ಬೆಂಗಳೂರು: ರಸ್ತೆ ಗುಂಡಿ ಗುರುತಿಸಲು 'ಗುಂಡಿ ಗಮನ' ಆ್ಯಪ್ ಬಿಡುಗಡೆ!

ಆ್ಯಪ್'ನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬಳಸಬಹುದಾಗಿದ್ದು. ನಿಮಗೆ ಅನುಕೂಲವಾಗುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನಂತರ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ, ಒಟಿಪಿ ಮೇಲೆ ಕ್ಲಿಕ್ ಮಾಡಿದರೆ ಎಸ್‌ಎಂಎಸ್ ಮೂಲಕ ಒನ್ ಟೈಮ್ ಪಾಸ್ವರ್ಡ್ ಬರಲಿದೆ. ಆ ಸಂಖ್ಯೆಯನ್ನು ಹಾಕಿದ ಕೂಡಲೆ 'ರಸ್ತೆ ದುರಸ್ತಿ' ಎಂದು ತೋರಿಸುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದ ರಸ್ತೆಗಳಲ್ಲಿನ ಗುಂಡಿಗಳ ಮುಚ್ಚಲು ಅನುಕೂಲ ಆಗುವಂತೆ ಸಾರ್ವಜನಿಕರೇ ರಸ್ತೆಗುಂಡಿಗಳನ್ನು ಗುರುತಿಸಿ ಫೋಟೋಗಳನ್ನು ಕಳಿಸುವುಕ್ಕೆ 'ರಸ್ತೆ ಗುಂಡಿ ಗಮನ' (Fix Pothole) ಎಂಬ ಆ್ಯಪ್'ನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಭಿವೃದ್ಧಿಪಡಿಸಿದ್ದು, ಬಿಡುಗಡೆ ಮಾಡಿದೆ.

ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜೊತೆಯಲ್ಲಿ ಶನಿವಾರ ‘ರಸ್ತೆ ಗುಂಡಿಗಳ ಗಮನ’ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದರು.

ಬೆಂಗಳೂರು ನಗರದಲ್ಲಿ ಸುಮಾರು 12,878 ಕಿ.ಮೀ ಉದ್ದದ ರಸ್ತೆ ಇದ್ದು, ಈ ಪೈಕಿ ಸುಮಾರು 1,344.84 ಕಿ.ಮೀ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳು ಹಾಗೂ 11,533.16 ಕಿ.ಮೀ ರಸ್ತೆಗಳು ವಲಯ ಮಟ್ಟದ ರಸ್ತೆಗಳಾಗಿವೆ.

ಬೆಂಗಳೂರು ನಗರದ ರಸ್ತೆಗಳ ತಳಭಾಗದಲ್ಲಿ ಸಾಂಪ್ರದಾಯಿಕವಾಗಿ ಬೆಸ್ಕಾಂ ಕೇಬಲ್, ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆಗಳು, ಗೇಲ್ ಗ್ಯಾಸ್‌ನ ಕೊಳವೆಗಳು. ಕೆ.ಪಿ.ಟಿ.ಸಿ.ಎಲ್ ಸಂಸ್ಥೆಯ ಬೃಹತ್ ಮತ್ತು ಹೆಚ್ಚಿನ ಸಾಮರ್ಥ್ಯದ ಕೇಬಲ್‌ಗಳ ಅಳವಡಿಕೆ ಮತ್ತು ಒಎಫ್‌ಸಿ ಕೇಬಲ್‌ಗಳ ಅಳವಡಿಕೆಯಿಂದ ರಸ್ತೆಯ ಮೇಲೆ ಭಾಗವು ಹದಗೆಟ್ಟು ನಿರಂತರವಾಗಿ ರಸ್ತೆ ಗುಂಡಿಗಳು ಉಂಟಾಗುತ್ತಿವೆ.

ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ರಸ್ತೆಗಳನ್ನು ಜಿಪಿಎಸ್ ಆಧಾರದ ಮೇಲೆ ಗುರುತಿಸಿ, ಆ ರಸ್ತೆಗಳಲ್ಲಿ ಬೀಳಬಹುದಾದ ರಸ್ತೆ ಗುಂಡಿಗಳನ್ನು ಅಕ್ಷಾಂಶ ಮತ್ತು ರೇಖಾಂಶ (Latitude and Longitude)ನಲ್ಲಿ ನಿಖರವಾಗಿ ಗುರುತಿಸಿ, ಮೊಬೈಲ್‌ನಲ್ಲಿ ರಸ್ತೆ ಗುಂಡಿಯ ಅಳತೆಯನ್ನು ನಮೂದಿಸಿ ಪ್ರತಿಯೊಂದು ರಸ್ತೆ ಗುಂಡಿಯನ್ನು ಮುಚ್ಚಲು ಪ್ರತ್ಯೇಕ ಕಾರ್ಯಾದೇಶವನ್ನು ತಯಾರಿಸಿ ಅದನ್ನು ಮುಚ್ಚಲು ಈ ಆಪ್ ಸಹಕಾರಿಯಾಗಲಿದೆ.

ಸಂಗ್ರಹ ಚಿತ್ರ
ಬೆಂಗಳೂರು: ರಸ್ತೆ ಗುಂಡಿ ಮುಚ್ಚಲು BBMP ಕಾರ್ಯಪಡೆ; ಪ್ರತಿ ವಲಯದ ಟ್ರ್ಯಾಫಿಕ್ ACP ಒಳಗೊಂಡಂತೆ ಸಮಿತಿ ರಚನೆ!

ಈ ತಂತ್ರಾಂಶವನ್ನು ಪಾಲಿಕೆಗೆ ಅಳವಡಿಸಿಕೊಳ್ಳುವುದರಿಂದ ರಸ್ತೆ ಗುಂಡಿಗಳನ್ನು ಗುರುತಿಸುವಿಕೆ ಮತ್ತು ದುರಸ್ತಿ ಕಾರ್ಯವು ಪಾರದರ್ಶಕವಾಗಿರುವುದಲ್ಲದೇ, ರಸ್ತೆ ಗುಂಡಿ ವೆಚ್ಚದ ಮೇಲೆ ನಿಯಂತ್ರಣ ಮತ್ತು ಹೊಣೆಗಾರಿಕೆಯನ್ನು ಅತ್ಯಂತ ಯಶಸ್ವಿಯಾಗಿ ನಿಗಾ ಇಡಬಹುದಾಗಿದೆ. 2024-25ನೇ ಸಾಲಿನಲ್ಲಿ ಪ್ರತಿ ವಾರ್ಡ್ ಗಳಿಗೆ 15 ಲಕ್ಷಗಳಂತೆ 225 ವಾರ್ಡ್‌ಗಳಿಗೆ ರೂ. 33.75 ಕೋಟಿಗಳನ್ನು ಮೀಸಲಿಡಲಾಗಿದೆ.

ಈ ತಂತ್ರಾಂಶವು ಸೃಜನಾತ್ಮಕ. ತಂತ್ರಜ್ಞಾನ ಬಳಸಿಕೊಂಡು ಪಾಲಿಕೆಯಲ್ಲಿ ರಸ್ತೆ ಗುಂಡಿಗಳನ್ನು ಪಾರದರ್ಶಕವಾಗಿ ಗುರುತಿಸಿ. ನಿಗದಿತ ಅವಧಿಯಲ್ಲಿ ರಸ್ತೆ ಗುಂಡಿ ದುರಸ್ಥಿ ಕಾರ್ಯ ಕೈಗೊಂಡಿರುವ ಬಗ್ಗೆ ಉಸ್ತುವಾರಿ ವಹಿಸಲು, ರಸ್ತೆ ಗುಂಡಿ ದುರಸ್ತಿ ಕಾರ್ಯಕ್ಕೆ ಆಗುವ ವೆಚ್ಚದ ಮೇಲೆ ನಿಯಂತ್ರಣ ಹೊಂದಲು ಇದು ಅನುಕೂಲಕಾರಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆ್ಯಪ್'ನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬಳಸಬಹುದಾಗಿದ್ದು. ನಿಮಗೆ ಅನುಕೂಲವಾಗುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನಂತರ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ, ಒಟಿಪಿ ಮೇಲೆ ಕ್ಲಿಕ್ ಮಾಡಿದರೆ ಎಸ್‌ಎಂಎಸ್ ಮೂಲಕ ಒನ್ ಟೈಮ್ ಪಾಸ್ವರ್ಡ್ ಬರಲಿದೆ. ಆ ಸಂಖ್ಯೆಯನ್ನು ಹಾಕಿದ ಕೂಡಲೆ 'ರಸ್ತೆ ದುರಸ್ತಿ' ಎಂದು ತೋರಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ಕೂಡಲೆ ನೀವು ನಿಂತ ಜಾಗದ ವಿಳಾಸದ ಸಮೇತ ಲೊಕೇಶನ್ ತೋರಿಸಲಿದೆ.

ಬಳಿಕ ಸ್ಥಳದಲ್ಲಿರುವ ರಸ್ತೆ ದುರಸ್ತಿಯ ಕುರಿತ ಫೋಟೋ ಹಾಕಿ ಸ್ಥಳದಲ್ಲಿರುವ ಸಮಸ್ಯೆಯ ಕುರಿತು ವಿವರಣೆ ಬರೆಯಬಹುದು. ಅನಂತರ ದೂರು ಸಲ್ಲಿಸುವ ಮುಂಚೆ ಒಮ್ಮೆ ಪರಿಶೀಲಿಸಿಕೊಳ್ಳಲು ಕೂಡಾ ಅವಕಾಶವಿದ್ದು. ಎಲ್ಲವನ್ನು ಪರಿಶೀಲಿಸಿದ ನಂತರ 'ಸಲ್ಲಿಸಿ' ಎಂಬುದರ ಮೇಲೆ ಕ್ಲಿಕ್ ಮಾಡಿದರೆ, ದೂರು ದಾಖಲಾಗಿ ನಿಮಗೆ ದೂರಿನ ಸಂಖ್ಯೆ ಕೂಡಾ ಸಿಗಲಿದೆ.

ದೂರು ದಾಖಲಾದ ಬಳಿಕ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಸಮಯದಲ್ಲಿ ದೂರನ್ನು ಬಗೆಹರಿಸಲಿದ್ದಾರೆ. ದೂರುಗಳ ಸ್ಥಿತಿಯನ್ನು ಕೂಡಾ ನೋಡುವ ವ್ಯವಸ್ಥೆ ಕಲ್ಪಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com