ಮಂಗಳೂರು: ಸಿಬಿಐ ತನಿಖೆಯ ಭಯ ಹುಟ್ಟಿಸಿ ನಿವೃತ್ತ ಎಂಜಿನಿಯರ್‌ಗೆ 1.6 ಕೋಟಿ ರೂ. ವಂಚನೆ

ಕೇಂದ್ರ ತನಿಖಾ ಸಂಸ್ಥೆಯಿಂದ ಸಂಭವನೀಯ ತನಿಖೆಯನ್ನು ತಪ್ಪಿಸಿಕೊಳ್ಳಬೇಕಾದರೆ ಹಣ ನೀಡಬೇಕು ಎಂದು ಹೇಳಿ ನಿವೃತ್ತ ಎಂಜಿನಿಯರ್‌ಗೆ 1.6 ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಮಂಗಳೂರು: ಕೇಂದ್ರ ತನಿಖಾ ಸಂಸ್ಥೆಯಿಂದ ಸಂಭವನೀಯ ತನಿಖೆಯನ್ನು ತಪ್ಪಿಸಿಕೊಳ್ಳಬೇಕಾದರೆ ಹಣ ನೀಡಬೇಕು ಎಂದು ಹೇಳಿ ನಿವೃತ್ತ ಎಂಜಿನಿಯರ್‌ಗೆ 1.6 ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಆರೋಪಿಗಳು, ಅಂತರರಾಷ್ಟ್ರೀಯ ಕೊರಿಯರ್ ಸೇವೆಯ ಉದ್ಯೋಗಿಗಳಂತೆ ನಟಿಸುತ್ತಾ, ಸಂತ್ರಸ್ತರು ಕಳುಹಿಸಿದ ಪ್ಯಾಕೇಜ್‌ನಲ್ಲಿ ದೋಷಾರೋಪಣೆಯ ದಾಖಲೆಗಳು ಮತ್ತು ಡ್ರಗ್ಸ್ ಇದ್ದು, ಈ ಬಗ್ಗೆ ತನಿಖಾ ಸಂಸ್ಥೆಗೆ ತಿಳಿದಿದೆ ಎಂದಿದ್ದಾರೆ.

ತನಿಖೆ ಮುಗಿದ ನಂತರ ಅದನ್ನು ಹಿಂತಿರುಗಿಸುವುದಾಗಿ ಹೇಳಿದ ಅವರು ಠೇವಣಿ ಇಡುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ, ಸಂತ್ರಸ್ತರು ಅವರಿಗೆ 1.6 ಕೋಟಿ ರೂ. ನೀಡಿದ್ದಾರೆ.

ಪ್ರಾತಿನಿಧಿಕ ಚಿತ್ರ
ಮಂಗಳೂರು: ಸಿಬಿಐ ಅಧಿಕಾರಿ ಸೋಗಿನಲ್ಲಿ ಗುತ್ತಿಗೆದಾರರಿಗೆ 15 ಲಕ್ಷ ರೂ. ವಂಚನೆ

ಈ ಘಟನೆ ಮೇ 2 ರಿಂದ 6ರ ನಡುವೆ ನಡೆದಿದ್ದು, ಈ ಬಗ್ಗೆ ವ್ಯಕ್ತಿ ತನ್ನ ಮಗಳಿಗೆ ತಿಳಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಘಟನೆ ಕುರಿತು ಮಂಗಳೂರು ನಗರದ ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com