ಬೆಂಗಳೂರು: ನಾಗರಿಕರು ವಾಟ್ಸಾಪ್ ನಲ್ಲಿಯೂ ಪೊಲೀಸರಿಗೆ ದೂರು ಸಲ್ಲಿಕೆಗೆ ಅವಕಾಶ- ಬಿ.ದಯಾನಂದ

ಇನ್ಮುಂದೆ ನಗರದ ನಾಗರಿಕರು ತಮಗಾದ ವಂಚನೆ, ಅಪರಾಧ ಕುರಿತು ವಾಟ್ಸಾಪ್ ಮೂಲಕವೂ ಪೊಲೀಸರಿಗೆ ದೂರು ಸಲ್ಲಿಸಬಹುದು.
ನಗರ ಪೊಲೀಸ್ ಆಯುಕ್ತ ಬಿ. ದಯಾನಂದ
ನಗರ ಪೊಲೀಸ್ ಆಯುಕ್ತ ಬಿ. ದಯಾನಂದ
Updated on

ಬೆಂಗಳೂರು:  ಇನ್ಮುಂದೆ ನಗರದ ನಾಗರಿಕರು ತಮಗಾದ ವಂಚನೆ, ಅಪರಾಧ ಕುರಿತು ವಾಟ್ಸಾಪ್ ಮೂಲಕವೂ ಪೊಲೀಸರಿಗೆ ದೂರು ಸಲ್ಲಿಸಬಹುದು. ತುರ್ತು ಸಂದರ್ಭದಲ್ಲಿ ಯಾವುದೇ ರೀತಿಯ ದೂರು ಅಥವಾ ಸಹಾಯಕ್ಕಾಗಿ ವಾಟ್ಸಾಪ್ ಸಂಖ್ಯೆ 9480801000ಗೆ ಕಳುಹಿಸಬಹುದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.

 112 ನಿಯಂತ್ರಣ ಕೊಠಡಿ ಉನ್ನತೀಕರಿಸಲು ಮೊದಲ ಹೆಜ್ಜೆ ಇರಿಸಲಾಗಿದೆ. ಈ ನಿಯಂತ್ರಣ ಕೊಠಡಿ ಮೂಲಕ ಜನರ ದೂರು ಸ್ವೀಕರಿಸುತ್ತಿದ್ದ ಪೊಲೀಸರು ವಾಟ್ಸಾಪ್ ಮೂಲಕವೂ ದೂರು ಪಡೆಯಲು ಮುಂದಾಗಿರುವುದರಿಂದ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com