ದಕ್ಷಿಣ ಕನ್ನಡ: ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ; ವಿರೋಧಿಸಿದ್ದಕ್ಕೆ ಕೊಲೆ - SSLC ವಿದ್ಯಾರ್ಥಿ ಬಂಧನ

ಆಸರೆ ಕೊಟ್ಟ ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ವಿರೋಧಿಸಿದ್ದಕ್ಕೆ ಕೊಲೆ ಮಾಡಿದ ಆರೋಪದ ಮೇಲೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ದಕ್ಷಿಣ ಕನ್ನಡ: ಆಸರೆ ಕೊಟ್ಟ ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ವಿರೋಧಿಸಿದ್ದಕ್ಕೆ ಕೊಲೆ ಮಾಡಿದ ಆರೋಪದ ಮೇಲೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಹೇಮಾವತಿ ಮೃತ ಮಹಿಳೆ. ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಬಿಳಿಯೂರು ಬಳಿ ನಡೆದಿದೆ. ಜೂ.16ರಂದು ಬಿಳಿಯೂರಿನ ಮನೆಯಲ್ಲಿ ಹೇಮಾವತಿ ಅಕ್ಕನ ಮನೆಯಲ್ಲಿಯೇ ಮೃತದೇಹವಾಗಿ ಪತ್ತೆಯಾಗಿದ್ದಾಳೆ.ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಅಕ್ಕನ ಮಗನನ್ನು ಹೇಮಾವತಿ ಮನೆಯಲ್ಲಿ ಇರಿಸಿಕೊಂಡಿದ್ದಳು. ಎಂದಿನಂತೆ ಹೇಮಾವತಿ ಊಟ ಮುಗಿಸಿ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದಾರೆ. ತಡರಾತ್ರಿ ಆಗುತ್ತಿದ್ದಂತೆ ಬಾಲಕ ಚಿಕ್ಕಮ್ಮನ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದಾನೆ. ಈ ವೇಳೆ ಆತನ ಅತ್ಯಚಾರ ಯತ್ನಕ್ಕೆ ವಿರೋಧಿಸಿ ಕೆನ್ನೆಗೆ ಒಂದು ಬಾರಿಸಿ ಕಳಿಸಿದ್ದಾಳೆ.

ಬೆಳಗಾದರೆ ತನ್ನ ಬಗ್ಗೆ ಚಿಕ್ಕಮ್ಮ ಎಲ್ಲರೆದುರು ಅತ್ಯಾಚಾರ ಯತ್ನದ ಬಗ್ಗೆ ಹೇಳಿ ಮರ್ಯಾದೆ ಕಳೆಯುತ್ತಾಳೆ ಎಂದು ಹೆದರಿಕೊಂಡು ರಾತ್ರಿ ಮಲಗಿದ್ದ ಚಿಕ್ಕಮ್ಮನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬೆಳಗ್ಗೆ ಎಷ್ಟೇ ಹೊತ್ತಾದರೂ ಹೇಮಾವತಿ ಹಾಸಿಗೆಯಿಂದ ಎದ್ದೇಳದ ಹಿನ್ನೆಲೆಯಲ್ಲಿ ಮನೆಯವರು ಎಬ್ಬಿಸಲು ಮುಂದಾಗಿದ್ದಾರೆ.

ಸಾಂದರ್ಭಿಕ ಚಿತ್ರ
ಧರ್ಮೋ ರಕ್ಷತಿ ರಕ್ಷಿತಃ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ; ನಟಿ ರಚಿತಾರಾಮ್ ಪ್ರತಿಕ್ರಿಯೆ!

ಆಗ ಹಾಸಿಗೆಯಲ್ಲಿಯೇ ಸಾವನ್ನಪ್ಪಿರುವುದು ಖಚಿತವಾಗಿದೆ. ಆಗ ಬಾಲಕ ಚಿಕ್ಕಮ್ಮ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಮನೆಯವರನ್ನು ನಂಬಿಸಿದ್ದಾನೆ. ಇನ್ನು ಪೊಲೀಸರಿಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಇದಾದ ನಂತರ ಪೊಲೀಸರು ಮಹಿಳೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮರಣೋತ್ತರ ಪರೀಕ್ಷೆಗೆ ಶವ ರವಾನಿಸಿದ್ದಾರೆ.

ಮರಣೋತ್ತರ ಪರೀಕ್ಷೆ ವೇಳೆ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನು ಆಧರಿಸಿ ಕೊಲೆಯ ಘಟನೆಯನ್ನು ಬೇಧಿಸಿದಾಗ ಮನೆಯಲ್ಲಿದ್ದ ಅಕ್ಕನ ಮಗನೇ ಅತ್ಯಚಾರಕ್ಕೆ ಯತ್ನಿಸಿ ವಿರೋಧಿಸಿದಾಗ ಕೊಲೆ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ. ಈ ಘಟನೆಯ ಕುರಿತು ಕೊಲೆ ಮಾಡಿದ 10ನೇ ತರಗತಿ ಅಭ್ಯಾಸ ಮಾಡುತ್ತಿದ್ದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com