
ಬೆಂಗಳೂರು: ನಗರದ ಹೊರವಲಯದ ಹೆಬ್ಬಗೋಡಿಯ ಹುಸ್ಕೂರು ಕೆರೆಯಲ್ಲಿ 21 ವರ್ಷದ ಯುವತಿಯ ಮೃತದೇಹ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಮೂಡತೊಡಗಿವೆ.
ಹೊಸೂರು ಬಳಿಯ ಹಾರೋಹಳ್ಳಿ ನಿವಾಸಿ ಆರ್. ಸಹನಾ ಅವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.
ಕೆರೆ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಕೆರೆಯ ದಂಡಯ ಬಳಿ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದ, ಈ ವೇಳೆ ಇಬ್ಬರೂ ದ್ವಿಚಕ್ರ ವಾಹನದೊಂದಿಗೆ ಕೆರೆಗೆ ಬಿದ್ದಿದ್ದರು. ಬಳಿಕ ರಾಮಮೂರ್ತಿ ಸುರಕ್ಷಿತವಾಗಿ ಈಜಿ ದಡ ಸೇರಿದ್ದರೆ, ಸಹನಾ ಕೆರೆಯಲ್ಲಿ ಮುಳುಗಿದ್ದರು. ಕೂಡಲೇ ಸ್ಥಳೀಯ ಪೊಲೀಸರಿಗೆ ರಾಮಮೂರ್ತಿಯವರು ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಆದರೆ, ಸಹನಾ ಅವರ ಬಾಯ್ ಫ್ರಂಡ್ ನಿತಿನ್ ಮಾತ್ರ ಇದು ಮರ್ಯಾದಾ ಹತ್ಯೆ ಎಂದು ಆರೋಪಿಸಿದ್ದಾರೆ. ನಮ್ಮಿಬ್ಬರ ಪ್ರೀತಿಗೆ ಆಕೆಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಇದು ಮರ್ಯಾದಾ ಹತ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಮೃತ ಸಹನಾ ಅವರ ತಂದೆ ರಾಮಮೂರ್ತಿ (52) ಅವರನ್ನು ಬಂಧಿಸಿ, ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ನಮ್ಮಿಬ್ಬರ ಪ್ರೀತಿ ವಿಚಾರ ತಿಳಿದ ಸಹನಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಸಹನಾ ನನ್ನೊಂದಿಗೆ ವಿವಾಹವಾಗುವುದಾಗಿ ಪಟ್ಟು ಹಿಡಿದಿದ್ದಳು. ಇದಾದ ಕೆಲವೇ ಗಂಟೆಗಳಲ್ಲಿ ಆಕೆಯ ಹತ್ಯೆಯಾಗಿದೆ. ರಾಮಮೂರ್ತಿ ಸಹನಾಳನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಇದು ಮರ್ಯಾದಾ ಹತ್ಯೆ ಪ್ರಕರಣ ಎಂದು ನಿತಿನ್ ಆರೋಪಿಸಿದ್ದಾರೆ.
ಭಾನುವಾರ ರಾತ್ರಿ, ರಾಮಮೂರ್ತಿ ನನಗೆ ದೂರವಾಣಿ ಕರೆ ಮಾಡಿ ಹೆಬ್ಬಗೋಡಿಯಲ್ಲಿರುವ ತನ್ನ ಸ್ನೇಹಿತನ ಮನೆಗೆ ಬರಲು ಹೇಳಿದ್ದ. ಭೇಟಿಯ ಸಮಯದಲ್ಲಿ ಸಹನಾಳ ಮೇಲೆ ಹಲ್ಲೆ ನಡೆಸಿ, ನಮ್ಮ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದ. ಆದರೆ, ಸಹನಾ ನನ್ನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಳು. ಸಹನಾ ನನ್ನ ಸಂಬಂಧಿಯಲ್ಲ, ಯಾವುದೇ ಕಾರಣಕ್ಕೂ ನಿತಿನ್ ಜೊತೆ ಮದುವೆಯಾಗಲು ಬಿಡುವುದಿಲ್ಲ ಎಂದು ರಾಮಮೂರ್ತಿ ಹೇಳಿದ್ದ. ನನ್ನ ತಾಯಿ ಕೂಡ ರಾಮಮೂರ್ತಿಯ ಮನವೊಲಿಸಲು ಪ್ರಯತ್ನಿಸಿದರು. ನಂತರ ನಿರ್ಧಾರಕ್ಕೆ ಸಮಯ ಬೇಕೆಂದು ಹೇಳಿ ಅಲ್ಲಿಂದ ಸಹನಾಳನ್ನು ಕರೆದುಕೊಂಡ ಹೋದ. ಅದಾದ ಕೆಲವೇ ಗಂಟೆಗಳಲ್ಲಿ ಸಹನಾ ಸಾವನ್ನಪ್ಪಿದ್ದಾಳೆಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಪೊಲೀಸರು, ಮಗಳು ಪ್ರೀತಿಯಲ್ಲಿ ಬಿದ್ದಿರುವ ವಿಚಾರ ತಿಳಿದ ದಿನ ನಾನು ನಿದ್ದೆ ಮಾಡಿರಲಿಲ್ಲ. ನಿದ್ರೆಯ ಕೊರತೆಯಿಂದಾಗಿ ದ್ವಿಚಕ್ರ ವಾಹನವನ್ನು ಸರಿಯಾಗಿ ಓಡಿಸಲು ಸಾಧ್ಯವಾಗದೆ, ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದೆವು ಎಂದು ವಿಚಾರಣೆ ವೇಳೆ ರಾಮಮೂರ್ತಿ ಹೇಳಿದ ಎಂದು ತಿಳಿಸಿದ್ದಾರೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Advertisement