ಕರ್ನಾಟಕದ ಮೊದಲ ಮಹಿಳಾ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಇಂದು ಅಧಿಕಾರ ಸ್ವೀಕಾರ

ಬೆಂಗಳೂರು: ರಾಜ್ಯ ಸರ್ಕಾರ ಮೀನಾಕ್ಷಿ ನೇಗಿ ಅವರನ್ನು ಅರಣ್ಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ,(PCCF) ಅರಣ್ಯ ಪಡೆ ಮುಖ್ಯಸ್ಥೆ (HOFF) ಯಾಗಿ ನೇಮಿಸಿ ಆದೇಶ ಹೊರಡಿಸಿದೆ. ಅವರು ಪ್ರಸ್ತುತ ದೇಶದ ಎರಡನೇ ಮಹಿಳಾ ಪಿಸಿಸಿಎಫ್ ಆಗಿದ್ದಾರೆ. ಮಹಾರಾಷ್ಟ್ರದ ಪಿಸಿಸಿಎಫ್, ಹೆಚ್ ಒಎಫ್ ಎಫ್ ಶೋಮಿತಾ ಬಿಸ್ವಾಸ್ ಮೊದಲನೆಯವರಾಗಿದ್ದಾರೆ.
ದೇಶವು ಈ ಹಿಂದೆ ಅಸ್ಸಾಂ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ಅನೇಕ ಮಹಿಳಾ ಪಿಸಿಸಿಎಫ್ ಗಳನ್ನು ಕಂಡಿದೆ. ಕರ್ನಾಟಕಕ್ಕೆ ಮೀನಾಕ್ಷಿ ನೇಗಿ ಮೊದಲನೆಯವರಾಗಿದ್ದಾರೆ.
ಕಳೆದ ಜನವರಿ 31ರಂದು ನಿವೃತ್ತರಾದ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರಿಂದ ಮೀನಾಕ್ಷಿ ನೇಗಿ ಅಧಿಕಾರ ವಹಿಸಿಕೊಂಡರು. ಪಿಸಿಸಿಎಫ್, ವನ್ಯಜೀವಿ, ಸುಭಾಷ್ ಮಲ್ಖಡೆ ಮಧ್ಯಂತರವಾಗಿ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದರು. ಮೀನಾಕ್ಷಿ ನೇಗಿಯವರು 2015-18 ರವರೆಗೆ ಎಪಿಸಿಸಿಎಫ್ ಹುದ್ದೆಯನ್ನು ಅಲಂಕರಿಸಿದ್ದರು.
ಇಂದು ಅಧಿಕಾರ ಸ್ವೀಕಾರ
ಮೀನಾಕ್ಷಿ ನೇಗಿಯವರು ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ಆದ್ಯತೆಯ ಪಟ್ಟಿಯಲ್ಲಿ ಯಾವುದು ಅಗ್ರಸ್ಥಾನ ಎಂದು ಕೇಳಿದಾಗ, ನನ್ನ ಪಟ್ಟಿಯಲ್ಲಿ ನಾನು ಮಾಡಲು ಬಯಸುವ ಹಲವಾರು ಕೆಲಸಗಳಿವೆ. ನಾನು ಮೊದಲು ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಕೆಲಸ ಮಾಡಲು ಪ್ರಾರಂಭಿಸುತ್ತೇನೆ. ಅನೇಕ ವಿಷಯಗಳನ್ನು ಯೋಜಿಸಿದ್ದೇನೆ ಎಂದರು.
ಕಳೆದ ಫೆಬ್ರವರಿ 18 ರವರೆಗೆ, ಮೀನಾಕ್ಷಿ ನೇಗಿಯವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದರು. 1989 ರ ಬ್ಯಾಚ್‌ನ ಭಾರತೀಯ ಅರಣ್ಯ ಸೇವೆ (IFS) ಕೇಡರ್‌ಗೆ ಸೇರಿದ ಅಧಿಕಾರಿ ಅನೇಕ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಕರ್ನಾಟಕದಲ್ಲಿ ಸೇವೆ ಆರಂಭಿಸಿದ್ದರು, 1993 ರಿಂದ 2007 ರವರೆಗೆ ವನ್ಯಜೀವಿ, ಸಾಮಾಜಿಕ ಅರಣ್ಯ, ಪ್ರಾದೇಶಿಕ ಮತ್ತು ಕಾರ್ಯ ಯೋಜನೆ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದರು, ನಂತರ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಸೇವೆಗೆ ನಿಯೋಜನೆಗೊಂಡರು.
2007 ರಿಂದ 2015 ರವರೆಗೆ, ಅವರು ಆಯುಷ್ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡಿದರು, ಅಲ್ಲಿ ಅವರನ್ನು ರಾಷ್ಟ್ರೀಯ ಔಷಧೀಯ ಸಸ್ಯ ಮಂಡಳಿಯ (NMPB) ಸಿಇಒ ಆಗಿ, 2013-15 ರಿಂದ NMPB ಯ ಉಪ ಸಿಇಒ ಆಗಿ ಮತ್ತು 2007-12 ರಿಂದ ಆಯುಷ್ ನಿರ್ದೇಶಕಿಯಾಗಿ ನೇಮಿಸಲಾಯಿತು. ನಂತರ ಅವರನ್ನು 2023 ರವರೆಗೆ ಕರ್ನಾಟಕದಲ್ಲಿ ಮತ್ತೆ ನೇಮಿಸಲಾಯಿತು.
2021 ರಿಂದ 2023ರವರೆಗೆ CAMPA (ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ) ದ ಹೆಚ್ಚುವರಿ ಪಿಸಿಸಿಎಫ್ ಮತ್ತು ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿ, ಅವರು ಕಾಳಿ ಹುಲಿ ಮೀಸಲು ಪ್ರದೇಶದಲ್ಲಿ ಬುಡಕಟ್ಟು ಸ್ಥಳಾಂತರ ಕಾರ್ಯಕ್ರಮವನ್ನು ಪುನರಾರಂಭಿಸಿದರು.
2018 ರಿಂದ 2021 ರವರೆಗೆ, ಅವರನ್ನು ಆಯುಷ್ ಆಯುಕ್ತರನ್ನಾಗಿ ನೇಮಿಸಲಾಯಿತು. ಎನ್ ಎಂಪಿಬಿಯಿಂದ ಅನುಮೋದಿಸಲ್ಪಟ್ಟ ವೈದ್ಯಕೀಯ ಸಸ್ಯಗಳ ಕುರಿತು ಅಧ್ಯಯನವನ್ನು ಪ್ರಾರಂಭಿಸಿದ ಭಾರತದಲ್ಲಿ ಮೊದಲಿಗರು. ಕರ್ನಾಟಕದ ಆಯುರ್ವೇದ ಆಸ್ಪತ್ರೆಗಳಲ್ಲಿ ಆಪ್ತಮಿತ್ರ- ಕೋವಿಡ್ ಸಹಾಯವಾಣಿ ಮತ್ತು ಕೋವಿಡ್ ಆರೈಕೆ ಕೇಂದ್ರಗಳನ್ನು ನಡೆಸುವ ಜವಾಬ್ದಾರಿ ಹೊತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


