ಬೆಂಗಳೂರು: ಆನ್'ಲೈನ್'ನಲ್ಲಿ ವಿದ್ಯುತ್ ಬಿಲ್ ಪಾವತಿಗೆ ಸಹಾಯ ಮಾಡುವ ನೆಪದಲ್ಲಿ ಎಂಬಿಎ ವಿದ್ಯಾರ್ಥಿಗೆ 5 ಲಕ್ಷ ರೂ. ವಂಚನೆ!

ಆನ್​ಲೈನ್​ನಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಲು ಸಹಾಯ ಮಾಡುವ ನೆಪದಲ್ಲಿ ಸೈಬರ್ ವಂಚಕನೊಬ್ಬ ಎಂಬಿಎ ವಿದ್ಯಾರ್ಥಿಗೆ 5 ಲಕ್ಷ ರೂ. ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆನ್​ಲೈನ್​ನಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಲು ಸಹಾಯ ಮಾಡುವ ನೆಪದಲ್ಲಿ ಸೈಬರ್ ವಂಚಕನೊಬ್ಬ ಎಂಬಿಎ ವಿದ್ಯಾರ್ಥಿಗೆ 5 ಲಕ್ಷ ರೂ. ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಒಡಿಶಾ ಮೂಲದ ಪ್ರಿಯಾ (ಹೆಸರು ಬದಲಿಸಲಾಗಿದೆ) ಹಣ ಕಳೆದುಕೊಂಡ ವಿದ್ಯಾರ್ಥಿಯಾಗಿದ್ದಾರೆ. ಯುವತಿ ಅಮೃತಹಳ್ಳಿಯ 4ನೇ ಕ್ರಾಸ್‌ನಲ್ಲಿರುವ ಮನೆಯಲ್ಲಿದ್ದು, ಶನಿವಾರ ಸಂಜೆ 5.16ರ ಸುಮಾರಿಗೆ ಆರೋಪಿಗಳು ಮೊಬೈಲ್ ಫೋನ್'ಗ ಸಂದೇಶ ಕಳುಹಿಸಿದ್ದಾರೆ. ಬಿಲ್ ಪಾವತಿಸದಿದ್ದಲ್ಲಿ ಒಂದು ಗಂಟೆಯೊಳಗೆ ವಿದ್ಯುತ್ ಕಡಿತಗೊಳಿಸುವುದಾಗಿ ಸಂದೇಶದಲ್ಲಿ ಹೇಳಲಾಗಿದ್ದು, ಕಸ್ಟಮರ್ ಕೇರ್ ನಂಬರ್ ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಸಂದೇಶ ನೋಡಿರುವ ಪ್ರಿಯಾ ಅವರು ಮನೆಯ ರೂ.1,585 ವಿದ್ಯುತ್ ಬಿಲ್ ಪಾವತಿ ಮಾಡಿದಿರುವ ಹಿನ್ನೆಲೆಯಲ್ಲಿ, ಗಾಬರಿಗೊಂಡಿದ್ದಾನೆ. ಕೂಡಲೇ ಕಸ್ಟಮರ್ ಕೇರ್ ನ್ನು ಸಂಪರ್ಕಿಸಿದ್ದೆ. ಈ ವೇಳೆ ಆರೋಪಿಗಳು ಅಪ್ಲಿಕೇಶನ್  ವೊಂದನ್ನು ಡೌನ್ ಲೋಡ್ ಮಾಡುವಂತೆ ತಿಳಿಸಿದ್ದರು. ಆ್ಯಪ್ ಲಿಂಕ್ ಕಳುಹಿಸಿದ್ದರು. ಲಿಂಕ್ ಕ್ಲಿಕ್ ಮಾಡಿದಾಗ, ವಿವರಗಳನ್ನು ಭರ್ತಿ ಮಾಡುವಂತೆ ತೋರಿಸಿತ್ತು. ಆ್ಯಪ್ ಸ್ಕ್ರೀನ್-ಮಿರರಿಂಗ್ ಆ್ಯಪ್ ಆಗಿದ್ದು, ತಿಳಿಯದೆಯೇ ಫೋನ್ ನಿಯಂತ್ರಿಸಲು ಆರೋಪಿಗಳಿಗೆ ಅನುಮತಿ ನೀಡಿದಂತಾಗಿತ್ತು. ಈ ವೇಳೆ ಮೊಬೈಲ್'ಗೆ ಬಂದ ಒಟಿಸಿ ಬಳಿಸಿ ಆರೋಪಿಗಳು ನನ್ನ ಉಳಿತಾಯ ಖಾತೆಯಲ್ಲಿದ್ದ ರೂ.4,99,986ಗಳನ್ನು ದೋಚಿದ್ದಾರೆ. ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡ ಸಂದೇಶ ಬಂದಿತ್ತು. ಇದನ್ನು ಗಮನಿಸಿದ ಕೂಡಲೇ ಫೋನ್ ಕಡಿತಗೊಳಿಸಿದ್ದೆ. ಖಾತೆಯಲ್ಲಿದ್ದ ಇನ್ನುಳಿದ ಹಣವನ್ನು ಬೇರೆ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದೆ ಎಂದು ಪ್ರಿಯಾ ಅವರು ಹೇಳಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳನ್ನು ಪಶ್ಚಿಮ ಬಂಗಾಳದಲ್ಲಿ ಪತ್ತೆ ಮಾಡಿದ್ದು, ಶೀಘ್ರದಲ್ಲೇ ಬಂಧನಕ್ಕೊಳಪಡಿಸುವ ಭರವಸೆಯನ್ನು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com