ಮಾಜಿ ಸಚಿವ ಅಂಜನಮೂರ್ತಿ
ಮಾಜಿ ಸಚಿವ ಅಂಜನಮೂರ್ತಿ

ಕಾಂಗ್ರೆಸ್‌ನ ಮಾಜಿ ಸಚಿವ ಅಂಜನಮೂರ್ತಿ ಇನ್ನಿಲ್ಲ

ಕಾಂಗ್ರೆಸ್‌ನ ಮಾಜಿ ಸಚಿವ ಅಂಜನಮೂರ್ತಿ ಅವರು ಗುರುವಾರ ವಿಧಿವಶರಾಗಿದ್ದಾರೆ.
Published on

ಬೆಂಗಳೂರು: ಕಾಂಗ್ರೆಸ್‌ನ ಮಾಜಿ ಸಚಿವ ಅಂಜನಮೂರ್ತಿ ಅವರು ಗುರುವಾರ ವಿಧಿವಶರಾಗಿದ್ದಾರೆ.

ಹೃದಯಾಘಾತದಿಂದ ಅಂಜನಮೂರ್ತಿಯವರು ನಿಧನರಾಗಿದ್ದು, ಅವರಿಗೆ 72 ವರ್ಷ ವಯಸ್ಸಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಇಂದಿರಾನಗರ ನಿವಾಸಿಯಾದ ಅಂಜನಮೂರ್ತಿ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.

ಎರಡು ದಿನಗಳ ಅವರನ್ನು ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿದುಬಂದಿದೆ.

ಅಂಜನ ಮೂರ್ತಿ ಅವರು 10ನೇ ಏಪ್ರಿಲ್ 1941ರಲ್ಲಿ ಜನಿಸಿದ್ದರು. ಬಿಎ, ಬಿ.ಎಲ್ ಪದವೀಧರರು. 1989-1994 ಮತ್ತು 1999 ರಿಂದ 23 ಫೆಬ್ರವರಿ 2004 ರಿಂದ 2007 ಠಂಪಿಂಗ್ ಮೂರು ಬಾರಿ ಆಯ್ಕೆ ಸಮೀಪದ ಪ್ರತಿಸ್ಪರ್ಧಿಗಿಂತ 37000 ಮತಗಳ ಬಹುಮತ ಸಾಧಿಸಿದ್ದರು.

ಮಾರ್ಚ್ 1993ರಲ್ಲಿ ಕರ್ನಾಟಕ ವಿಧಾನಸಭೆಯ ಉಪ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. 2005-06 ರಿಂದ ವಸತಿ ಸಚಿವರಾಗಿದ್ದರು. ನವದೆಹಲಿಯಲ್ಲಿ ನಡೆದ 89 ಅಂತರ ಸಂಸದೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅಖಿಲ ಭಾರತ ಪೀಠಾಧಿಪತಿಗಳಾಗಿ ಹಾಜರಾಗಿದ್ದರು.

1994ರಲ್ಲಿ ಭುವನೇಶ್ವರದಲ್ಲಿ ನಡೆದ ಅಖಿಲ ಭಾರತ ಪೀಠಾಧಿಪತಿಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಶಿಯೋಮಣಿ ಸಂಸ್ಥೆ, ನವದೆಹಲಿಯಿಂದ ಶಿರೋಮಣಿ ವಿಕಾಸ್ ಪ್ರಶಸ್ತಿ ನೀಡಿ ಅಂಜನ ಮೂರ್ತಿಯವರನ್ನು ಗೌರವಿಸಿತ್ತು. ಮಾನವ ಸೇವಾ ಪುರಸ್ಕಾರ, 1993ರಲ್ಲಿ ವಿಶೇಷ ಸ್ಕ್ರಾಲ್ ಆಫ್ ಆನರ್ ಸೇರಿದಂತೆ ಕೆಲವು ಗೌರವಗಳು ಸಿಕ್ಕಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com