ಬೆಂಗಳೂರು: ಒಳಉಡುಪಿನಲ್ಲಿಟ್ಟು 1.1 ಕೆಜಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಬಂಧನ!

ನಗರದ ಬೊಮ್ಮನಹಳ್ಳಿ ನಿವಾಸಿಯಾಗಿದ್ದ ಈತ, ಮೊದಲ ಬಾರಿಗೆ ವಿದೇಶಕ್ಕೆ ಪ್ರಯಾಣಿಸಿದ್ದ. ಇಮ್ಮಿಗ್ರೇಷನ್ ಕ್ಲಿಯರೆನ್ಸ್ ಬಳಿಕ ವ್ಯಕ್ತಿಯ ನಡಳಿಕೆ ಅನುಮಾನಾಸ್ಪವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 77.57 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಜುಲೈ 3 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 ಗೆ ದುಬೈನಿಂದ EK 566 ವಿಮಾನ ಮೂಲಕ ಬಂದ ವ್ಯಕ್ತಿ ಒಳ ಉಡುಪಿನಲ್ಲಿ 1092.5 ಗ್ರಾಂ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ.

ಬಂಧಿತ ವ್ಯಕ್ತಿ ಬೊಮ್ಮನಹಳ್ಳಿ ನಿವಾಸಿಯಾಗಿದ್ದು, ಮೊದಲ ಬಾರಿಗೆ ವಿದೇಶಕ್ಕೆ ಪ್ರಯಾಣಿಸಿದ್ದ. ಇಮ್ಮಿಗ್ರೇಷನ್ ಕ್ಲಿಯರೆನ್ಸ್ ಬಳಿಕ ವ್ಯಕ್ತಿಯ ನಡಳಿಕೆ ಅನುಮಾನಾಸ್ಪವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು, ತಪಾಸಣೆ ನಡೆಸಿದ್ದಾರೆ. ಸ್ಪಾಟ್ ಪ್ರೊಫೈಲಿಂಗ್ ಆಧಾರದ ಮೇಲೆ ಅಧಿಕಾರಿಗಳು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ

ತಪಾಸಣೆ ವೇಳೆ ವ್ಯಕ್ತಿ ಎರಡು ಒಳ ಉಡುಪು ಧರಿಸಿರುವುದು ಕಂಡು ಬಂದಿದೆ. ಒಳಉಡುಪಿನಲ್ಲಿ ಚೀಲ ಕಂಡುಬಂದಿದ್ದು. ಚಿನ್ನ ಕಳ್ಳಸಾಗಣೆ ಮಾಡುತ್ತಿರುವುದು ತಿಳಿದುಬಂದಿದೆ. ಪೇಸ್ಟ್ ರೀತಿಯ ಚಿನ್ನವನ್ನು ಎರಡು ಆಯತಾಕಾರದ ಬಿಳಿ-ಟೇಪ್ ಪ್ಯಾಕೆಟ್‌ಗಳಲ್ಲಿ ಒಳಉಡುಪಿನಲ್ಲಿ ಇರಿಸಿರುವುದು ಕಂಡು ಬಂದಿದೆ.

ಸಾಂದರ್ಭಿಕ ಚಿತ್ರ
ಬೆಂಗಳೂರು: ಕೆಐಎಯಲ್ಲಿ ಐದು ಗಂಟೆಗಳಲ್ಲಿ 9 ಕೆಜಿಗೂ ಹೆಚ್ಚು ಕಳ್ಳಸಾಗಣೆ ಚಿನ್ನ ವಶ

ವಿಚಾರಣೆ ವೇಳೆ ವ್ಯಕ್ತಿ ತಪ್ಪೊಪ್ಪಿಕಂಡಿದ್ದು, ಚಿನ್ನ ಪಡೆದು ಕೃತ್ಯಕ್ಕೆ ಎಮಿರೇಟ್ಸ್ ವಿಮಾನದ ಸಿಬ್ಬಂದಿಯೊಬ್ಬ ಸಹಕಾರ ನೀಡಿರುವುದಾಗಿಯೂ ಹೇಳಿದ್ದಾನೆ. ಈತನ ಹೇಳಿಕೆಯ ಆಧಾರದ ಮೇಲೆ ಎಮಿರೇಟ್ಸ್ ಏರ್‌ಲೈನ್ ಸಿಬ್ಬಂದಿಯೋರ್ವನನ್ನೂ ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಏರೋ ಬ್ರಿಡ್ಜ್‌ನಿಂದ ಇಳಿದ ಕೂಡಲೇ ಆತನಿಗೆ ಹಸ್ತಾಂತರಿಸಿದ್ದೆ ಎಂದು ವ್ಯಕ್ತಿ ಹೇಳಿದ್ದಾನೆ.

ಈ ಮಾಹಿತಿ ಆಧಾರದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಕರ್ತವ್ಯದಲ್ಲಿದ್ದ ವಿಮಾನಯಾನದ ಸಿಬ್ಬಂದಿಗಳನ್ನು ಕರೆಸಿದ್ದು, ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಂಧಿತ ವ್ಯಕ್ತಿ ತನಗೆ ಸಹಕಾರ ನೀಡಿದ್ದ ಸಿಬ್ಬಂದಿಯನ್ನು ಗುರ್ತಿಸಿದ್ದಾನೆ.

ಬಳಿಕ ಸಹಕಾರ ನೀಡಿದ್ದ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದು, ಆತನ ಬಳಿಯಿದ್ದ ಚಿನ್ನವನ್ನೂ ವಶಕ್ಕೆ ಪಡೆದಿದ್ದಾರೆ.

ಈತ ಕಳೆದ 20 ವರ್ಷಗಳಿಂದ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಈವರೆಗೂ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಇದೀಗ ಇಬ್ಬರನ್ನೂ ಬಂಧಿಕ್ಕೊಳಪಡಿಸಲಾಗಿದ್ದು, ಕಸ್ಟಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com