ಬೆಳಗಾವಿ: ನೈಟಿ ಹಾಕಿಕೊಂಡಿದ್ದಕ್ಕೆ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಪತಿ!

ಮಂಜುಳಾ ಹಾಗೂ ಕೃಷ್ಣಾಜಿ ಕಳೆದ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮನೆಯಲ್ಲಿ ಹೆಂಡತಿ ಸೀರೆ ಬದಲು ನೈಟಿ, ಗೌನ್ ಹಾಕುತ್ತಿರುವ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಗಲಾಟೆಯಾಗುತ್ತಿತ್ತು.
Krishnaji patil
ಕೃಷ್ಣಾಜಿ ಪಾಟೀಲ್
Updated on

ಬೆಳಗಾವಿ: ಮನೆಯಲ್ಲಿ ಸೀರೆ ಬದಲಿಗೆ ನೈಟಿ ಹಾಕಿದ್ದ ತನ್ನ ಹೆಂಡತಿಗೆ ಪತಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪೂರ ನಂದಗಡದಲ್ಲಿ ನಡೆದಿದೆ.

ಕೃಷ್ಣಾಜಿ ಪಾಟೀಲ್ ಪತ್ನಿಗೆ ಬೆಂಕಿ ಇಟ್ಟ ಭೂಪ. ಘಟನೆಯಲ್ಲಿ ಪತ್ನಿ ಮಂಜುಳಾ ಪಾಟೀಲ್‌ಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. 80% ಸುಟ್ಟ ಗಾಯಗಳಾದ ಹಿನ್ನೆಲೆ ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಯಿಂದ ಗೋವಾಗೆ ಶಿಫ್ಟ್ ಮಾಡಿದ್ದಾರೆ.

ಮಂಜುಳಾ ಹಾಗೂ ಕೃಷ್ಣಾಜಿ ಕಳೆದ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮನೆಯಲ್ಲಿ ಹೆಂಡತಿ ಸೀರೆ ಬದಲು ನೈಟಿ, ಗೌನ್ ಹಾಕುತ್ತಿರುವ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಗಲಾಟೆಯಾಗುತ್ತಿತ್ತು.

ಘಟನೆ ನಡೆದ ದಿನ ಮಂಜುಳಾ ಮನೆಯಲ್ಲಿ ಸೀರೆ ಉಡುವ ಬದಲು ನೈಟಿ ಧರಿಸಿದ್ದರು. ಇದನ್ನು ಕಂಡ ಕೃಷ್ಣಾಜಿ, ಸೀರೆ ಬದಲು ನೈಟಿ ಏಕೆ ಧರಿಸಿದ್ದೀಯ ಎಂದು ಕಿರಿಕಿರಿ ತೆಗೆದಿದ್ದಾನೆ. ಈ ವಿಚಾರವಾಗಿ ದಂಪತಿ ನಡುವೆ ಜೋರು ವಾಗ್ವಾದ ನಡೆದಿದೆ. ವಾಗ್ವಾದ ಅತಿರೇಖಕ್ಕೆ ಹೋದಾಗ ಆಕ್ರೋಶಗೊಂಡ ಕೃಷ್ಣಾಜಿ, ಪತ್ನಿ ಮಂಜುಳಾ ಮೈಮೇಲೆ ಬೆಂಕಿಯಿಟ್ಟು ಕೊಲೆಗೆ ಯತ್ನಿಸಿದ್ದಾನೆ. ಗಲಾಟೆ ಶಬ್ದ ಕೇಳಿ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ತಕ್ಷಣ ಮಹಿಳೆಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನಂದಗಡ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Krishnaji patil
Video: ಹಾಸನದಲ್ಲಿ ಸಿನಿಮೀಯ ಶೈಲಿಯ ವಿಚಿತ್ರ ಘಟನೆ; ಪತಿ, ಮಗು ತೊರೆದು ಕಾರಿನಲ್ಲೇ ಪ್ರಿಯಕರನ ಜತೆ ಮಹಿಳೆ ಮದುವೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com