ಬೆಳಗಾವಿ: ಕಂಠಪೂರ್ತಿ ಕುಡಿದ ವೈದ್ಯನಿಂದ ಹೃದ್ರೋಗಿಗೆ ಚಿಕಿತ್ಸೆ!

ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ಬೆಳಗಾವಿ ಜಿಲೆಯ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ನಡೆದುಕೊಂಡಿರುವ ರೀತಿಯನ್ನು ನೋಡಿದರೆ, ಇವರ ಬಳಿ ಚಿಕಿತ್ಸೆ ಪಡೆಯುವವರ ಸ್ಥಿತಿ ಗೋವಿಂದ ಎನ್ನುವಂತಾಗಿದೆ.
File pic
ಸಾಂದರ್ಭಿಕ ಚಿತ್ರonline desk
Updated on: 

ಬೆಂಗಳೂರು: ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ಬೆಳಗಾವಿ ಜಿಲೆಯ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ನಡೆದುಕೊಂಡಿರುವ ರೀತಿಯನ್ನು ನೋಡಿದರೆ, ಇವರ ಬಳಿ ಚಿಕಿತ್ಸೆ ಪಡೆಯುವವರ ಸ್ಥಿತಿ ಗೋವಿಂದ ಎನ್ನುವಂತಾಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಕಂಠಪೂರ್ತಿ ಕುಡಿದು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯ ತಪಾಸಣೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಳೆದ ರಾತ್ರಿ ಹೃದಯ ಸಂಬಂಧಿ ಕಾಯಿಲೆಯಿಂದ ರೋಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಫುಲ್ ಮದಿರೆಯ ಮತ್ತಿನಲ್ಲಿದ್ದ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಸುರೇಶ್ ಹಿತ್ತಲಮನಿ ರೋಗಿಯ ತಪಾಸಣೆ ನಡೆಸಿದ್ದಾರೆ. ಸರಿಯಾಗಿ ನಿಲ್ಲುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿದ್ದವರನ್ನು ರೋಗಿಯ ಸಂಬಂಧಿಕರು ತಪಾಸಣೆ ನಡೆಸದಂತೆ ಹೇಳಿದರೂ ಕೇಳದೇ ತಪಾಸಣೆ ನಡೆಸಿದ್ದಾರೆ ಎನ್ನಲಾಗಿದೆ.

ಬಳಿಕ ರೋಗಿ ಸಂಬಂಧಿಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ನರ್ಸ್ ತಪಾಸಣೆ ನಡೆಸಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳ ಬಳಿ ದೂರು ನೀಡಿದರೂ ಸಹ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

File pic
Video: ಪತ್ನಿ ಚಿಕಿತ್ಸೆಗೆ ಬಂದಿದ್ದ, ಹಿರಿಯ ವ್ಯಕ್ತಿಗೆ ಆಸ್ಪತ್ರೆ ತುಂಬಾ ಎಳೆದಾಡಿ ಥಳಿಸಿದ ವೈದ್ಯರು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com