ಬೆಂಗಳೂರು: ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಮಕ್ಕಳ ಮೇಲೆ ಹರಿದ ಕಾರು, ಓರ್ವ ಬಾಲಕಿ ಸಾವು

ಬೆಂಗಳೂರು-ಮಾಗಡಿ ರಸ್ತೆಯ ತಾವರೆಕೆರೆ ಪ್ರದೇಶದಲ್ಲಿ ವೇಗವಾಗಿ ಬಂದ ಕಾರೊಂದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಮಕ್ಕಳಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ನಾಲ್ಕು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
Accident
ಅಪಘಾತ

ಬೆಂಗಳೂರು: ಬೆಂಗಳೂರು-ಮಾಗಡಿ ರಸ್ತೆಯ ತಾವರೆಕೆರೆ ಪ್ರದೇಶದಲ್ಲಿ ವೇಗವಾಗಿ ಬಂದ ಕಾರೊಂದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಮಕ್ಕಳಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ನಾಲ್ಕು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.

ಶನಿವಾರ ಸಂಜೆ 5 ರಿಂದ 5.05 ರ ನಡುವೆ ಘಟನೆ ನಡೆದಿದ್ದು, ಬಾಲಕಿ ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ರಾತ್ರಿ 7.15 ರ ಸುಮಾರಿಗೆ ಸಾವನ್ನಪ್ಪಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕ ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Accident
ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ; KKRTC ಬಸ್- ಬೈಕ್ ಡಿಕ್ಕಿಯಾಗಿ ಮೂವರು ಸಾವು

ಮೃತ ಬಾಲಕಿಯನ್ನು ತಾವರೆಕೆರೆಯ ನಾಗನಹಳ್ಳಿ ನಿವಾಸಿ ಪಿ ಕುಶ್ಮಿತಾ (4) ಎಂದು ಗುರುತಿಸಲಾಗಿದೆ. ಸಂತ್ರಸ್ತೆಯ ಸೋದರ ಸಂಬಂಧಿ ವೇದಾಂತ್'ಗೆ ಚಿಕಿತ್ಸೆ ಮುಂದುವರೆದಿದೆ.

ಘಟನೆ ಸಂಬಂಧ ಬಾಲಕಿಯ ತಂದೆ ಪ್ರಸನ್ನ (40) ಅವರು ದೂರು ದಾಖಲಿಸಿದ್ದಾರೆ. ಸಹೋದರನ ಮಗ ಹಾಗೂ ಸಹೋದರಿಯ ಮಗಳೊಂದಿಗೆ ನನ್ನ ಮಗಳು ಹಳೆಯ ಮನೆಯಿಂದ ಹೊಸ ಮನೆಗೆ ಹೋಗಲು ರಸ್ತೆಯಲ್ಲಿ ನಡೆದು ಸಾಗುತ್ತಿದ್ದರು. ಸುಮಾರು 20 ಅಡಿ ಅಗಲವಿರುವ ಹಳ್ಳಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ನನ್ನ ತಂದೆ ಅವರಿಂದ 100 ಮೀಟರ್ ಹಿಂದೆಯೇ ಇದ್ದರು. ಕಾರು ಚಾಲಕ ವೇಗವಾಗಿ ಬಂದಿದ್ದು, ಮಕ್ಕಳಿಗೆ ಡಿಕ್ಕಿ ಹೊಡೆಸಿದ್ದಾನೆ. ಇದರಿಂಂದ ನನ್ನ ಮಗಳ ತಲೆಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ನಿಮ್ಹಾನ್ಸ್'ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಕಾರು ಚಾಲಕ ಬೆಂಗಳೂರು ಮೂಲದವನಾಗಿದ್ದು, ತಾಯಿಯೊಂದಿಗೆ ಹಳ್ಳಿಯಲ್ಲಿರುವ ತೋಟದ ಮನೆಗೆ ಬಂದಿದ್ದಾನೆ. ಅಪಘಾತದ ನಂತರ ಇಬ್ಬರೂ ಸ್ಥಳದಲ್ಲಿಯೇ ಇದ್ದರು. 15 ದಿನಗಳಲ್ಲಿ ಚಾಲಕನ ಮದುವೆ ನಿಗತಿಯಾಗಿತ್ತು ಎಂದು ತಿಳಿದುಬಂದಿದೆ. ಅವರ ವಿರುದ್ಧ ಪೊಲೀಸರ ಕ್ರಮ ಕುರಿತು ತಿಳಿದುಬಂದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com