ಹಾಜರಿರುತ್ತಾರೆ. ಅವರು ತಪ್ಪಿಸಿಕೊಂಡರೆ, ಅವರು ತಮ್ಮ ಪ್ರತಿನಿಧಿಯನ್ನು ಕಳುಹಿಸಬೇಕಾಗುತ್ತದೆ ಎಂದು ಹೇಳಿದರು.

ಪ್ರಾಣ ಬೆದರಿಕೆ ಇರುವುದರಿಂದ ಏಪ್ರಿಲ್ 5 ರಂದು ಸ್ಥಳ ಪರಿಶೀಲನೆ ವೇಳೆ ರಕ್ಷಣೆ ಕೋರಿ ಪಶ್ಚಿಮ ವಿಭಾಗದ ಡಿಸಿಪಿ ಕಚೇರಿಗೆ ತೆರಳಿದ್ದೆವು ಎಂದು ಭಾಸ್ಕರನ್ ಅವರು ತಿಳಿಸಿದ್ದಾರೆ.

ಚಾಮರಾಜಪೇಟೆ ವಿಧಾನಸಭೆಯ ಜೆ.ಜೆ.ನಗರ ವಾರ್ಡ್‌ನ ಪಾದರಾಯನಪುರದಲ್ಲಿರುವ ಹಿಂದೂ ಕನ್ನಡಿಗ ಮತ್ತು ಹಿಂದೂ ತಮಿಳಿಗರ ಸಮಾಧಿ ಸ್ಥಳವನ್ನು ಅತಿಕ್ರಮಣ ಮಾಡಲಾಗಿದೆ ಎಂದು ಭಾಸ್ಕರನ್ ಈ ಹಿಂದೆ ದೂರಿ ನೀಡಿದ್ದರು. ಇಲ್ಲಿ ಬಿಬಿಎಂಪಿ ಕಚೇರಿ ನಿರ್ಮಾಣವಾಗಿದ್ದು, ಈಗ ಶಾಸಕರ ಅನುದಾನದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದ್ದರು.

ಭಾಸ್ಕರನ್ ಅವರು ದೂರಿನಲ್ಲಿ ಅನಧಿಕೃತ ಕಚೇರಿ ಮತ್ತು ಒಳಾಂಗಣ ಕ್ರೀಡಾ ಸಂಕೀರ್ಣಕ್ಕಾಗಿ ಹಿಂದೂ ಸಮುದಾಯದ ನೂರಾರು ಅಸ್ಥಿಪಂಜರ ಮತ್ತು ಮರಣದ ಅವಶೇಷಗಳನ್ನು ನಾಶಪಡಿಸಲು ಸ್ಥಳೀಯ ಶಾಸಕ ಬಿಝಡ್ ಜಮೀರ್ ಅಹಮದ್ ಖಾನ್ ಮತ್ತು ಅವರ ಕೆಲವು ಅನುಯಾಯಿಗಳನ್ನು ಹೊಣೆಗಾರರನ್ನಾಗಿಸಿದ್ದರು.

ಬಿಬಿಎಂಪಿ ಆಯುಕ್ತರು ಮತ್ತು ಜಂಟಿ ಆಯುಕ್ತರಿಂದ ಪ್ರತಿಕ್ರಿಯೆ ಪಡೆಯಲು ವಿಫಲವಾದ ಕಾರಣ, ಪ್ರಕರಣವನ್ನು ಮಾರ್ಚ್ 6 ರಂದು ಲೋಕಾಯುಕ್ತಕ್ಕೆ ವಿಸ್ತರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com