ಪ್ಲಾಸ್ಟಿಕ್ ಗೋದಾಮಿನ ಮೇಲೆ BBMP ದಾಳಿ: 1.40 ಲಕ್ಷ ರೂ ದಂಡ

ಪ್ಲಾಸ್ಟಿಕ್ ಬಳಕೆ ಮಾಡುವ ಗೋದಾಮು ಹಾಗೂ ಮಳಿಗೆಗಳ ಮೇಲೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್) ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಕಬಾಡೆ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿನ 1 ಗೋದಾಮು ಹಾಗೂ 12 ಮಳಿಗೆಗಳ ಮೇಲೆ ದಾಳಿ ಬಿಬಿಎಂಪಿ ಸೋಮವಾರ ದಾಳಿ ನಡೆಸಿದ್ದು, 2,200 ಕೆ.ಜಿ ಏಕ ಬಳಕೆಯ ಪ್ಲಾಸ್ಟಿಕ್ ವಶಪಡಿಸಿಕೊಂಡು 1.40 ಲಕ್ಷ ರೂ. ದಂಡ ವಿಧಿಸಿದೆ.

ಪ್ಲಾಸ್ಟಿಕ್ ಬಳಕೆ ಮಾಡುವ ಗೋದಾಮು ಹಾಗೂ ಮಳಿಗೆಗಳ ಮೇಲೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್) ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಕಬಾಡೆ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು.

ಪದ್ಮನಾಭನಗರ ವ್ಯಾಪ್ತಿಯಲ್ಲಿ ರಾಜಲಕ್ಷ್ಮೀ ಪ್ಯಾಕೇಜಿಂಗ್ ಗೋದಾಮು ಪರಿಶೀಲಿಸಿದ ಅಧಿಕಾರಿಗಳು ಈವೇಳೆ ಗಿಫ್ಟ್ ಪ್ಯಾಕಿಂಗ್ ರ‍್ಯಾಪರ್, ಹ್ಯಾಂಡ್ ಕವರ್, ಪ್ಲಾಸ್ಟಿಕ್ ಗ್ಲಾಸ್, ಸಿಲ್ವರ್ ಲೇಪಿತ ಪ್ಲೇಟ್, ಸಿಲ್ವರ್ ಕವರ್ ಮತ್ತು ಪ್ಲಾಸ್ಟಿಕ್ ರೋಲ್ ಸೇರಿದಂತೆ ಇನ್ನಿತರೆ 600 ಕೆ.ಜಿ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡು ರೂ.50 ಸಾವಿರ ದಂಡ ವಿಧಿಸಿದರು.

ಸಾಂದರ್ಭಿಕ ಚಿತ್ರ
ಪ್ಯಾಕೇಜಿಂಗ್ ನಲ್ಲಿ ಅಮೇಜಾನ್ ಇಂಡಿಯಾ ಈಗ ಏಕಬಳಕೆ ಪ್ಲಾಸ್ಟಿಕ್ ಮುಕ್ತ! 

ಕೆ.ಆರ್.ಮಾರುಕಟ್ಟೆ ಮತ್ತು ಅವೆನ್ಯೂ ರಸ್ತೆಯಲ್ಲಿರುವ ಲಿಯೋ ಪ್ಯಾಕಿಂಗ್, ಮನು ಮಾರ್ಕೆಟಿಂಗ್, ಪವನ್ ಪ್ಯಾಕೇಜಿಂಗ್, ಕೇವ ರಾಮ ಪ್ಯಾಕೇಜಿಂಗ್, ಲಕ್ಷ್ಮಿ ಮಾರ್ಕೆಟಿಂಗ್, ಎಸ್.ಎಂ ಜೈನ್ ಪ್ಯಾಕೇಜಿಂಗ್, ಮಹಾವೀರ್ ಪ್ಯಾಕೇಜಿಂಗ್, ಲಬ್ಡಿ ಪ್ಯಾಕೇಜಿಂಗ್, ಬಾಲಾಜಿ ಪ್ಲಾಸ್ಟಿಕ್, ಕೃಷ್ಣ ಪಾಲಿಮರ್, ಪ್ಯಾರಾಸ್ ಪಾಲಿಮರ್ ವ್ಯಾಪಾರ ಮಳಿಗೆಗಳಿಂದ 1,500 ಕೆ.ಜಿ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡು ರೂ.800 ದಂಡ ವಿಧಿಸಿದರು. ಬಳಿಕ ಮೈಸೂರು ರಸ್ತೆಯಲ್ಲಿ ಮಳಿಗೆಯಿಂದ 100 ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು ರೂ.10 ಸಾವಿರ ದಂಡ ವಿಧಿಸಿದರು.

ಈ ನಡುವೆ ಅತಿಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಯಶವಂತಪುರ ಆರ್‌ಟಿಒ ರಸ್ತೆಯಲ್ಲಿರುವ ಮಾರುಕಟ್ಟೆ ಪ್ರದೇಶದಲ್ಲಿರುವ 32 ಮಳಿಗೆಗಳಿಗೆ ಬಿಬಿಎಂಪಿ ಸಿಬ್ಬಂದಿ ಸೋಮವಾರ ಬೀಗಮುದ್ರೆ ಹಾಕಿದರು.

ಮೊಹಮ್ಮದ್ ಷರೀಫ್ ಎಜುಕೇಷನ್ ಟ್ರಸ್ಟ್ ಸಂಸ್ಥೆಗೆ ಸೇರಿದ ಸ್ವತ್ತುಗಳಿಗೆ (32 ವಸತಿಯೇತರ ಮಳಿಗೆಗಳು) ಬೀಗಮುದ್ರೆ ಹಾಕಲಾಗಿದೆ.

ಈ ಸದರಿ ಸ್ವತ್ತುಗಳಿಗೆ ಸ್ವಯಂ ಘೋಷಣಾ ಆಸ್ತಿತೆರಿಗೆ ಪದ್ಧತಿ ಅಡಿಯಲ್ಲಿ ಘೋಷಿಸಿಕೊಂಡಿದ್ದ ಸ್ವತ್ತಿನ ವಿವರಗಳನ್ನು ಪರಿಶೀಲಿಸಿ ವ್ಯತ್ಯಾಸ ಕಂಡುಬಂದ ಕಾರಣ 2016-17 ರಿಂದ 2023-24 ಸಾಲುಗಳಿಗೆ ಆಸ್ತಿತೆರಿಗೆ ಪರಿಷ್ಕರಿಸಿ ಜನವರಿ 2024ರಲ್ಲಿ ನೋಟಿಸ್‌ ನೀಡಲಾಗಿತ್ತು. ಒಟ್ಟು ರೂ.1.51 ಕೋಟಿ ಪಾವತಿಸಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com