ದಕ್ಷಿಣ ಕನ್ನಡ: ಹಮಾಸ್ ಬಂಡುಕೋರರ ವಿಜಯಕ್ಕಾಗಿ ಪ್ರಾರ್ಥನೆಗೆ ಕರೆ ನೀಡಿದ ವ್ಯಕ್ತಿ, ವಿಡಿಯೋ ವೈರಲ್

ಇಸ್ರೇಲ್ ವಿರುದ್ಧ ಹಮಾಸ್‌ ಬಂಡುಕೋರರ ಗೆಲುವಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ವ್ಯಕ್ತಿಯೊಬ್ಬರು ವಿಶೇಷ ಪ್ರಾರ್ಥನೆಗೆ ಒತ್ತಾಯಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.
ಹಮಾಸ್ ಬಂಡುಕೋರರ ವಿಜಯಕ್ಕಾಗಿ ಪ್ರಾರ್ಥನೆಗೆ ಕರೆ ನೀಡಿದ ವ್ಯಕ್ತಿ
ಹಮಾಸ್ ಬಂಡುಕೋರರ ವಿಜಯಕ್ಕಾಗಿ ಪ್ರಾರ್ಥನೆಗೆ ಕರೆ ನೀಡಿದ ವ್ಯಕ್ತಿ

ದಕ್ಷಿಣ ಕನ್ನಡ: ಇಸ್ರೇಲ್ ವಿರುದ್ಧ ಹಮಾಸ್‌ ಬಂಡುಕೋರರ ಗೆಲುವಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ವ್ಯಕ್ತಿಯೊಬ್ಬರು ವಿಶೇಷ ಪ್ರಾರ್ಥನೆಗೆ ಒತ್ತಾಯಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

30 ಸೆಕೆಂಡುಗಳ ವೀಡಿಯೊದಲ್ಲಿ, ತನ್ನನ್ನು ತಾನು ಮಂಗಳೂರಿನ ಖಬರಸ್ತಾನ್‌‌ನ ಪ್ರೇಮಿ ಸಂಘದ ಸದಸ್ಯ ಜಾಕೀರ್ ಎಂದು ಗುರುತಿಸಿಕೊಂಡಿರುವ ವ್ಯಕ್ತಿ, ಪ್ಯಾಲೆಸ್ಟೀನ್, ಗಾಜಾ ನಿವಾಸಿಗಳು ಮತ್ತು ದೇಶಭಕ್ತ ಹಮಾಸ್ ಸೈನಿಕರಿಗಾಗಿ ತನ್ನ ಗುಂಪಿನ ಸದಸ್ಯರು ‘ದುವಾ’ (ವಿಶೇಷ ಪ್ರಾರ್ಥನೆ) ನಡೆಸುವಂತೆ ಮನವಿ ಮಾಡಿದ್ದಾನೆ.

ತಾಲಿಬಾನಿಯಂತೆ ವೇಷ ಧರಿಸಿರುವ ಜಾಕಿರ್, ಧಾರ್ಮಿಕ ಗ್ರಂಥವನ್ನು ಹಿಡಿದಿರುವುದನ್ನು ಕಾಣಬಹುದು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೋಮು ಸೂಕ್ಷ್ಮ ಪ್ರದೇಶವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಆತಂಕ ಮೂಡಿಸಿದೆ.

ಜಾಕಿರ್ ತಾನು ಮಂಗಳೂರು ನಗರದ ಬಂದರ್ ಪ್ರದೇಶದ ನಿವಾಸಿ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಈ ಬೆಳವಣಿಗೆ ಬಗ್ಗೆ ಪೊಲೀಸರು ಇನ್ನೂ ಪ್ರತಿಕ್ರಿಯಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com