ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ವಿವಾದ: ಬಿಬಿಎಂಪಿ, ಗುತ್ತಿಗೆದಾರರು-ಸರ್ಕಾರದ ನಡುವೆ ನಂಟು; ಸಂಸದ ಡಿಕೆ ಸುರೇಶ್ ಆರೋಪ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ವಿವಾದಿತ ಹೊಸಕೆರೆಹಳ್ಳಿ ಕೆರೆ ರಸ್ತೆ ನಿರ್ಮಾಣ ಯೋಜನೆಯಲ್ಲಿ  ಬಿಬಿಎಂಪಿ, ಗುತ್ತಿಗೆದಾರರು-ಸರ್ಕಾರದ ನಡುವೆ ನಂಟಿದೆ ಎಂದು ಸಂಸದ ಡಿಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.
ಸಂಸದ ಡಿಕೆ ಸುರೇಶ್ ಮತ್ತು ಹೊಸಕೆರೆಹಳ್ಳಿ ಕೆರೆ ರಸ್ತೆ ನಿರ್ಮಾಣ
ಸಂಸದ ಡಿಕೆ ಸುರೇಶ್ ಮತ್ತು ಹೊಸಕೆರೆಹಳ್ಳಿ ಕೆರೆ ರಸ್ತೆ ನಿರ್ಮಾಣ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ವಿವಾದಿತ ಹೊಸಕೆರೆಹಳ್ಳಿ ಕೆರೆ ರಸ್ತೆ ನಿರ್ಮಾಣ ಯೋಜನೆಯಲ್ಲಿ  ಬಿಬಿಎಂಪಿ, ಗುತ್ತಿಗೆದಾರರು-ಸರ್ಕಾರದ ನಡುವೆ ನಂಟಿದೆ ಎಂದು ಸಂಸದ ಡಿಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.

ವಿವಾದಿತ ಹೊಸಕೆರೆಹಳ್ಳಿ ಕೆರೆ ರಸ್ತೆ ನಿರ್ಮಾಣ ಯೋಜನೆಯನ್ನು ಬಿಬಿಎಂಪಿ ಹಿಂಪಡೆದ ಒಂದು ವಾರದ ನಂತರ, ಸ್ಥಳೀಯ ನಿವಾಸಿಗಳು ಮತ್ತು ಕಾರ್ಯಕರ್ತರು ಸಂಸದ ಡಿಕೆ ಸುರೇಶ್ ಅವರ ಮಧ್ಯಸ್ಥಿಕೆಗೆ ಕೋರಿ ಅವರನ್ನು ಭೇಟಿ ಮಾಡಿ ಚರ್ಚೆ ನಡಸಿದ ಬಳಿಕ ಸಂಸದ ಡಿಕೆ ಸುರೇಶ್ ಈ ಆರೋಪ ಮಾಡಿದ್ದಾರೆ. ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಸಂಸದ ಡಿಕೆ ಸುರೇಶ್, 'ರಿಯಲ್ ಎಸ್ಟೇಟ್ ಯೋಜನೆ ಮತ್ತು ಲೇಔಟ್ ಅನ್ನು ಬೆಂಬಲಿಸಲು ಬಿಬಿಎಂಪಿ, ಗುತ್ತಿಗೆದಾರರು ಮತ್ತು ಸರ್ಕಾರದ ನಡುವೆ ನಂಟು ಇದೆ ಎಂದು ಆರೋಪಿಸಿದರು.

“ಉದ್ಯಾನದ ನೆಪದಲ್ಲಿ ಅವರು ಕೆರೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದರು. ಯೋಜನೆ ಕುರಿತು ವಿವರಣೆ ನೀಡಲು ಬಿಬಿಎಂಪಿ ಕೆರೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳನ್ನು ಕರೆಸಿದ್ದೆ, ಆದರೆ ಅವರು ಬರಲು ನಿರಾಕರಿಸಿದರು. ಕೆರೆಗಳ ಯಾವುದೇ ಕಾಮಗಾರಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯಬೇಕು. ಆದರೆ ಬಿಬಿಎಂಪಿ ಈ ಅನುಮತಿ ಪಡೆದಿರಲಿಲ್ಲ. ಅವರಿಂದ ವಿವರಣೆ ಕೇಳುತ್ತೇನೆ' ಎಂದು ಸುರೇಶ್ ಹೇಳಿದ್ದಾರೆ.

ಮುನಿರತ್ನ ವಿರುದ್ಧ ಸುರೇಶ್ ಪರೋಕ್ಷ ಆರೋಪ
ಇದೇ ವೇಳೆ ಹೆಸರು ಹೇಳದೇ ಡಿಕೆ ಸುರೇಶ್ ಅವರು ಶಾಸಕ ಮುನಿರತ್ನ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು, ಜಲಮಂಡಳಿ ರಕ್ಷಣೆಗೆ ದೂರು ದಾಖಲಿಸುವುದಾಗಿ ಎಚ್ಚರಿಸಿದರು. “ಅಧಿಕಾರಿಗಳು ಉಲ್ಲೇಖಿಸಿದ ಕೆಲಸ (ಡಿಸಿಲ್ಟಿಂಗ್) ಈಗಾಗಲೇ ಮುಗಿದಿದೆ ಮತ್ತು ಬಿಲ್ ಕೂಡ ಏರಿಸಲಾಗಿದೆ. ಮತ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ' ಎಂದು ಆರೋಪಿಸಿದರು.

ಇನ್ನು ಬಿಬಿಎಂಪಿಯ ಲೇಕ್ ವಿಂಗ್‌ನ ಮುಖ್ಯ ಇಂಜಿನಿಯರ್ ವಿಜಯಕುಮಾರ್ ಹರಿದಾಸ್ ಮಾತನಾಡಿ, ತಮ್ಮ ಆರೋಗ್ಯ ಸರಿಇಲ್ಲದಿದ್ದರಿಂದ ಸಂಸದ ಸುರೇಶ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ವಿಶೇಷ ಆಯುಕ್ತ ರವೀಂದ್ರ ಮಾತನಾಡಿ, 'ಹೂಳು ತೆಗೆಯುವ ಕಾಮಗಾರಿಯಿಂದಾಗಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಸಂರಕ್ಷಣಾಧಿಕಾರಿ ಜೋಸೆಫ್ ಹೂವರ್ ಮಾತನಾಡಿ, 'ಗದ್ದಲದ ನಂತರ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು. '2017 ರಲ್ಲಿ ಹೂಳು ತೆಗೆಯಲು ನನ್ನ ಬಳಿ ದಾಖಲೆಗಳಿವೆ. ನನಗೆ ತಿಳಿದಿರುವಂತೆ, ಕೆರೆಯನ್ನು ಎರಡು ಭಾಗಗಳಾಗಿ ವಿಭಜಿಸುವ ಯೋಜನೆ ಇತ್ತು, ಇದಕ್ಕಾಗಿ ರಸ್ತೆಯನ್ನು ಹಾಕಲಾಗುತ್ತಿದೆ. ಕೆರೆಯ ಅರ್ಧ ಭಾಗ ಪದ್ಮನಾಭ ನಗರ ವಿಧಾನಸಭೆಗೆ ಮತ್ತು ಉಳಿದ ಭಾಗ ಆರ್‌ಆರ್‌ನಗರಕ್ಕೆ ಹೋಗುತ್ತದೆ. ಪ್ರತಿಭಟನೆಯಿಂದಾಗಿ ಪಾಲಿಕೆ ಕಾಮಗಾರಿ ರದ್ದುಪಡಿಸಿ ಹೂಳು ತೆಗೆಸಲಾಗಿದೆ. ಅವರು ನಿಗದಿತ ಸಮಯದಲ್ಲಿ ಹೂಳು ತೆರವುಗೊಳಿಸಲು ವಿಫಲವಾದರೆ, ಮತ್ತೊಂದು ಸುತ್ತಿನಲ್ಲಿ ಹೂಳು ತೆಗೆಯುವ ಕೆಲಸ ನಡೆಸಲಾಗುತ್ತದೆ ಎಂದು ಹೂವರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com