ಬೆಂಗಳೂರು: ಬೈಕ್ ಅಪಘಾತದ ನೆಪದಲ್ಲಿ ಜನರಿಗೆ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಜಯನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಮೈಸೂರಿನ ರಾಜೇಂಗ್ರ ನಗರದ ನಿವಾಸಿ ಜಮೀಲ್ ಖಾನ್ ಅಲಿಯಾಸ್ ಸಲೀಂ ಬಂಧಿತ ಆರೋಪಿ. ಆರೋಪಿಯಿಂದ ರೂ.40,000 ಹಣ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ.
ರಸ್ತೆಯಲ್ಲಿ ಕಾರುಗಳನ್ನು ಅಡ್ಡಗಟ್ಟುತ್ತಿದ್ದ ಆರೋಪಿ, ನನ್ನ ಬೈಕ್ ಜಖಂಡಗೊಂಡಿದೆ ಎಂದು ಗಲಾಟೆ ಮಾಡಿ, ಹಣ ಸುಲಿಗೆ ಮಾಡುತ್ತಿದ್ದ. ಇತ್ತೀಚೆಗೆ ಜಯನಗರ 4ನೇ ಹಂತದ ಕೂಲ್ ಜಾಯಿಂಟ್ ಬಳಿ ಕಾರ್ತಿಕ್ ಅವರನ್ನು ಜಮೀಲ್ ಅಡ್ಡಗಟ್ಟಿದ್ದ. ಆಗ ನನ್ನ ಬೈಕ್'ಗೆ ನಿಮ್ಮ ಕಾರು ಡಿಕ್ಕಿಯಾಗಿದೆ ಎಂದು ಗಲಾಟೆ ಮಾಡಿದ್ದ.
ಕೊನೆಗೆ ಕಾರ್ತಿಕ್ ರನ್ನು ಬೆದರಿಸಿ ಅವರಿಂದ ಆನ್'ಲೈನ್ ಮೂಲಕ ತನ್ನ ಖಾತೆಗೆ ರೂ.30,000 ವರ್ಗಾಯಿಸಿಕೊಂಡಿದ್ದಲ್ಲದೆ, ರೂ.300 ಕಸಿದು ಪರಾರಿಯಾಗಿದ್ದ. ಈ ಸಂಬಂಧ ಕಾರ್ತಿಕ್ ಅವರು ನೀಡಿದ ದೂರು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿ ವಿರುದ್ಧ ಒಟ್ಟು 17 ಕೇಸ್ ಗಳಿದ್ದು, ಬನಶಂಕರಿಯಲ್ಲೂ ಇದೇ ರೀತಿಯ ಪ್ರಕರಣವೊಂದು ದಾಖಲಾಗಿರುವುದು ಬೆಳಕಿಗೆ ಬಂದಿದೆ.
Advertisement