
ಬೆಂಗಳೂರು: 2 ಪ್ರತ್ಯೇಕ ಪ್ರಕರಣಗಳಲ್ಲಿ ನಗರ ಪೊಲೀಸರು ಎರಡು ಆಟೋ ರಿಕ್ಷಾ ಸೇರಿದಂತೆ 30 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ,
ನಗರದಲ್ಲಿ ನಡೆದಿದ್ದ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವನಹಳ್ಳಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು. ಈ ವೇಳೆ ಕಳ್ಳತನವಾಗಿದ್ದ ಬೈಕ್ ನೊಂದಿಗೆ ರಾಜಗೋಪಾಲ್ ಪತ್ತೆಯಾಗಿದ್ದ. ಇದರ ಅನ್ವಯ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದರು.
ಈತ ಚಿಕ್ಕಬಳ್ಳಾಪುರ ನಿವಾಸಿಯಾಗಿದ್ದು, ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದ. ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರೆ ವಾಹನಗಳ ಕುರಿತು ಮಾಹಿತಿ ನೀಡಿದ್ದ.
ಕೊಡಿಮಂಚೇನಹಳ್ಳಿ ಬಳಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಬೈಕ್‌ಗಳನ್ನು ಬಚ್ಚಿಟ್ಟಿರುವುದಾಗಿ ಹೇಳಿದ್ದ. ಇದರಂತೆ ಪೊಲೀಸರು .9 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ ಬೆಂಗಳೂರು ಮತ್ತು ತುಮಕೂರಿನಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ.
ಮತ್ತೊಂದು ಘಟನೆಯಲ್ಲಿ ಬೈಕ್ ಮತ್ತು ಆಟೋ ರಿಕ್ಷಾಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ 38 ವರ್ಷದ ಮೆಕ್ಯಾನಿಕ್ ನನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.
ಈತನಿಂದ 17.50 ಲಕ್ಷ ಮೌಲ್ಯದ 15 ದ್ವಿಚಕ್ರ ವಾಹನಗಳು ಮತ್ತು ಎರಡು ಆಟೋ ರಿಕ್ಷಾಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನರಸಾಪುರ ಲೇಔಟ್ ನಿವಾಸಿ ಸೈಯದ್ ಇರ್ಫಾನ್ ಎಂದು ಗುರುತಿಸಲಾಗಿದೆ.
ಇರ್ಫಾನ್ ಮನೆಗಳ ಹೊರಗೆ ನಿಲ್ಲಿಸಿದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್‌ಗಳನ್ನು ಮುರಿದು ಕಳ್ಳತನ ಮಾಡುತ್ತಿದ್ದ ಪೊಲೀಸರು ತಿಳಿಸಿದ್ದಾರೆ.
Advertisement