ಹೆಚ್ಚುವರಿ ಟೀ-ಕಪ್ ಕೊಡದಿದ್ದಕ್ಕೆ ಕೆಫೆ ರಣಾಂಗಣ: ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ

ನಾಲ್ವರು ದುಷ್ಕರ್ಮಿಗಳು ಕೆಫೆ ಸಿಬ್ಬಂದಿ ಮೇಲೆ ದರ್ಪ ತೋರಿದ್ದಾರೆ. ಜು.02 ರಂದು ಸಂಜೆ 6:50ರ ಸುಮಾರಿಗೆ ಈ ಘಟನೆ ನಡೆದಿದೆ.
 Bengaluru Cafe Staff Assaulted
ಕೆಫೆಯಲ್ಲಿ ಸಿಬ್ಬಂದಿ ಮೇಲೆ ಹಲ್ಲೆ online desk
Updated on: 

ಬೆಂಗಳೂರು: ಗ್ರಾಹಕರು ಹೆಚ್ಚುವರಿಯಾಗಿ ಕೇಳಿದ ಟೀ ಕಪ್ ಕೊಡಲು ನಿರಾಕರಿಸಿದ ಕೆಫೆ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಅಘಾತಕಾರಿ ಘಟನೆ ಬೆಂಗಳೂರಿನ ಶೇಷಾದ್ರಿಪುರಂ ನ ನಮ್ಮ ಫಿಲ್ಟರ್ ಕಾಫಿ ಶಾಪ್ ನಲ್ಲಿ ವರದಿಯಾಗಿದೆ

ನಾಲ್ವರು ದುಷ್ಕರ್ಮಿಗಳು ಕೆಫೆ ಸಿಬ್ಬಂದಿ ಮೇಲೆ ದರ್ಪ ತೋರಿದ್ದಾರೆ. ಜು.02 ರಂದು ಸಂಜೆ 6:50ರ ಸುಮಾರಿಗೆ ಈ ಘಟನೆ ನಡೆದಿದೆ. ಕಾಫಿ ಶಾಪ್‌ಗೆ ಬಂದಿದ್ದ ನಾಲ್ವರು ಕಾಫಿಯನ್ನು ಕೊಂಡು ಮತ್ತೊಂದು ಕಪ್‌ ಕೇಳಿದ್ದಾರೆ. ಈ ವೇಳೆ, ಹೋಟೆಲ್‌ ಸಿಬ್ಬಂದಿ ಕೊಡಲು ನಿರಾಕರಿಸಿದ್ದಾರೆ.

 Bengaluru Cafe Staff Assaulted
ನಿವೃತ್ತ ಡಿಜಿಪಿ ಓಂ ಪ್ರಕಾಶ್ ಪುತ್ರಿ ಕೃತಿಕಾ ದಾಂಧಲೆ: ಬ್ಯೂಟಿ ಪಾರ್ಲರ್ ಗೆ ನುಗ್ಗಿ ವಸ್ತುಗಳಿಗೆ ಹಾನಿ, ಸಿಬ್ಬಂದಿ ಮೇಲೆ ಹಲ್ಲೆ

ಸಿಬ್ಬಂದಿಯ ಉತ್ತರದಿಂದ ತೀವ್ರ ಆಕ್ರೋಶಗೊಂಡ ನಾಲ್ವರು, ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಪಾಳಕ್ಕೆ ಹೊಡೆದು, ಮುಖಕ್ಕೆ ಗುದ್ದಿ, ಕಾಲಿನಿಂದ ಹೊಟ್ಟೆಗೆ ಒದ್ದಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com