₹1 ಕೋಟಿ ಕೊಡದಿದ್ದರೆ ಮಗನ ಅಪಹರಣ: ಬೆಂಗಳೂರಿನ ಉದ್ಯಮಿಗೆ ಬೆದರಿಕೆಯೊಡ್ಡಿದ್ದ ನಾಲ್ವರ ಬಂಧನ

ಪೊಲೀಸರ ಪ್ರಕಾರ, ಸಂತ್ರಸ್ತನೊಂದಿಗೆ ಹಣಕಾಸಿನ ವಿವಾದ ಹೊಂದಿದ್ದ ಸ್ಥಳೀಯ ಉದ್ಯಮಿ, ಈ ಯೋಜನೆಯನ್ನು ಕಾರ್ಯಗತಗೊಳಿಸಲು ದೆಹಲಿಯ ಮೂವರನ್ನು ನೇಮಿಸಿಕೊಂಡಿದ್ದಾನೆ.
Representative Image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮಂಗಳವಾರ ಬೆಂಗಳೂರು ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ, ನಗರದ ಉದ್ಯಮಿಯೊಬ್ಬರ ಮಗನನ್ನು ಅಪಹರಿಸುವುದಾಗಿ ಬೆದರಿಸಿ 1 ಕೋಟಿ ರೂ. ಸುಲಿಗೆ ಮಾಡಲು ರೂಪಿಸಲಾಗಿದ್ದ ಸಂಚನ್ನು ವಿಫಲಗೊಳಿಸಿದ್ದಾರೆ.

ಪೊಲೀಸರ ಪ್ರಕಾರ, ಸಂತ್ರಸ್ತನೊಂದಿಗೆ ಹಣಕಾಸಿನ ವಿವಾದ ಹೊಂದಿದ್ದ ಸ್ಥಳೀಯ ಉದ್ಯಮಿ, ಈ ಯೋಜನೆಯನ್ನು ಕಾರ್ಯಗತಗೊಳಿಸಲು ದೆಹಲಿಯ ಮೂವರನ್ನು ನೇಮಿಸಿಕೊಂಡಿದ್ದಾನೆ.

ಆರೋಪಿಯು ಉತ್ತರ ಭಾರತದ ಕುಖ್ಯಾತ ದರೋಡೆಕೋರನ ಹೆಸರಿನಲ್ಲಿ ಬೆದರಿಕೆ ಕರೆ ಮಾಡುವ ಉದ್ದೇಶ ಹೊಂದಿದ್ದನು. ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಮತ್ತು ಉತ್ತರ ಪ್ರದೇಶದ ಮೀರತ್ ಮೂಲದ ಆತನ ಮೂವರು ಸಹಚರರನ್ನು ಬಂಧಿಸಲಾಗಿದೆ.

ಜುಲೈ 9 ರಂದು ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದು, ಅಪರಿಚಿತ ವ್ಯಕ್ತಿಯೊಬ್ಬರು 1 ಕೋಟಿ ರೂಪಾಯಿ ನೀಡದಿದ್ದರೆ ತಮ್ಮ ಮಗನಿಗೆ ಅಪಹರಿಸುವುದಾಗಿ ಬೆದರಿಕೆ ಕರೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆಗಾಗಿ ಕೇಂದ್ರ ವಿಭಾಗ ಮತ್ತು ಕೇಂದ್ರ ಅಪರಾಧ ಶಾಖೆಯ (ಸಿಸಿಬಿ) ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.

Representative Image
Darshan ಪ್ರಕರಣದಿಂದ ಪ್ರೇರಿತ: ಮಾಜಿ ಗೆಳತಿಗೆ ಅಶ್ಲೀಲ ಸಂದೇಶ ಕಳಿಸಿದ ವ್ಯಕ್ತಿ ಅಪಹರಣ, ಭೀಕರ ಹಲ್ಲೆ!

ಬೆಂಗಳೂರಿನ ಜೆಸಿ ರಸ್ತೆಯಲ್ಲಿ ಕಾರು ಧ್ವನಿ ಪರಿಕರಗಳ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಈ ಕೃತ್ಯದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಜುಲೈ 12 ರಂದು ವಿಚಾರಣೆಗಾಗಿ ಆತನನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಈ ಪ್ರಕರಣದಲ್ಲಿ ತಾನು ಭಾಗಿಯಾಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಮತ್ತು ದೂರುದಾರರು ವ್ಯವಹಾರ ಒಪ್ಪಂದದಲ್ಲಿ ತನಗೆ ವಂಚನೆ ಮಾಡಿದ್ದು, ಆ ಹಣವನ್ನು ವಸೂಲಿ ಮಾಡುವ ಉದ್ದೇಶದಿಂದ, ಪಿತೂರಿ ನಡೆಸಿ, ಈ ಯೋಜನೆಯನ್ನು ಕಾರ್ಯಗತಗೊಳಿಸಲು ಉತ್ತರ ಪ್ರದೇಶದ ಮೂವರನ್ನು ನೇಮಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

ಉತ್ತರ ಭಾರತದ ಕುಖ್ಯಾತ ದರೋಡೆಕೋರರ ಸದಸ್ಯರಂತೆ ನಟಿಸಿ ದೂರುದಾರರಿಗೆ ಬೆದರಿಕೆ ಹಾಕುವಂತೆ ಆರೋಪಿ ಸೂಚಿಸಿದ್ದ. ಅಪರಾಧಕ್ಕಾಗಿ ಅವರಿಗೆ ಮೊಬೈಲ್ ಫೋನ್‌ಗಳು ಮತ್ತು ಇತರ ಸೌಲಭ್ಯಗಳನ್ನು ಸಹ ಒದಗಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಸ್ಥಳೀಯ ಪೊಲೀಸರ ಸಹಾಯದಿಂದ, ಬೆಂಗಳೂರು ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Representative Image
ಉದ್ಯಮಿಯಿಂದ 4 ಲಕ್ಷ ರೂ ಸುಲಿಗೆ: ಇಬ್ಬರು CCB ಅಧಿಕಾರಿಗಳು ಸೇರಿ ಮೂವರ ಬಂಧನ

ಬೆಂಗಳೂರಿನಲ್ಲಿ ಅಪಹರಣ ಮಾಡಲು ಸಂಚು ರೂಪಿಸಿದ್ದ ಆರೋಪಿ ಮತ್ತು ಅವನು ನೇಮಿಸಿಕೊಂಡಿದ್ದ ಇತರ ಮೂವರನ್ನು ಬಂಧಿಸುವ ಮೂಲಕ ತಂಡವು 48 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

'ಆರೋಪಿಗೂ ದೂರುದಾರರಿಗೂ ಕೆಲವು ವ್ಯಾವಹಾರಿಕ ಭಿನ್ನಾಭಿಪ್ರಾಯಗಳಿದ್ದವು. ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳು, ಬೆಂಗಳೂರಿನಲ್ಲಿ ಅಪರಾಧ ನಡೆಸಲು ಇತರ ರಾಜ್ಯಗಳ ಕೆಲವರನ್ನು ಸಂಪರ್ಕಿಸಿದ್ದರು. ತಾಂತ್ರಿಕ ಪುರಾವೆಗಳು ಮತ್ತು ವಿಚಾರಣೆ ಆಧಾರದ ಮೇಲೆ, ನಾವು ಸುಳಿವು ಪಡೆದಿದ್ದೇವೆ ಮತ್ತು ಮೂವರು ಆರೋಪಿಗಳ್ನು ಪತ್ತೆಹಚ್ಚಿದ್ದು, ಟ್ರಾನ್ಸಿಟ್ ವಾರಂಟ್ ಮೇಲೆ ದೆಹಲಿಯಿಂದ ಇಲ್ಲಿಗೆ ಕರೆತರಲಾಗಿದೆ. ನಾವು 10 ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದೇವೆ' ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನಾವು ವ್ಯಕ್ತಿಗೆ (ಸಂತ್ರಸ್ತ) ಭದ್ರತೆ ಒದಗಿಸಿದ್ದೇವೆ. ಈ ಪ್ರಕರಣದಲ್ಲಿ ಎಲ್ಲರನ್ನೂ ಬಂಧಿಸಲಾಗಿದ್ದು, ವಿವರಗಳನ್ನು ಕಲೆ ಹಾಕಲಾಗುತ್ತಿದೆ. ಆರೋಪಿಗಳ ಬಳಿ ಶಸ್ತ್ರಾಸ್ತ್ರಗಳು ಸಹ ಇದ್ದವು ಎಂಬ ಮಾಹಿತಿ ಇದೆ ಮತ್ತು ಅದರ ಬಗ್ಗೆ ನಮಗೆ ಕೆಲವು ಸುಳಿವುಗಳು ಸಿಕ್ಕಿವೆ. ನಾವು ಅವರು ಬಳಸಿದ್ದ ಶಸ್ತ್ರಾಸ್ತ್ರಗಳು ಮತ್ತು ಮೊಬೈಲ್ ಫೋನ್‌ಗಳು ಸೇರಿದಂತೆ ಇತರ ಸಾಧನಗಳನ್ನು ವಶಪಡಿಸಿಕೊಳ್ಳುತ್ತೇವೆ.

ಬಂಧಿತ ಮೂವರು ಉತ್ತರ ಪ್ರದೇಶದವರಾಗಿದ್ದು, ಅಲ್ಲಿ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com