
ಬೆಂಗಳೂರು: ಪ್ರಯಾಣಿಕರೊಬ್ಬರ ಮನೆಯಲ್ಲಿ ಕಳ್ಳತನ ಮಾಡಿದ್ದ ಆಟೋ ಚಾಲಕನೊಬ್ಬನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಜಿಗಣಿಯ ಬ್ಯಾಟರಾಯನದೊಡ್ಡಿ ನಿವಾಸಿ ಕಾರ್ತಿಕ್ ಕುಮಾರ್ ಅಲಿಯಾಸ್ ಟ್ಯಾಟೂ ಕಾರ್ತಿಕ್ (25) ಬಂಧಿತ ಆರೋಪಿ.
‘ಜನವರಿ 7ರಂದು ಕಾಮಾಕ್ಷಿಪಾಳ್ಯ ವೃಷಭಾವತಿ ನಗರದ ನಿವಾಸಿಯೊಬ್ಬರು ವೈಯಕ್ತಿಕ ಕೆಲಸ ನಿಮಿತ್ತ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಹೋಗಬೇಕಾಗಿತ್ತು. ಹೀಗಾಗಿ ಆಟೋ ಬುಕ್ ಮಾಡಿದ್ದರು. ಸ್ಥಳಕ್ಕ ಆಟೋದಲ್ಲಿ ಬಂದ ಆರೋಪಿ ವ್ಯಕ್ತಿ ಮನೆಯ ಕೀಯನ್ನು ಕಿಟಕಿಯಲ್ಲಿ ಇಡುತ್ತಿರುವುದನ್ನು ನೋಡಿದ್ದಾನೆ. ಬಳಿಕ ಪ್ರಯಾಣಿಕನನ್ನು ಡ್ರಾಪ್ ಮಾಡಿದ ಬಳಿ ಮತ್ತೆ ಸ್ಥಳಕ್ಕ ಬಂದು ಕೀ ತೆಗೆದು ಮನೆ ಪ್ರವೇಶಿಸಿದ್ದಾನೆ. ಬಳಿಕ 1.7 ಲಕ್ಷ ರೂಪಾಯಿ ನಗದು, 138 ಗ್ರಾಂ ಚಿನ್ನ ಮತ್ತು ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಇತರ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾನೆ. ನಂತರ ಬೀಗವನ್ನು ಮತ್ತೆ ಕಿಟಕಿಯ ಬಳಿಯೇ ಇಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಈ ಸಂಬಂಧ ಜನವರಿ 7 ರಂದು ದೂರು ದಾಖಲಾಗಿದ್ದು, ಮರುದಿನ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕಾರ್ತಿಕ್ ನನ್ನು ಬಂಧನಕ್ಕೊಳಪಡಿಸಿದ್ದಾರೆ
Advertisement