ಗ್ಯಾಸ್ ಕಂಪನಿಯ ಡೀಲರ್ ಶಿಪ್ ಕೊಡಿಸುವುದಾಗಿ ಹೇಳಿ ನಿವೃತ್ತ ಪ್ರಾಂಶುಪಾಲರಿಗೆ ರೂ.45 ಲಕ್ಷ ವಂಚನೆ!

ಖಾಸಗಿ ಗ್ಯಾಸ್ ಕಂಪನಿಯ ಡೀಲರ್ ಶಿಪ್ ಕೊಡಿಸುವ ನೀಡಿ ಹೊಸಪೇಟೆಯ ಐಟಿಐ ಸಂಸ್ಥೆಯೊಂದರ ನಿವೃತ್ತ ಪ್ರಾಂಶುಪಾಲರೊಬ್ಬರಿಗೆ (61) ರೂ.45 ಲಕ್ಷಗಳ ವಂಚನೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಖಾಸಗಿ ಗ್ಯಾಸ್ ಕಂಪನಿಯ ಡೀಲರ್ ಶಿಪ್ ಕೊಡಿಸುವ ನೀಡಿ ಹೊಸಪೇಟೆಯ ಐಟಿಐ ಸಂಸ್ಥೆಯೊಂದರ ನಿವೃತ್ತ ಪ್ರಾಂಶುಪಾಲರೊಬ್ಬರಿಗೆ (61) ರೂ.45 ಲಕ್ಷಗಳ ವಂಚನೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ನಾಗೇಂದ್ರಪ್ಪ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ಈ ಸಂಬಂಧ ನಾಗೇಂದ್ರಪ್ಪ ಅವರು ಸೆಪ್ಟೆಂಬರ್ 30 ರಂದು ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ದೂರ ಬೆನ್ನಲ್ಲೇ ಪೊಲೀಸರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ 2008 ಮತ್ತು ಐಪಿಸಿ ಸೆಕ್ಷನ್ 420 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಖಾಸಗಿ ಗ್ಯಾಸ್ ಕಂಪನಿಯ ಡೀಲರ್ ಶಿಪ್ ಕುರಿತು ಆನ್ ಲೈನ್ ನಲ್ಲಿ ಹುಡುಕಾಟ ನಡೆಸಿದ್ದೆ. ಈ ವೇಳೆ ಮುಂಬೈನಲ್ಲಿರುವ ಗೋ ಗ್ಯಾಸ್ ಕಂಪನಿಯ ಲಿಂಕ್ ಸಿಕ್ಕಿತ್ತು. ಕರ್ನಾಟಕದಲ್ಲಿ ಡೀಲರ್ ಶಿಪ್ ಬಗ್ಗೆ ತಿಳಿದುಕೊಂಡು ಹುಡುಕಾಟ ನಡೆಸಿದಾಗ ದೂರವಾಣಿ ಸಂಖ್ಯೆಯೊಂದು ಆಗಸ್ಟ್ 21ರಂದು ದೊರೆತಿತ್ತು. ಆ ಸಂಖ್ಯೆಯನ್ನು ಸಂಪರ್ಕಿಸಿದಾಗ ಮುಂಬೈನಿಂದ ಶಶಿಕಾಂತ್ ತಿವಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ, ನನ್ನನ್ನು ನಂಬಿಸಿ, ಎನ್ಒಸಿ ಪಡೆಯಲು ಗೂಗಲ್ ಪೇ ಹಾಗೂ ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡುವಂತೆ ತಿಳಿಸಿದ. ಇದೇ ರೀತಿ ಪದೇ ಪದೇ ಫೋನ್ ಮಾಡಿ ಹಣ ವರ್ಗಾಯಿಸುವಂತೆ ಕೇಳುತ್ತಿದ್ದರು.

ಪ್ರತೀ ಬಾರಿ ಹಣ ಕೇಳಿದಾಗಲೂ ಇದೇ ಕೊನೆ ಬಾರಿ ಎಂದು ಭರವಸೆ ನೀಡುತ್ತಿದ್ದರು. ಸೆ.22ರಂದು ಅಂತಿಮ ಕಂತು ಎಂದು ಹೇಳಿ ರೂ.5 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದರು. ಇದಾದ ಬಳಿಕ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಪೋನ್ ಸ್ವಿಚ್ ಆಫ್ ಬಂದಿತ್ತು. ಒಂದು ವಾರದಿಂದ ಸಂಪರ್ಕಿಸಲು ಪ್ರಯತ್ನಿಸದೆ. ಆದರೂ ಸಾಧ್ಯವಾಗಲಿಲ್ಲ. ಬಳಿಕ ಮೋಸ ಹೋದೆನೆಂಬುದು ಅರಿವಾಯಿತು. ನಂತರ ಪೊಲೀಸರನ್ನು ಸಂಪರ್ಕಿಸಿದೆ. ವಹಿವಾಟುಗಳಿಗೆ ಬಳಸಿದ ಬ್ಯಾಂಕ್ ಖಾತೆ ಸಂಖ್ಯೆಯ ಮೂಲಕ ಕಳ್ಳರನ್ನು ಪತ್ತೆ ಹಚ್ಚುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆಂದು ನಾಗೇಂದ್ರಪ್ಪ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com