ಬೆಂಗಳೂರು: ಮೂರು ವರ್ಷಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಪತಿಯೊಬ್ಬ ಕತ್ತು ಕೊಯ್ತು ಹತ್ಯ ಮಾಡಿರುವ ಘಟನೆ ನಗರದ ಕೆಂಗೇರಿ ಉಪನಗರದಲ್ಲಿ ಬುಧವಾರ ನಡೆದಿದೆ.
ನವ್ಯಾ (25) ಹತ್ಯೆಯಾದ ದುರ್ದೈವಿ. ಆರೋಪಿಯನ್ನು ಆಕೆಯ ಪತಿ ಕಿರಣ್ ಎಂದು ಗುರ್ತಿಸಲಾಗಿದೆ. ನವ್ಯಶ್ರೀ ಹಾಗೂ ಕಿರಣ್ ಇಬ್ಬರೂ ಪ್ರೀತಿಸಿ ಮೂರು ವರ್ಷಗಳ ಹಿಂದೆ ಮದುವೆ ಆಗಿದ್ದರು. ಕ್ಯಾಬ್ ಚಾಲಕನಾಗಿದ್ದ ಕಿರಣ್, ಎಸ್‌ಎಂವಿ ಲೇಔಟ್‌ನ ಒಂದನೇ ಬ್ಲಾಕ್‌ನಲ್ಲಿ ನೆಲೆಸಿದ್ದರು. ಇತ್ತೀಚೆಗೆ ದಂಪತಿ ಮಧ್ಯೆ ಕೌಟುಂಬಿಕ ಕಾರಣಕ್ಕೆ ಮನಸ್ತಾಪ ಉಂಟಾಗಿತ್ತು. ಕಿರಣ್ ಅತಿಯಾಗಿ ಮದ್ಯ ಸೇವಿಸುತ್ತಿದ್ದರು. ದಂಪತಿ ಮಧ್ಯೆ ನಿತ್ಯ ಗಲಾಟೆಯಾಗುತ್ತಿತ್ತು ಎನ್ನಲಾಗಿದೆ.
ಮಂಗಳವಾರ ಬೆಳಿಗ್ಗೆ ಐಶ್ವರ್ಯಾಗೆ ಕರೆ ಮಾಡಿದ್ದ ನವ್ಯಶ್ರೀ, ಮನೆ ಹಾಗೂ ಹೊರಗೆ ನೆಮ್ಮದಿ ಇಲ್ಲ ಎಂದು ಹೇಳಿಕೊಂಡಿದ್ದರು. ಇದರಿಂದ ಗಾಬರಿಗೊಂಡ ಐಶ್ವರ್ಯಾ ಅವರು ನವ್ಯಶ್ರೀ ಅವರ ಬಳಿಗೆ ಬಂದಿದ್ದರು. ಇಬ್ಬರೂ ಕಾರಿನಲ್ಲಿ ರಾಜರಾಜೇಶ್ವರಿ ನಗರಕ್ಕೆ ತೆರಳಿ, ಅಲ್ಲಿ ಟೀ ಸೇವಿಸಿದ್ದರು. ಸ್ನೇಹಿತ ಅನಿಲ್ ಸಹ ಸ್ಥಳಕ್ಕೆ ಬಂದಿದ್ದರು.
ಈ ವೇಳೆ ಸ್ನೇಹಿತರೊಂದಿಗೆ ಮನೆಯಲ್ಲಿ ನಡೆಯುತ್ತಿದ್ದ ಗಲಾಟೆ ವಿಚಾರವನ್ನು ನವ್ಯಶ್ರೀ ಪ್ರಸ್ತಾಪಿಸಿದ್ದರು. ಪೊಲೀಸ್ ಠಾಣೆಗೆ ದೂರು ನೀಡುವಂತೆ ಸ್ನೇಹಿತ ಸಲಹೆ ನೀಡಿದ್ದಾನೆ. ನಂತರ, ನವ್ಯಶ್ರೀ ಅವರ ಮನೆಗೆ ಐಶ್ವರ್ಯಾ ಸಹ ಬಂದು ಅಲ್ಲೇ ಉಳಿದುಕೊಂಡಿದ್ದರು. ಇವರು ಬರುವುದಕ್ಕೂ ಮೊದಲೇ ಮದ್ಯ ಸೇವಿಸಿ ಮನೆಗೆ ಬಂದಿದ್ದ ಆರೋಪಿ ಗಾಢ ನಿದ್ರೆಯಲ್ಲಿದ್ದ.
ಬಳಿಕ ಮತ್ತೊಂದು ಕೊಠಡಿಯಲ್ಲಿ ನವ್ಯಾ ಮತ್ತು ಆಕೆಯ ಸ್ನೇಹಿತ ಮಲಗಿದ್ದಾರೆ. ರಾತ್ರಿ ಕೊಠಡಿಗೆ ನುಗ್ಗಿರುವ ಆರೋಪಿ ನಿದ್ರೆಯಲ್ಲಿದ್ದ ನವ್ಯಾಳ ಕುತ್ತಿಗೆ ಕೊಯ್ದು ಹತ್ಯೆ ಮಾಡಿ, ಪರಾರಿಯಾಗಿದ್ದಾನೆ.
ರಾತ್ರಿ ಗಾಢನಿದ್ರೆಗೆ ಹೋಗಿದ್ದ ನವ್ಯಶ್ರೀ ಗೆಳತಿಗೆ ಬೆಳಗ್ಗೆ ಎಚ್ಚರವಾಗಿದೆ. ಬೆಳಗ್ಗೆ 6 ಗಂಟೆ ವೇಳೆಗೆ ಬಟ್ಟೆ ಒದ್ದೆಯಾಗಿರುವ ಅನುಭವ ಆಗಿದೆ. ಎಚ್ಚರವಾಗಿ ನೋಡಿದಾಗ ರಕ್ತದ ಮಡುವಿನಲ್ಲಿ ನವ್ಯಶ್ರೀ ಬಿದ್ದಿರುವುದು ಕಂಡು ಬಂದಿದೆ.
ಕೂಡಲೇ ಭಯದಿಂದ ಅಕ್ಕಪಕ್ಕದವರನ್ನು ಕರೆದಿದ್ದು, ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಈ ಸಂಬಂಧ ನವ್ಯಶ್ರೀ ಗೆಳಕಿ ದೂರು ನೀಡಿದ್ದು, ಕೆಂಗೇರಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿ ಕಿರಣ್ ಅನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Advertisement