ಸಾವಿನ ಕೂಪವಾದ ಉಳ್ಳಾಲ ಕೆರೆ: ಸಾವಿರಾರು ಮೀನುಗಳ ಮಾರಣಹೋಮ, ಬಿಬಿಎಂಪಿಗೆ ಸಾರ್ವಜನಿಕರ ಹಿಡಿಶಾಪ!

ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ ನಗರದ ಉಳ್ಳಾಲ ಕೆರೆಯಲ್ಲಿ ಮೀನುಗಳ ಮಾರಣಹೋಮವೇ ಕಂಡು ಬಂದಿತ್ತು. ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತಿದ್ದು, ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದ ಸಾರ್ವಜನಿಕರು ಬಿಬಿಎಂಪಿ ಅಧಿಕಾರಿಗಳ ದುರ್ನಡತೆಯ ಕಂಡು ಹಿಡಿಶಾಪ ಹಾಕಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ ನಗರದ ಉಳ್ಳಾಲ ಕೆರೆಯಲ್ಲಿ ಮೀನುಗಳ ಮಾರಣಹೋಮವೇ ಕಂಡು ಬಂದಿತ್ತು. ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತಿದ್ದು, ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದ ಸಾರ್ವಜನಿಕರು ಬಿಬಿಎಂಪಿ ಅಧಿಕಾರಿಗಳ ದುರ್ನಡತೆಯ ಕಂಡು ಹಿಡಿಶಾಪ ಹಾಕಿದರು.

ಮಳೆಯ ಕೊರತೆ ಹಾಗೂ ಉಳ್ಳಾಲ ಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಮಲ್ಲತ್ತಹಳ್ಳಿ ಕೆರೆಯಿಂದ ನೀರನ್ನು ಪಂಪ್ ಮಾಡಿರಲಿಲ್ಲ. ಹೀಗಾಗಿ ಆಮ್ಲಜನಕರ ಕೊರತೆಯಿಂದಾಗಿ ಮೀನುಗಳು ಸಾವನ್ನಪ್ಪಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ವಿಶ್ವೇಶ್ವರಯ್ಯ ಲೇಔಟ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಎಸ್.ಗೌಡ ಅವರು ಮಾತನಾಡಿ, ಸುತ್ತಮುತ್ತಲಿನ ಪರಿಸರ ಮಾಲಿನ್ಯವೂ ಇದಕ್ಕೆ ಕಾರಣ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು ಉತ್ತರ, ಯಶವಂತಪುರ ಹೋಬಳಿಯ 14 ಎಕರೆ ವಿಸ್ತೀರ್ಣದ ಕೆರೆ ಇದಾಗಿದ್ದು, ಕೆರೆಯ ದಯನೀಯ ಸ್ಥಿತಿ ಕಂಡು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ದೂರು ನೀಡಲಾಗಿದೆ. ಆದರೂ ಯಾವೊಬ್ಬ ಅಧಿಕಾರಿ ಅಥವಾ ಚುನಾಯಿತ ಪ್ರತಿನಿಧಿಗಳು ಪರಿಶೀಲನೆಗೆ ಮುಂದಾಗಿಲ್ಲ ಎಂದು ತಿಳಿಸಿದ್ದಾರೆ.

ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್ ವಿಜಯ್‌ಕುಮಾರ್ ಹರಿದಾಸ್ ಮಾತನಾಡಿ, ಕೆರೆಯಲ್ಲಿದ್ದ ಸತ್ತ ಮೀನುಗಳನ್ನು ತೆರವುಗೊಳಿಸಿ ವಿಲೇವಾರಿ ಮಾಡಿದ್ದೇವೆ. ಸ್ಯಾಂಪಲ್‌ಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಿ, ಸಾವಿಗೆ ನಿಖರ ಕಾರಣ ತಿಳಿಯಲಾಗುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಬಿಬಿಎಂಪಿ ಕೆರೆಗಳ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು, ಕೆರೆ ಅಭಿವೃದ್ಧಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಈ ವೇಳೆ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀತಿಯನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದ್ದರು.

ವಿಚಾರ ಸಂಕಿರಣದಲ್ಲಿ ಐಐಎಸ್‌ಸಿಯ ಟಿ.ವಿ.ರಾಮಚಂದ್ರ, ನಿವೃತ್ತ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಯು.ವಿ.ಸಿಂಗ್‌ರಂತಹ ತಜ್ಞರು ಕೊಳಚೆ ನೀರನ್ನು ಕೆರೆಗಳಿಗೆ ಸಂಪರ್ಕಿಸುವ ಚರಂಡಿಗಳಿಗೆ ಹರಿಸುವ ಮೊದಲು ಸಂಸ್ಕರಿಸುವ ಬಗ್ಗೆ ಪ್ರಸ್ತಾಪ ಮುಂದಿಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com