MRP ಉಲ್ಲಂಘನೆ: 6,356 ಮದ್ಯದಂಗಡಿಗಳಿಂದ 10.39 ಕೋಟಿ ರೂ. ದಂಡ ವಸೂಲಿ

ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 36 ರ ಅಡಿಯಲ್ಲಿ ದಂಡದ ಜೊತೆಗೆ, ಅಬಕಾರಿ ಇಲಾಖೆಯು 2021-22, 2022-23 ಮತ್ತು 2023-24 ರ ಆರ್ಥಿಕ ವರ್ಷದಲ್ಲಿ 121 ಅಂಗಡಿಗಳ ಪರವಾನಗಿಯನ್ನು ಅಮಾನತುಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಿಗದಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ ಕಾರಣಕ್ಕಾಗಿ ಅಬಕಾರಿ ಇಲಾಖೆ ಮೂರು ವರ್ಷದಲ್ಲಿ ರಾಜ್ಯಾದ್ಯಂತ 6,356 ಮದ್ಯದಂಗಡಿಗಳಿಂದ 10.39 ಕೋಟಿ ರೂ. ದಂಡ ಸಂಗ್ರಹಿಸಿದೆ.

ಅಬಕಾರಿ ಕಾಯಿದೆಯ ಪ್ರಕಾರ, CL-2 (ಚಿಲ್ಲರೆ ಅಂಗಡಿಗಳು) ಮತ್ತು CL-11C (MSIL ರಿಟೇಲ್ ಔಟ್‌ಲೆಟ್‌ಗಳು) MRP ನಲ್ಲಿ ಮದ್ಯವನ್ನು ಮಾರಾಟ ಮಾಡಬೇಕು, ಆದರೆ, ಪರವಾನಗಿದಾರರು ನಿಯಮ ಉಲ್ಲಂಘಿಸಿ, ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಅಬಕಾರಿ ಇಲಾಖೆ ಕ್ರಮ ಕೈಗೊಂಡಿದೆ.

ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 36 ರ ಅಡಿಯಲ್ಲಿ ದಂಡದ ಜೊತೆಗೆ, ಅಬಕಾರಿ ಇಲಾಖೆಯು 2021-22, 2022-23 ಮತ್ತು 2023-24 ರ ಆರ್ಥಿಕ ವರ್ಷದಲ್ಲಿ 121 ಅಂಗಡಿಗಳ ಪರವಾನಗಿಯನ್ನು ಅಮಾನತುಗೊಳಿಸಿದೆ.

ಕಳೆದ ಮೂರು ವರ್ಷಗಳಲ್ಲಿ ತುಮಕೂರು, ಕೋಲಾರ, ವಿಜಯಪುರ, ಬಳ್ಳಾರಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಅತೀ ಹೆಚ್ಚು ಉಲ್ಲಂಘನೆಗಳು ಕಂಡುಬಂದಿವೆ.

ಎಂಎಸ್‌ಐಎಲ್ ಅಂಗಡಿಗಳಲ್ಲಿ ಆರನೇ ಒಂದು ಭಾಗದಷ್ಟು ಉಲ್ಲಂಘನೆಗಳು ಕಂಡುಬಂದಿವೆ, ಇದರಂತೆ 1,003 ಪ್ರಕರಣಗಳಲ್ಲಿ ಇಲಾಖೆಯು ರೂ 1.88 ಕೋಟಿ ದಂಡವನ್ನು ಸಂಗ್ರಹಿಸಿದೆ ಮತ್ತು 20 ಪರವಾನಗಿಗಳನ್ನು ಅಮಾನತುಗೊಳಿಸಿದೆ ಎಂದು ತಿಳಿದುಬಂದಿದೆ.

ಸಂಗ್ರಹ ಚಿತ್ರ
'ಎಣ್ಣೆ' ಪ್ರಿಯರಿಗೆ ಗುಡ್ ನ್ಯೂಸ್: ಜುಲೈ 1ರಿಂದ ದುಬಾರಿ ಮದ್ಯ ಕಡಿಮೆ ಬೆಲೆಗೆ ಲಭ್ಯ!

ಇತ್ತೀಚಿನ ವಿಧಾನಸಭೆ ಅಧಿವೇಶನದಲ್ಲಿ ಎಂಎಲ್‌ಸಿ ಐವನ್ ಡಿಸೋಜಾ ಅವರು ಪ್ರಶ್ನೆಗಳನ್ನು ಕೇಳಿದ್ದರು, ಇದರ ಬೆನ್ನಲ್ಲೇ ಸಚಿವ ಆರ್‌ಬಿ ತಿಮ್ಮಾಪುರ್ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಬೆಲೆ ಏರಿಕೆಯ ನಡುವೆಯೂ ರಾಜ್ಯದಲ್ಲಿ ಮದ್ಯ ಮಾರಾಟ ಹೆಚ್ಚಾಗಿರುವುದು ಈ ಅಂಕಿಅಂಶಗಳಿಂದ ತಿಳಿದುಬಂದಿದೆ,

2021-22ರಲ್ಲಿ 660.16 ಲಕ್ಷ ಬಾಕ್ಸ್‌ ಮದ್ಯ ಮಾರಾಟವಾಗಿದ್ದರೆ, 2022-23ರಲ್ಲಿ 698.46 ಲಕ್ಷ ಬಾಕ್ಸ್‌ಗಳು ಮತ್ತು 2023-24ರಲ್ಲಿ 705.53 ಲಕ್ಷ ಬಾಕ್ಸ್‌ಗಳು ಮಾರಾಟವಾಗಿವೆ.

ನೆರೆಯ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಆಮದು ಮಾಡಿಕೊಳ್ಳುವ ಮದ್ಯದ ಬೆಲೆ ಶೇ 40ರಷ್ಟು ಹೆಚ್ಚಿದ್ದು, ಮಾರಾಟ ಕಡಿಮೆಯಾಗಿದೆ. ಆದರೆ, ಆಮದು ಮಾಡಿಕೊಳ್ಳುವ ಮದ್ಯವನ್ನು ನೆರೆಯ ರಾಜ್ಯಗಳಿಗೆ ಸರಿಸಮನಾಗಿ ತರಲು ರಾಜ್ಯ ಸರ್ಕಾರವು ಬೆಲೆಗಳನ್ನು ತರ್ಕಬದ್ಧಗೊಳಿಸಲು ಮುಂದಾಗಿದ್ದು, ಇದರಿಂದ ಮಾರಾಟ ಪ್ರಮಾಣ ಕೂಡ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com