ತನ್ನಿಂದ ದೂರಾಗುತ್ತಿದ್ದಾಳೆಂದು ಪ್ರೇಯಸಿಗೆ ರಾಡಲ್ಲಿ ಹೊಡೆದ ಪ್ರೇಮಿ: ಬಂಧನ
ತನ್ನಿಂದ ದೂರಾಗೂತ್ತಿದ್ದಾಳೆಂದು ಭಾವಿಸಿ ಪ್ರಿಯತಮೆಯ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದ್ದ ಪ್ರೇಮಿಯೊಬ್ಬನನ್ನು ಮೈಕೋ ಲೇಔಟ್ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
Published: 06th August 2023 11:03 AM | Last Updated: 06th August 2023 01:29 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ತನ್ನಿಂದ ದೂರಾಗೂತ್ತಿದ್ದಾಳೆಂದು ಭಾವಿಸಿ ಪ್ರಿಯತಮೆಯ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದ್ದ ಪ್ರೇಮಿಯೊಬ್ಬನನ್ನು ಮೈಕೋ ಲೇಔಟ್ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ರವಿ ಕುಮಾರ್ (28) ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. ಕಳೆದ ಒಂದು ವರ್ಷದಿಂದ ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಅದೇ ಕಂಪನಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಇತ್ತೀಚೆಗೆ ಬೇರೆ ಕಂಪನಿಗೆ ಸೇರಿಕೊಂಡಿದ್ದ ಯುವತಿ ರವಿಯ ಕರೆಗಳಿಗೆ ಸ್ಪಂದಿಸುತ್ತಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಭೇಟೆ; ಅಂತಾರಾಜ್ಯ ಕಳ್ಳರ ಗ್ಯಾಂಗ್ ಬಂಧನ, 76 ಲಕ್ಷ ಮೌಲ್ಯದ ಚಿನ್ನ ವಶಕ್ಕೆ
ಇದರಿಂದ ಕೋಪಗೊಂಡಿದ್ದ ರವಿಗೆ ಯುವತಿಯ ಮೇಲೆ ಅನುಮಾನ ಮೂಡಿತ್ತು. ಇದರಿಂದ ಪ್ಲಾನ್ ಮಾಡಿ ಆಗಸ್ಟ್ 2ರಂದು ಪ್ರೇಯಸಿಯನ್ನ ತನ್ನ ಪಿಜಿ ಬಳಿ ಕರೆಸಿಕೊಂಡಿದ್ದಾನೆ. ಈ ವೇಳೆ ಕಬ್ಬಿಣದ ರಾಡ್‍ನಿಂದ ಯುವತಿಯ ತಲೆಯ ಮೇಲೆ ಹಲ್ಲೆ ಮಾಡಿದ್ದಾನೆ. ಕೂಡಲೇ ಯುವತಿಯನ್ನು ಸ್ಥಳೀಯರು ನಿಮ್ಹಾಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಘಟನೆ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಆರೋಪಿ ರವಿ ಕುಮಾರ್‌ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.