ಅಪಘಾತ-ಸಾವು ಹೆಚ್ಚಳ ಬೆನ್ನಲ್ಲೇ ಎಚ್ಚೆತ್ತ BMTC: 3,000 ಬಸ್ ಗಳ ವೇಳಾಪಟ್ಟಿ ಪರಿಷ್ಕರಣೆ...!

ಅಪಘಾತಗಳಿಗೆ ಒತ್ತಡ ಕೂಡ ಒಂದು ಪ್ರಮುಖ ಅಂಶ ಹೇಳಲಾಗುತ್ತಿದೆ. ಕೆಲಸದ ಸಮಯದಲ್ಲಿ ಬದಲಾವಣೆ ಇಲ್ಲದಿರುವುದು ಮತ್ತು ಕರ್ತವ್ಯದ ಸಮಯ ಮೀರಿ ಕೆಲಸ ಮಾಡುತ್ತಿರುವುದು ಚಾಲಕರಿಗೆ ಒತ್ತಡ ಹೆಚ್ಚಾಗುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ.
BMTC BUS
ಬಿಎಂಟಿಸಿ ಬಸ್ (ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಬಿಎಂಟಿಸಿ ಬಸ್‌ಗಳಿಂದ ಅಪಘಾತ ಹಾಗೂ ಸಾವುಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಾರಿಗೆ ಸಂಸ್ಥೆ ಅಪಘಾತಗಳ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇದರಂತೆ ಚಾಲಕರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಬಸ್ ನಿಗಮವು ಸುಮಾರು 3,000 ಬಿಎಂಟಿಸಿ ಬಸ್ ಮಾರ್ಗಗಳ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ.

ಅಪಘಾತಗಳಿಗೆ ಒತ್ತಡ ಕೂಡ ಒಂದು ಪ್ರಮುಖ ಅಂಶ ಹೇಳಲಾಗುತ್ತಿದೆ. ಕೆಲಸದ ಸಮಯದಲ್ಲಿ ಬದಲಾವಣೆ ಇಲ್ಲದಿರುವುದು ಮತ್ತು ಕರ್ತವ್ಯದ ಸಮಯ ಮೀರಿ ಕೆಲಸ ಮಾಡುತ್ತಿರುವುದು ಚಾಲಕರಿಗೆ ಒತ್ತಡ ಹೆಚ್ಚಾಗುವಂತೆ ಮಾಡಿದೆ ಎಂದು ಚಾಲಕರು ಹಾಗೂ ಕಾರ್ಮಿಕ ಸಂಘಟನೆಗಳು ಹೇಳುತ್ತಿವೆ.

ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಮಾತನಾಡಿ, ಸಾರಿಗೆ ಕಾರ್ಮಿಕರನ್ನು ನಿಯಂತ್ರಿಸುವ 1961 ರ ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆಯ ಪ್ರಕಾರ ಚಾಲಕನಿಗೆ ಕೇವಲ ಎಂಟು ಗಂಟೆಗಳ ಕೆಲಸ ಮಾತ್ರ ನೀಡಬೇಕು. ಆದಾಗ್ಯೂ, ಚಾಲಕರು ಅವರಿಗೆ ನಿಗದಿಪಡಿಸಿದ ಟ್ರಿಪ್‌ಗಳನ್ನು ಪೂರ್ಣಗೊಳಿಸಲು ಸುಮಾರು 12 ಗಂಟೆಗಳ ಕಾಲ ಕೆಲಸ ಮಾಡಬೇಕಾಗಿ ಬರುತ್ತಿದೆ. ಮಾರ್ಗಗಳ ಚಾಲನೆಯ ಸಮಯ ಹೆಚ್ಚಳವಾಗುತ್ತಿದ್ದು, ಇದರಿಂದ ಕರ್ತವ್ಯದ ಸಮಯ ಕೂಡ ಹೆಚ್ಚಾಗುತ್ದಿದೆ. ಹೀಗಾಗಿ ಕೆಲಸದ ಸಮಯ ಎಂಟು ಗಂಟೆಗಳನ್ನು ಮೀರಿದರೆ ಹೆಚ್ಚುವರಿ ಗಂಟೆಗಳಿಗೆ ಚಾಲಕನಿಗೆ ಪರಿಹಾರ ನೀಡಬೇಕು. ಆದರೆ, ನಿಗಮವು ಸಮಯವನ್ನು ಲೆಕ್ಕಿಸದೆ ಟ್ರಿಪ್ ಗಳಿಗೆ ಅನುಸಾರ ವೇತನ ನೀಡುತ್ತದೆ. ಚಾಲಕರು ಕನಿಷ್ಟ 2 ಗಂಟೆಗಳ ಕಾಲ ಹೆಚ್ಚುವರಿ ಕೆಲಸ ಮಾಡುತ್ತಾರೆ. ಅದರೆ, ಅವರಿಗೆ ಇದಕ್ಕೆ ಯಾವುದೇ ಹಣ ನೀಡುವುದಿಲ್ಲ.

BMTC BUS
BMTC ಬಸ್​ ಅಪಘಾತಗಳಿಂದ ಒಂದೇ ತಿಂಗಳಲ್ಲಿ ನಾಲ್ವರು ಸಾವು: ಶಬ್ದರಹಿತ e-bus ಗಳು ಕಾರಣವೇ?

ಉದಾಹರಣೆಗೆ, ಬೆಳಿಗ್ಗೆ 6 ಗಂಟೆಗೆ ಕರ್ತವ್ಯ ಪ್ರಾರಂಭಿಸುವ ಚಾಲಕನನ್ನು ಮಧ್ಯಾಹ್ನ 3 ಗಂಟೆಗೆ ಕರ್ತವ್ಯದಿಂದ ಬಿಡುಗಡೆ ಮಾಡಬೇಕು, ಆದರೆ, ನಿಯೋಜಿಸಲಾದ ಒಟ್ಟು ಟ್ರಿಪ್‌ಗಳನ್ನು ಪೂರ್ಣಗೊಳಿಸಲು ಆತ ಇನ್ನು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಬೇಕಾಗಿ ಬರುತ್ತಿದೆ. ಹೀಗಾಗಿ ಚಾಲಕರು ಟ್ರಿಪ್‌ಗಳನ್ನು ಬೇಗನೆ ಮುಗಿಸುವ ಒತ್ತಡದಲ್ಲಿರುತ್ತಾರೆ. ಇದುಅಪಘಾತಗಳಿಗೆ ಕಾರಣವಾಗುತ್ತದೆ. ನಿಗಮವು ಚಾಲಕ ಒತ್ತಡ ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದೆ. ಯಾವ ಆಧಾರದ ಮೇಲೆ ಈ ರೀತಿ ಹೇಳುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಸಂಚಾರ, ರಸ್ತೆ ಕಾಮಗಾರಿಗಳು, ಮೆಟ್ರೋ ಕಾಮಗಾರಿಗಳು, ಗುಂಡಿಗಳು, ವೇಗ ತಡೆಗಳ ಸಂಖ್ಯೆ, ಬಸ್ ನಿಲ್ದಾಣಗಳ ಸಂಖ್ಯೆ ಮತ್ತು ಬಸ್‌ಗಳ ಲೋಡ್ ಸೇರಿದಂತೆ ಮುಂತಾದ ಎಲ್ಲಾ ಅಂಶಗಳನ್ನು ಪರಿಗಣಿಸಿ, ಫಾರ್ಮ್ 4 ರ ನಿಯತಕಾಲಿಕ ವೈಜ್ಞಾನಿಕ ಪರಿಷ್ಕರಣೆ ಮತ್ತು ಚಾಲಕರು ಎಂಟು ಗಂಟೆಗಳಲ್ಲಿ ತಮ್ಮ ಕರ್ತವ್ಯ ಪೂರ್ಣಗೊಳಿಸುವ ರೀತಿಯಲ್ಲಿ ಟ್ರಿಪ್‌ಗಳ ಸಂಖ್ಯೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ) ಪ್ರಭಾಕರ್ ರೆಡ್ಡಿ ಅವರು ಮಾತನಾಡಿ, ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ರಸ್ತೆ ಮತ್ತು ಮೆಟ್ರೋ ಕಾಮಗಾರಿಗಳು, ರಸ್ತೆ ತಿರುವುಗಳು ಪ್ರಯಾಣದ ಸಮಯವನ್ನು ಹೆಚ್ಚಿಸಿವೆ. ಅದಕ್ಕೆ ಅನುಗುಣವಾಗಿ, ಸುಮಾರು 3,000 ಬಸ್ ಗಳ ವೇಳಾಪಟ್ಟಿಗಳನ್ನು ಪರಿಷ್ಕರಿಸಲಾಗಿದೆ. ಬಸ್‌ಗಳಲ್ಲಿ ಅಳವಡಿಸಲಾದ ಸ್ವಯಂಚಾಲಿತ ವಾಹನ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಆಧರಿಸಿ ಸಮಯವನ್ನು ಪರಿಷ್ಕರಿಸಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com