ಅಡ್ಡಾದಿಡ್ಡಿ ಲಾರಿ ಓಡಿಸಿದ್ದಕ್ಕೆ ಚಾಲಕನ ಬರ್ಬರ ಹತ್ಯೆ; ಐವರ ಬಂಧನ

ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಅಜೀಮ್ ಇಪ್ಪೇರಿ (23) ಮೃತ ಲಾರಿ ಚಾಲಕ. ಕೊಲೆಯಾದ ಎಂಟು ಗಂಟೆಗಳಲ್ಲಿ ಪೊಲೀಸರು ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಚಿಕ್ಕೋಡಿ: ಅಡ್ಡಾದಿಡ್ಡಿಯಾಗಿ ಲಾರಿ ಓಡಿಸುತ್ತಿದ್ದ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ‌ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕೋಳಿ ಗ್ರಾಮದ ಬಳಿ ನಡೆದಿದೆ.

ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಅಜೀಮ್ ಇಪ್ಪೇರಿ (23) ಮೃತ ಲಾರಿ ಚಾಲಕ. ಕೊಲೆಯಾದ ಎಂಟು ಗಂಟೆಗಳಲ್ಲಿ ಪೊಲೀಸರು ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಪರಸಪ್ಪ ಸತ್ಯಪ್ಪ ನಾಯ್ಕ (32), ಹಾಲಪ್ಪ ಲಕ್ಷ್ಮಣ ಹಲ್ಯಾಗೋಳ್ (32), ಈರಪ್ಪ ಬಸವಣ್ಣಿ ನಾಯ್ಕ್ (34), ಹನುಮಂತ ವಿಠ್ಠಲ್ ಇಡ್ಲಿ (30) ಮತ್ತು ಅಮಿತ್ ದೀಪಕ್ ಶಿಂಧೆ (36) ಎಂದು ಗುರುತಿಸಲಾಗಿದೆ.

ಸಂಕೇಶ್ವರದಿಂದ ಬೆಳಗಾವಿ ಕಡೆಗೆ ಲಾರಿ ಚಲಾಯಿಸಿಕೊಂಡು ಬರುತ್ತಿದ್ದ ಅಜೀಮ್, ಚಾಲನೆ ವೇಳೆ ಬೈಕ್, ಕ್ಯಾಂಟರ್‌ಗೆ ಗುದ್ದಿ ಗಾಬರಿಯಿಂದ ಹೊರಟಿದ್ದ. ಈ ವೇಳೆ ಪರಸಪ್ಪಗೆ ಸೇರಿದ ಬೈಕ್, ಹಣಮಂತ ಇಡ್ಲಿಗೆ ಸೇರಿದ ಕ್ಯಾಂಟರ್‌ಗೆ ಗುದ್ದಿದ್ದ.ಎರಡು ಕಡೆ ಅಪಘಾತ ಎಸಗಿದರೂ ಲಾರಿ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾನೆ.

ಸಂಗ್ರಹ ಚಿತ್ರ
SSLC ಪದೇ-ಪದೇ ಫೇಲ್: ಕೋಪಗೊಂಡು ದೇವರ ವಿಗ್ರಹ ವಿರೂಪಗೊಳಿಸಿದ ಬಾಲಕ, ಬಂಧನ

ಈ ವೇಳೆ ಬೆನ್ನತ್ತಿ ಕಾಟಬಳಿ ಗ್ರಾಮದ ಹತ್ತಿರ ಲಾರಿಗೆ ಕಲ್ಲೆಸೆದು ಪರಸಪ್ಪ ಹಾಗೂ ಹಣಮಂತ ತಡೆದಿದ್ದಾರೆ. ಬಳಿಕ ಪರಸಪ್ಪ ತನ್ನ ಐವರು ಸ್ನೇಹಿತರ ಜೊತೆಗೂಡಿ ಅಜೀಂ ಜೊತೆಗೆ ವಾಗ್ವಾದ ನಡೆಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಅಜೀಂ ಮರ್ಮಾಂಗಕ್ಕೆ ಒದ್ದು, ಐವರು ಬಡಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ತೀವ್ರ ಅಸ್ವಸ್ಥಗೊಂಡಿದ್ದ ಅಜೀಂ ಅವರಿಗೆ ಬೆಳಗಾವಿಯ ಬೀಮ್ಸ್‌‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಮೃತ ಪಟ್ಟಿದ್ದಾನೆ.

ಇದೀಗ ಲಾರಿ ಚಾಲಕನ ಹತ್ಯೆಗೆ ಕಾರಣರಾದ ಐವರೂ ಆರೋಪಿಗಳನ್ನು, ಯಮಕನಮರಡಿ ಪೊಲೀಸರು ಬಂಧಿಸಿ ಬೆಳಗಾವಿ ಹಿಂಡಲಗಾ ಜೈಲಿಗೆ ರವಾನೆ ಮಾಡಿದ್ದಾರೆ‌.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com