ಬೆಂಗಳೂರು: ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಬಸ್ ಹರಿದು ಸಾವು

ಬೈಕ್ ನಲ್ಲಿ ಹೋಗುವಾಗ ಆಯತಪ್ಪಿ ರಸ್ತೆಗೆ ಬಿದ್ದಾಗ ಖಾಸಗಿ ಬಸ್ ಹರಿದು ಪೇಂಟರ್ ವೊಬ್ಬರು ಸಾವನ್ನಪ್ಪಿರುವ ಘಟನೆ ನಾಗರಭಾವಿ ಹೊರವರ್ತುಲ ರಸ್ತೆಯಲ್ಲಿ ಶನಿವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೈಕ್ ನಲ್ಲಿ ಹೋಗುವಾಗ ಆಯತಪ್ಪಿ ರಸ್ತೆಗೆ ಬಿದ್ದಾಗ ಖಾಸಗಿ ಬಸ್ ಹರಿದು ಪೇಂಟರ್ ವೊಬ್ಬರು ಸಾವನ್ನಪ್ಪಿರುವ ಘಟನೆ ನಾಗರಭಾವಿ ಹೊರವರ್ತುಲ ರಸ್ತೆಯಲ್ಲಿ ಶನಿವಾರ ನಡೆದಿದೆ.

ಹೆಗ್ಗನಹಳ್ಳಿ ನಿವಾಸಿ ಮುರಳಿ (40) ಮೃತ ದುರ್ದೈವಿ. ಈ ಘಟನೆಯಲ್ಲಿ ಮೃತನ ಸ್ನೇಹಿತ ರಾಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಖಾಸಗಿ ಬಸ್ ಚಾಲಕನನ್ನು ಜ್ಞಾನಭಾರತಿ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಗ್ರಹ ಚಿತ್ರ
ಬೆಳಗಾವಿಯಲ್ಲಿ ಮತ್ತೊಂದು ಭೀಕರ ಅಪಘಾತ: 6 ಮಂದಿ ದುರ್ಮರಣ

ತನ್ನ ಗೆಳೆಯನ ಜೊತೆ ರಾಜರಾಜೇಶ್ವರಿ ನಗರ ಸಮೀಪದ ವೀರಭದ್ರೇಶ್ವರ ನಗರದಿಂದ ಮನೆಗೆ ಬೈಕ್ ನಲ್ಲಿ ಮುರಳಿ ಮರಳುವಾಗ ಮಾರ್ಗದ ಮಧ್ಯೆ ದುರ್ಘಟನೆ ಸಂಭವಿಸಿದೆ.

ಕುಟುಂಬದ ಜೊತೆ ನೆಲೆಸಿದ್ದ ಮುರಳಿ, ಪೇಂಟರ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ವೀರಭದ್ರೇಶ್ವರ ನಗರದಲ್ಲಿ ಶುಕ್ರವಾರ ಸಂಜೆ ಮದ್ಯ ಸೇವಿಸಿ ನಾಗರಭಾವಿ ಹೊರವರ್ತುಲ ರಸ್ತೆ ಮೂಲಕ ಮುರಳಿ ಮನೆಗೆ ಮರಳುತ್ತಿದ್ದರು. ಈ ವೇಳೆ ನಮ್ಮೂರು ಆಹಾರ ಹೋಟೆಲ್ ಸಮೀಪ ಮೇಲ್ಸೇತುವೆಯಲ್ಲಿ ಆಯತಪ್ಪಿ ಬೈಕ್ ನಿಂದ ಮುರಳಿ ಕೆಳಕ್ಕೆ ಬಿದ್ದಿದ್ದಾರೆ. ಅದೇ ವೇಳೆ ವೇಗವಾಗಿ ಬರುತ್ತಿದ್ದ ಬಸ್ ಮುರಳಿ ಅವರ ಮೇಲೆ ಹರಿದಿದೆ. ಈ ವೇಳೆ ತೀವ್ರವಾಗಿ ಗಾಯಗೊಂಡು ಮುರಳಿ ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com