ಬಾಕಿ ಬಿಲ್ ಪಾವತಿಸದಿದ್ದರೆ ಕಾಮಗಾರಿ ಸ್ಥಗಿತ: BBMP ವಿರುದ್ದ ಗುತ್ತಿಗೆದಾರರ ಪ್ರತಿಭಟನೆ!

24 ತಿಂಗಳಿನಿಂದ ಬಿಬಿಎಂಪಿಯಲ್ಲಿ 1,700 ಕೋಟಿ ರೂ.ಗಳ ಪಾವತಿ ಬಾಕಿ ಇದೆ ಎಂದು ಸಂಘದ ಸದಸ್ಯರು ಆರೋಪಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಾಕಿ ಇರುವ ಬಿಲ್ ಪಾವತಿಸದಿದ್ದರೆ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಸರ್ಕಾರಕ್ಕೆ ಬಿಬಿಎಂಪಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ.

ಜುಲೈ 8 ರಿಂದ ಕಾಮಗಾರಿ ಸ್ಥಗಿತಗೊಳಿಸಿ, ಪ್ರತಿಭಟನೆ ಮಾಡುವುದಾಗಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಗುತ್ತಿಗೆದಾರರು 9 ಬೇಡಿಕೆಗಳನ್ನು ಬಿಬಿಎಂಪಿ ಮುಂದೆ ಇಟ್ಟಿದ್ದು, ಎರಡು ತಿಂಗಳುಗಳಾದರೂ ಅಧಿಕಾರಿಗಳು ಸ್ಪಂದಿಸದ ಕಾರಣ ಹಾಗೂ ಬಾಕಿ ಇರುವ ಬಿಲ್ ಪಾವತಿ ಮಾಡದಿರುವ ಕಾರಣ ಪ್ರತಿಭಟನೆಗೆ ಮುಂದಾಗಿದ್ದಾರೆ. ಸಿಎಂ-ಡಿಸಿಎಂ ಸಮ್ಮುಖದಲ್ಲಿ ನಡೆದ ಸಭೆಯಲ್ಲೂ ಬೇಡಿಕೆ ಈಡೇರಿಸಲು ಸೂಚಿಸಲಾಗಿತ್ತು. ಆದರೂ ಮುಖ್ಯ ಆಯುಕ್ತರು ಗುತ್ತಿಗೆದಾರರನ್ನು ಕಡೆಗಣಸಿದ್ದಾರೆ.

ಹೀಗಾಗಿ, ಎಲ್ಲ ರೀತಿಯ ಕಾಮಗಾರಿ ಗಳನ್ನು ಸ್ಥಗಿತಗೊಳಿಸಲು ನಿರ್ಧಾರಿಸಿದ್ದೇವೆ. ವಾರ್ಡ್ ಕಾಮಗಾರಿ, ಮಳೆ ನೀರು, ರಸ್ತೆಗಳು, ವೈಟ್ ಟಾಪಿಂಗ್, ಕೆರೆ, ಯೋಜನೆ, ತೋಟಗಾರಿಕೆ ವಿಭಾಗ ಕಾಮಗಾರಿ ಸ್ಥಗಿತಗೊಳಿಸುತ್ತೇವೆ ಎಂದು ಉಲ್ಲೇಖಿಸಿದ್ದಾರೆ.

ಎಲ್ಲ‌ ರೀತಿಯ ಕಾಮಗಾರಿಗಳ ಸ್ಥಗಿತಕ್ಕೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಒಪ್ಪಿಗೆ ನೀಡಿದ್ದು. ಈ‌ ಬಗ್ಗೆ ಸಂಘದ ಅಧ್ಯಕ್ಷ ಜಿ.ಎಂ.ನಂದ ಕುಮಾರ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

24 ತಿಂಗಳಿನಿಂದ ಬಿಬಿಎಂಪಿಯಲ್ಲಿ 1,700 ಕೋಟಿ ರೂ.ಗಳ ಪಾವತಿ ಬಾಕಿ ಇದೆ ಎಂದು ಸಂಘದ ಸದಸ್ಯರು ಆರೋಪಿಸಿದ್ದಾರೆ.

ಸಂಗ್ರಹ ಚಿತ್ರ
ಕಸದಿಂದ ವಿದ್ಯುತ್‌ ಉತ್ಪಾದನೆ ಘಟಕ: ಕಾಮಗಾರಿ ಪರಿಶೀಲಿಸಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್

ಅದರಂತೆ, ರಸ್ತೆ ನಿರ್ಮಾಣ, ವೈಟ್ ಟಾಪಿಂಗ್, ಕೆರೆ ಅಭಿವೃದ್ಧಿ, ಮಳೆನೀರು ಚರಂಡಿಗೆ ಸಂಬಂಧಿಸಿದ ಕಾಮಗಾರಿಗಳು ಸೇರಿದಂತೆ ವಾರ್ಡ್ ಮಟ್ಟದ ಎಲ್ಲ ಕಾಮಗಾರಿಗಳಿಗೆ ತೊಂದರೆಯಾಗಲಿದೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್‌ ಕೆ.ಟಿ ಮಾತನಾಡಿ, ನಮ್ಮ ಬಾಕಿ ಬಿಲ್‌ಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ಗೆ ನಾವು ಪದೇ ಪದೇ ಮನವಿ ಮಾಡಿಕೊಂಡಿದ್ದೇವೆ. ಆದಾಗ್ಯೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಹೀಗಾಗಿ ನಾವು ಕಾಮಗಾರಿ ಕೆಲಸಗಳನ್ನು ಸ್ಥಗಿತಗೊಳಿಸುವಂತಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಪಾಲಿಕೆ ಅಧಿಕಾರಿಗಳ ವಿರುದ್ಧ ಲಂಚದ ಆರೋಪ ಮಾಡಿದ್ದಾರೆ.

ಬಿಬಿಎಂಪಿ ಎಂಜಿನಿಯರ್‌ಗಳು ಎರಡೂವರೆ ವರ್ಷಗಳ ಹಿಂದೆ ನಡೆದ ಕಾಮಗಾರಿಗಳ ಬಿಲ್‌ಗಳನ್ನು ಕ್ಲಿಯರ್ ಮಾಡಿದ್ದಾರೆ. ಲಂಚ ಕೊಡಲು ಒಪ್ಪದ ಇತರೆ ಗುತ್ತಿಗೆದಾರರ ಬಿಲ್ ಗಳನ್ನು ತಡೆ ಹಿಡಿದಿದ್ದಾರೆ. ಕೆಲವು ಗುತ್ತಿಗೆದಾರರಿಗೆ ಶೇ 75ರಷ್ಟು ಬಿಲ್‌ಗಳನ್ನು ತೆರವುಗೊಳಿಸಲಾಗಿದ್ದು, ಉಳಿದ ಶೇ 25ರಷ್ಟು ಬಿಲ್‌ಗಳನ್ನು ತಡೆಹಿಡಿಯಲಾಗಿದೆ, ಲಂಚ ನೀಡಿದರೆ ಮಾತ್ರ ಇಂಜಿನಿಯರ್‌ಗಳು ಬಿಲ್ ತೆರವುಗೊಳಿಸುತ್ತಾರೆಂದು ಕಿಡಿಕಾರಿದರು.

ಬ್ಯಾಂಕ್ ಗಳಿಂದ ಹೆಚ್ಚಿನ ಬಡ್ಡಿಗೆ ಹಣ ಪಡೆದು ಲೇವಾದೇವಿದಾರರಿಂದ ಸಾಲ ಪಡೆದು ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಮೇಲೆ ಗುತ್ತಿಗೆದಾರರು ಕೋಟ್ಯಂತರ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಇದೀಗ ಸರ್ಕಾರ ಬಾಕಿ ಹಣ ನೀಡಿದ ಪರಿಣಾಮ ಹಲವರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ, ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಸಿಎಂ ಹಾಗೂ ಡಿಸಿಎಂ ಗಮನಕ್ಕೆ ತರಬೇಕಿದೆ. ಸಮಸ್ಯೆ ಬಗ್ಗೆ ಕೂಡಲೇ ಸಿಎಂ ಹಾಗೂ ಡಿಸಿಎಂ ಮಧ್ಯಸ್ಥಿಕೆ ವಹಿಸಬೇಕೆಂದುಪ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com