ಅವಧಿಗೂ ಮೊದಲೇ ರಾಜ್ಯದಲ್ಲಿ ಬೇಸಿಗೆ ಝಳ; ತಾಪಮಾನ ದಿಢೀರ್ ಏರಿಕೆ

ಕರ್ನಾಟಕದಲ್ಲಿ ಅವಧಿಗೂ ಮೊದಲೇ ಬೇಸಿಗೆ ಕಾಲಿಡಲಿದ್ದು, ತಾಪಮಾನ ದಿಢೀರ್ ಏರಿಕೆಯಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಬೇಸಿಗೆ
ಬೇಸಿಗೆ

ಬೆಂಗಳೂರು: ಕರ್ನಾಟಕದಲ್ಲಿ ಅವಧಿಗೂ ಮೊದಲೇ ಬೇಸಿಗೆ ಕಾಲಿಡಲಿದ್ದು, ತಾಪಮಾನ ದಿಢೀರ್ ಏರಿಕೆಯಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಚಳಿಗಾಲದ ಅಂತ್ಯದ ನಡುವೆಯೇ ರಾಜ್ಯಕ್ಕೆ ಬೇಸಿಗೆ ಝಳ ಕಾಲಿಟ್ಟಿದ್ದು, ಅವಧಿಗೂ ಮೊದಲೇ ರಾಜ್ಯದಲ್ಲಿ ಬೇಸಿಗೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದೆ. ರಾಜ್ಯದಲ್ಲಿ ಸಾಮಾನ್ಯ ಮಾರ್ಚ್ 1 ರ ಬದಲಿಗೆ ಫೆಬ್ರವರಿ 24 ರಿಂದಲೇ ಬೇಸಿಗೆ ಆರಂಭವಾಗಲಿದ್ದು, ತಾಪಮಾನ ದಿಢೀರ್ ಏರಿಕೆ ಕಾಣಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಇದು ಮುಂದಿನ ದಿನಗಳಲ್ಲಿ ತಾಪಮಾನ ಏರಿಕೆಯೊಂದಿಗೆ ಶುಷ್ಕ ಹವಾಮಾನದ ಮುನ್ಸೂಚನೆ ನೀಡಿದೆ. ಉತ್ತರ ಮತ್ತು ವಾಯುವ್ಯ ಮಾರುತಗಳು ಬೆಚ್ಚಗಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿರುವ  ಹಿರಿಯ ಐಎಂಡಿ ಅಧಿಕಾರಿಯೊಬ್ಬರು, 'ಕರ್ನಾಟಕದ ಕೆಲವು ಭಾಗಗಳಲ್ಲಿ ಈಗಾಗಲೇ ಸಾಮಾನ್ಯ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಬೆಂಗಳೂರಿನ ವಿಷಯದಲ್ಲಿ, ತಾಪಮಾನವು ಸುಮಾರು 31-32 ಡಿಗ್ರಿ ಸೆಲ್ಸಿಯಸ್‌ನಲ್ಲಿದ್ದರೂ, ಸಾಪೇಕ್ಷ ಆರ್ದ್ರತೆಯ ಮಟ್ಟವು ಸುಮಾರು 20-35 ಪ್ರತಿಶತದಷ್ಟು ಇರುವುದರಿಂದ ನಾಗರಿಕರು ಶಾಖವನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ 7 ಮಿಮೀ ಸಾಮಾನ್ಯ ಮಳೆಯಾಗುತ್ತದೆ, ಆದರೆ ಈ ವರ್ಷ ಅದು ಸಂಭವಿಸಿಲ್ಲ. ಅಲ್ಲದೆ, ಮುಂದಿನ ಐದು ದಿನಗಳಲ್ಲಿ ಬೇಸಿಗೆಯ ಬಿಸಿಲಿನ ತಾಪ ಹೆಚ್ಚಲಿದೆ. ಮಳೆಯೂ ಇಲ್ಲ ಮತ್ತು ಮೋಡದ ರಚನೆಯೂ ಇಲ್ಲ. ತೇವಾಂಶದ ಸಹಭಾಗಿತ್ವವು ಸಹ ನಡೆಯುತ್ತಿದೆ, ಇದು ಮಳೆಯ ಸಾಧ್ಯತೆಯನ್ನು ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ, ಉತ್ತರ ಭಾರತದ ಭಾಗಗಳು ಫೆಬ್ರವರಿಯಲ್ಲಿ ಚಳಿಗಾಲದ ಚಳಿಯನ್ನು ಅನುಭವಿಸುತ್ತಲೇ ಇರುತ್ತವೆ, ಆದರೆ ತಾಪಮಾನವು ಅಲ್ಲಿಯೂ ಬೆಚ್ಚಗಾಗಲು ಪ್ರಾರಂಭಿಸಿದೆ ಮತ್ತು ಉತ್ತರ ಭಾರತದಿಂದ ಬೀಸುವ ಗಾಳಿಯು ಬೆಚ್ಚಗಿರುತ್ತದೆ. ಗಾಳಿಯ ದಿಕ್ಕಿನಲ್ಲಿ ಬದಲಾವಣೆ ಮತ್ತು ಸೈಕ್ಲೋನ್ ವಿರೋಧಿ ಪರಿಣಾಮವೂ ಇದಕ್ಕೆ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com