ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಕಾರಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಚಾಲನಕನೊಬ್ಬನ ಮೃತದೇಹ ಬುಧವಾರ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಮಾಗಡಿ ಸಮೀಪದ ಕಲ್ಲು ದೇವನಹಳ್ಳಿ ಮೂಲದ ಅಂಬರೀಶ್ (30) ಎಂದು ಗುರುತಿಸಲಾಗಿದ್ದು, ನಗರದ ಕೊಡಿಗೇಹಳ್ಳಿ ನಿವಾಸಿಯಾಗಿದ್ದ ಎಂದು ತಿಳಿದುಬಂದಿದೆ. ಶನಿವಾರವೇ ಅಂಬರೀಷ್ ಅವರನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತ ಅಂಬರೀಷ್ ವಿವಾಹಿತ ಮಹಿಳೆಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು. ಇದೇ ಹತ್ಯೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಮಹಿಳೆಯ ಪತಿ ಅಂಬರೀಷ್ ಅವರನ್ನು ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ.
ಅಂಬರೀಷ್ ಅವರನ್ನು ಮಂಜುನಾಥ್ ಹಿಂಬಾಲಿಸಿದ್ದಾನೆ. ಈ ನಡುವೆ ಮಾರ್ಗದ ಮಧ್ಯೆ ಕಾರು ಕೆಟ್ಟು ನಿಂತಾಗ, ಮೆಕ್ಯಾನಿಕ್ ಗಾಗಿ ಕಾಯುತ್ತಿರುವಾಗ ಅಂಬರೀಷ್ ಹತ್ಯೆ ಮಾಡಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆಯ ಬಳಿಕ ಆರೋಪಿ ಅಂಬರೀಷ್ ಮೊಬೈಲ್ ತೆಗೆದುಕೊಂಡು, ತನ್ನ ಪತ್ನಿಗೆ ತೋರಿಸಿ ನಿನ್ನ ಪ್ರಿಯಕರ ಇನ್ನಿಲ್ಲ ಎಂದು ಹೇಳಿದ್ದಾನೆಂದು ಮಾಹಿತಿ ನೀಡಿದ್ದಾರೆ.
ಈ ನಡುವೆ ಅಂಬರೀಷ್ ಅವರು ಸಂಪರ್ಕಕ್ಕೆ ಸಿಗದ ಕಾರಣ ಕುಟುಂಬಸ್ಥರು ಹುಡುಕಾಟ ಆರಂಭಿಸಿದಾಗ ತಿಪ್ಪಗೊಂಡನಹಳ್ಳಿ ಬಳಿ ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
Advertisement