ಪ್ರೀತಿಸುವಂತೆ ನಾಲ್ವರು ಬಾಲಕರ ಕಿರುಕುಳ: ಬೇಸತ್ತು ಬಾಲಕಿ ಆತ್ಮಹತ್ಯೆಗೆ ಶರಣು

ಕಾನೂನು ಸಂಘರ್ಷಕ್ಕೊಳಗಾದ ನಾಲ್ವರು ಬಾಲಕರು, ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದರೆನ್ನಲಾಗಿದ್ದು, ಈ ವಿಚಾರವಾಗಿ ಯುವಕರ ನಡುವೆಯೇ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಮಾತಿನ ಚಕಮಕಿಯ ಆಡಿಯೋ ವೈರಲ್ ಆಗಿದೆಯಲ್ಲದೆ, ಬಾಲಕಿ ತಾಯಿಯ ವಾಟ್ಸಪ್‌ಗೂ ಕಳುಹಿಸಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಡ್ಯ: ಪ್ರೀತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕರಿಂದ ನಿರಂತರ ಕಿರುಕುಳ ತಾಳಲಾರದೆ ಬಾಲಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ಹನಕೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಇಂಪನಾ (14) ಮೃತ ಬಾಲಕಿ. ಮಂಡ್ಯದ ವಿವೇಕ ವಿದ್ಯಾಸಂಸ್ಥೆಯ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬಾಲಕಿಗೆ ಪ್ರೀತಿಸುವಂತೆ ನಾಲ್ವರು ಬಾಲಕರು ನಿರಂತರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೋಷಕರು ಆರೋಪಿಸಿದ್ದಾರೆ.

ಇಬ್ಬರು ಬಾಲಕರು ಹನಕೆರೆ ಗ್ರಾಮದವರಾಗಿದ್ದು, ಒಬ್ಬ ಕಚ್ಚಿಗೆರೆ ಗ್ರಾಮ ಮತ್ತು ಮತ್ತೊಬ್ಬ ಮಲ್ಲಯ್ಯನದೊಡ್ಡಿ ಗ್ರಾಮ ಮೂಲದವನಾಗಿದ್ದಾನೆಂದು ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ
ಮಂಡ್ಯ: ನೇಣು ಬಿಗಿದುಕೊಂಡು ಪತ್ನಿ ಆತ್ಮಹತ್ಯೆ; ಹೆದರಿ ಕೆರೆಗೆ ಹಾರಿದ ಪತಿ, ಒಂದು ವರ್ಷದ ಮಗು ಅನಾಥ!

ಕಾನೂನು ಸಂಘರ್ಷಕ್ಕೊಳಗಾದ ನಾಲ್ವರು ಬಾಲಕರು, ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದರೆನ್ನಲಾಗಿದ್ದು, ಈ ವಿಚಾರವಾಗಿ ಯುವಕರ ನಡುವೆಯೇ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಮಾತಿನ ಚಕಮಕಿಯ ಆಡಿಯೋ ವೈರಲ್ ಆಗಿದೆಯಲ್ಲದೆ, ಬಾಲಕಿ ತಾಯಿಯ ವಾಟ್ಸಪ್‌ಗೂ ಕಳುಹಿಸಿದ್ದರು ಎಂದು ತಿಳಿದು ಬಂದಿದೆ.

ಇದರಿಂದ ಬೇಸತ್ತ ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಸ್ತುತ ಆರೋಪಿತ ಬಾಲಕರು ಪರಾರಿಯಾಗಿದ್ದು, ಪೊಲೀಸರು ಬಂಧನಕ್ಕೆ ಕ್ರಮವಹಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com