ಆ್ಯಸಿಡ್ ದಾಳಿಕೋರನನ್ನು ಪ್ರತಿನಿಧಿಸಲು ರಾಜ್ಯದ ವಕೀಲರ ನಿರಾಕರಣೆ: ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ಬೆಂಗಳೂರಿನಲ್ಲಿ ಸಂಚಲನ ಮೂಡಿಸಿದ್ದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ಪರ ವಕಾಲತ್ತು ವಹಿಸಲು ಯಾವುದೇ ವಕೀಲರು ಮುಂದಾಗದಿರುವುದು ಪ್ರಾಸಿಕ್ಯೂಷನ್‌ಗೆ ತಾಂತ್ರಿಕ ಅಡ್ಡಿಯಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಗುರುವಾರ ಹೇಳಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ಬೆಂಗಳೂರು: ಬೆಂಗಳೂರಿನಲ್ಲಿ ಸಂಚಲನ ಮೂಡಿಸಿದ್ದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ಪರ ವಕಾಲತ್ತು ವಹಿಸಲು ಯಾವುದೇ ವಕೀಲರು ಮುಂದಾಗದಿರುವುದು ಪ್ರಾಸಿಕ್ಯೂಷನ್‌ಗೆ ತಾಂತ್ರಿಕ ಅಡ್ಡಿಯಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಗುರುವಾರ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ, ಕಾನೂನಿನ ಪ್ರಕಾರ ಆರೋಪಿಯನ್ನು ಪ್ರತಿನಿಧಿಸದಿದ್ದರೆ ಮತ್ತು ಆತನಿಗೆ ವಕಾಲತ್ತು ವಹಿಸದಿದ್ದರೆ, ಪ್ರಕರಣವು ಮುಂದುವರಿಯುವುದಿಲ್ಲ ಮತ್ತು ಆದ್ದರಿಂದ ಆ್ಯಸಿಡ್ ದಾಳಿ ನಡೆಸಿದವರಿಗೆ ಜಾಮೀನು ಸಿಗುವುದಿಲ್ಲ. ಈ ತಾಂತ್ರಿಕ ತಡೆಯಿಂದಾಗಿ ಆಸಿಡ್ ದಾಳಿ ಪ್ರಕರಣ ನನೆಗುದಿಗೆ ಬಿದ್ದಿದೆ ಎಂದರು.

'ಒಬ್ಬ ವಕೀಲರು ಆರೋಪಿಯನ್ನು ಪ್ರತಿನಿಧಿಸಿದರೆ, ನ್ಯಾಯಾಲಯದ ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತವೆ ಮತ್ತು ಆತನಿಗೆ ಶೀಘ್ರವೇ ಶಿಕ್ಷೆಯಾಗುತ್ತದೆ' ಎಂದು ಪೊಲೀಸ್ ಆಯುಕ್ತರು ಹೇಳಿದರು.
2022ರ ಏಪ್ರಿಲ್ 28ರಂದು ಈ ಘಟನೆ ನಡೆದಿದ್ದು, ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಯುವತಿ ಕೆಲಸ ಮಾಡುವ ಸ್ಥಳದ ಬಳಿ ಆಟೋರಿಕ್ಷಾದಲ್ಲಿ ಕಾದು ಕುಳಿತಿದ್ದ ಆರೋಪಿ ನಾಗೇಶ್, ಆಕೆಯ ಬೆನ್ನಟ್ಟಿ ಆಕೆಯ ಮೇಲೆ ಆ್ಯಸಿಡ್ ಸುರಿದಿದ್ದರಿಂದ ಯುವತಿಗೆ ಶೇ.35ರಷ್ಟು ಸುಟ್ಟ ಗಾಯಗಳಾಗಿವೆ.

ಆರೋಪಿ ಸಂತ್ರಸ್ತೆಯೊಂದಿಗೆ ಅದೇ ಶಾಲೆಯಲ್ಲಿ 10ನೇ ತರಗತಿ ಓದಿದ್ದ. ಆರೋಪಿಯ ಪ್ರೇಮವನ್ನು ತಿರಸ್ಕರಿಸಿದ ಬಳಿಕ ಪಾಗಲ್ ಪ್ರೇಮಿಯಾಗಿ ಮಾರ್ಪಟ್ಟು, ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 770 ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

23 ವರ್ಷದ ಉದ್ಯೋಗಿಯಾಗಿದ್ದ ಸಂತ್ರಸ್ತೆ, ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಳು.

13ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಪೊಲೀಸರು 92 ಸಾಕ್ಷಿಗಳನ್ನು ಹೆಸರಿಸಿದ್ದಾರೆ. ತನಿಖಾಧಿಕಾರಿಗಳು ಐಪಿಸಿ ಸೆಕ್ಷನ್ 164 ರ ಅಡಿಯಲ್ಲಿ ತೆಗೆದುಕೊಳ್ಳಲಾದ ಇಬ್ಬರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳನ್ನು ಸಹ ದಾಖಲಿಸಿದ್ದಾರೆ.

ದಾಳಿ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲು ಎಲ್ಲಾ ಕಡೆಯಿಂದ ಒತ್ತಡ ಹೆಚ್ಚಾದ ಕಾರಣ ಆತನನ್ನು ಬಂಧಿಸಲು ರಾಜ್ಯ ಪೊಲೀಸರು 10 ವಿಶೇಷ ತಂಡಗಳನ್ನು ರಚಿಸಿದ್ದರು. ಅಂತಿಮವಾಗಿ, 16 ದಿನಗಳ ನಂತರ ಕಾಮಾಕ್ಷಿಪಾಳ್ಯ ಪೊಲೀಸರು ಆತನನ್ನು ತಿರುವಣ್ಣಾಮಲೈ ನಗರದಲ್ಲಿ ಬಂಧಿಸಿದರು.
ಆರೋಪಿ ನಾಗೇಶ್ ನಾಪತ್ತೆಯಾಗಿದ್ದು, ಸ್ವಾಮೀಜಿಯ ವೇಷ ಧರಿಸಿ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು.

ಪೊಲೀಸರು ಕೂಡ ಆರೋಪಿಯ ಆಶ್ರಮಕ್ಕೆ ಭಕ್ತರಂತೆ ತೆರಳಿ, ಗಮನಿಸಿದ್ದಾರೆ. ಸತತ ಪರಿಶ್ರಮದ ಬಳಿಕ ಆತನ ಸುಳಿವು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಿಕ್ಕಿಬಿದ್ದ ನಂತರ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com