ಓಲೈಕೆ ರಾಜಕಾರಣ: 'SC/ST ಕೋಟಾ ಕೂಡ ಮುಸ್ಲಿಮರಿಗೆ' ಬಿಜೆಪಿ ಜಾಹಿರಾತು ವಿರುದ್ದ ಕಾಂಗ್ರೆಸ್ ದೂರು!

ಲೋಕಸಭಾ ಚುನಾವಣೆಯ 3ನೇ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕಾಂಗ್ರೆಸ್ ನ ಓಲೈಕೆ ರಾಜಕಾರಣದ ಕುರಿತು ಬಿಜೆಪಿ ಮಾಡಿದ್ದ ಜಾಹಿರಾತೊಂದು ಕೈ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಚುನಾವಣಾ ಆಯೋಗಕ್ಕೂ ಇದರ ವಿರುದ್ದ ದೂರು ನೀಡಲಾಗಿದೆ.
ಓಲೈಕೆ ರಾಜಕಾರಣ: 'SC/ST ಕೋಟಾ ಕೂಡ ಮುಸ್ಲಿಮರಿಗೆ' ಬಿಜೆಪಿ ಜಾಹಿರಾತು ವಿರುದ್ದ ಕಾಂಗ್ರೆಸ್ ದೂರು!

ಬೆಂಗಳೂರು: ಲೋಕಸಭಾ ಚುನಾವಣೆಯ 3ನೇ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕಾಂಗ್ರೆಸ್ ನ ಓಲೈಕೆ ರಾಜಕಾರಣದ ಕುರಿತು ಬಿಜೆಪಿ ಮಾಡಿದ್ದ ಜಾಹಿರಾತೊಂದು ಕೈ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಚುನಾವಣಾ ಆಯೋಗಕ್ಕೂ ಇದರ ವಿರುದ್ದ ದೂರು ನೀಡಲಾಗಿದೆ.

ಹೌದು.. ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಲ್ಲಿ ಭೀತಿ ಹುಟ್ಟಿಸುವಂತ ಜಾಹಿರಾತು ವಿಡಿಯೊ ಪೋಸ್ಟ್‌ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಐಟಿ ಮುಖ್ಯಸ್ಥ ಅಮಿತ್‌ ಮಾಳವಿಯಾ ಮತ್ತು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ದೂರು ಕಾಂಗ್ರೆಸ್‌ ದಾಖಲಿಸಿದೆ.

ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಅವರು ಸಲ್ಲಿಸಿದ ದೂರಿನಲ್ಲಿ, ಕರ್ನಾಟಕ ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನಿಮೇಟೆಡ್ ಪಾತ್ರಗಳನ್ನು ಚಿತ್ರಿಸುವ ವಿಡಿಯೊ ಇರುವುದನ್ನು ಉಲ್ಲೇಖಿಸಲಾಗಿದೆ.

ಓಲೈಕೆ ರಾಜಕಾರಣ: 'SC/ST ಕೋಟಾ ಕೂಡ ಮುಸ್ಲಿಮರಿಗೆ' ಬಿಜೆಪಿ ಜಾಹಿರಾತು ವಿರುದ್ದ ಕಾಂಗ್ರೆಸ್ ದೂರು!
2ನೇ ಹಂತದ ಚುನಾವಣೆ: ಲಿಂಗಾಯತ ಪ್ರಾಬಲ್ಯದ ಮೂರು ಭದ್ರಕೋಟೆಗಳನ್ನು ಉಳಿಸಿಕೊಳ್ಳುತ್ತಾ ಬಿಜೆಪಿ?

“ಈ ವಿಡಿಯೊದಲ್ಲಿ ಮುಸ್ಲಿಂ ಸಮುದಾಯದವರಿಗೆ ಹೆಚ್ಚಿನ ಹಣವನ್ನು ನೀಡುವಂತೆ ಮತ್ತು ಮುಸ್ಲಿಂ ಸಮುದಾಯವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯವನ್ನು ಹೊರ ಹಾಕುವಂತೆ ಬಿಂಬಿಸಲಾಗಿದೆ” ಎಂದು ರಮೇಶ್ ಬಾಬು ಆರೋಪಿಸಿದ್ದು, ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾತ್ರವಲ್ಲ 1989ರ ಎಸ್‌ಸಿ / ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧವೂ ಹೌದುʼʼ ಎಂದು ಹೇಳಿದ್ದಾರೆ.

ಇಂತಹ ವಿಡಿಯೊಗಳು ಸಮುದಾಯಗಳ ನಡುವೆ ದ್ವೇಷ ಹುಟ್ಟು ಹಾಕುವ ಸಾಧ್ಯತೆ ಇದೆ. 14 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾನದ ಸಂದರ್ಭದಲ್ಲಿ ಇದು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಟ್ವೀಟ್ ಮಾಡಿರುವ ವಿಡಿಯೋದಲ್ಲಿ, 'ಈ ವಿಡಿಯೊದ ಆರಂಭದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಮೀಸಲಾತಿಯ ಬುಟ್ಟಿಯಲ್ಲಿರುವ ಮೊಟ್ಟೆಗಳು ಎಂಬಂತೆ ಚಿತ್ರಿಸಲಾಗಿದೆ. ಬಳಿಕ ಈ ಮೀಸಲಾತಿ ಬುಟ್ಟಿಯಲ್ಲಿ ರಾಹುಲ್ ಗಾಂಧಿಯನ್ನು ಹೋಲುವ ಅನಿಮೇಟೆಡ್ ಪಾತ್ರ ಮುಸ್ಲಿಂ ಸಮುದಾಯದ ಮತ್ತೊಂದು ಮೊಟ್ಟೆಯನ್ನು ಇಡುವಂತೆ ತೋರಿಸಲಾಗಿದೆ.

ಬಳಿಕ ಮೊಟ್ಟೆ ಬಿರಿದು ಪಕ್ಷಿಗಳು ಜೀವ ತಳೆಯುತ್ತವೆ. ಆಗ ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಅವರನ್ನು ಹೋಲುವ ಪಾತ್ರಗಳು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗಿಂತ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಅನುದಾನವನ್ನು ನೀಡುತ್ತವೆ. ಬಳಿಕ ಬಲಿಷ್ಠವಾಗುವ ಮುಸ್ಲಿಮರನ್ನು ಹೋಲುವ ಹಕ್ಕಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳನ್ನು ಬುಟ್ಟಿಯಿಂದ ಹೊರದಬ್ಬುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಅಂತೆಯೇ ಈ ವಿವಾದಿತ ವಿಡಿಯೊವನ್ನು ಅನುಮೋದಿಸಿದ್ದಕ್ಕಾಗಿ ಅವರು ರಾಜ್ಯ ಮಟ್ಟದ ಮಾಧ್ಯಮ ಮೇಲ್ವಿಚಾರಣಾ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಅದರ ಪ್ರಸಾರದ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದ್ದು ಮಾತ್ರವಲ್ಲದೇ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com