‘ಪೀಕ್ ಬೆಂಗಳೂರು’ ಮೊಮೆಂಟ್: ಮನೆ ನೋಡಲು ಹೋದ ಮಹಿಳೆಗೆ ಸಿಕ್ಕಿದ್ದು ಭರ್ಜರಿ Job Offer

ಮಹಿಳೆ ಮೂಲತಃ ಬೆಂಗಳೂರಿನ ಕಟ್ಟಡವೊಂದರಲ್ಲಿ ಫ್ಲ್ಯಾಟ್ ನೋಡಲು ತೆರಳಿದ್ದರು. ಆದರೆ ತಾವು ನೋಡಲು ಹೋಗಿದ್ದ ಫ್ಲ್ಯಾಟ್‌ನಿಂದ ಹೊರಗೆ ತೆರಳುತ್ತಿದ್ದ ವ್ಯಕ್ತಿ ಆ ಸಮಯದಲ್ಲಿ ಲಭ್ಯವಿರಲಿಲ್ಲ..
Womans Flat Hunt Takes An Unexpected Turn, Leads To Job Offer
ಫ್ಲ್ಯಾಟ್ ನೋಡಲು ಹೋದ ಮಹಿಳೆಗೆ ಭರ್ಜರಿ ಉದ್ಯೋಗದ ಆಫರ್B H Shivakumar
Updated on

ಬೆಂಗಳೂರು: ಉದ್ಯೋಗಕ್ಕಾಗಿ ಕಂಪನಿಗಳ ಬಾಗಿಲು ತಟ್ಟುವುದು ಸಾಮಾನ್ಯ. ಆದರೆ ಬೆಂಗಳೂರಿನಲ್ಲಿ ಫ್ಲ್ಯಾಟ್ ಹುಡುಕಲು ಹೋದ ಮಹಿಳೆಯೊಬ್ಬರಿಗೆ ಅಚ್ಚರಿಯ ರೀತಿಯಲ್ಲಿ ಉದ್ಯೋಗದ ಆಫರ್ ಸಿಕ್ಕಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು.. X ಬಳಕೆದಾರರಾದ @neembu_paani31 ಅವರು ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ವಿಶಿಷ್ಟ ಅನುಭವವನ್ನು ಮಹಿಳೆ ‘ಪೀಕ್ ಬೆಂಗಳೂರು’ ಎಂದು ಬಣ್ಣಿಸಿದ್ದಾರೆ.

ಮಹಿಳೆ ಮೂಲತಃ ಬೆಂಗಳೂರಿನ ಕಟ್ಟಡವೊಂದರಲ್ಲಿ ಫ್ಲ್ಯಾಟ್ ನೋಡಲು ತೆರಳಿದ್ದರು. ಆದರೆ ತಾವು ನೋಡಲು ಹೋಗಿದ್ದ ಫ್ಲ್ಯಾಟ್‌ನಿಂದ ಹೊರಗೆ ತೆರಳುತ್ತಿದ್ದ ವ್ಯಕ್ತಿ ಆ ಸಮಯದಲ್ಲಿ ಲಭ್ಯವಿರಲಿಲ್ಲ. ಹೀಗಾಗಿ ಅವರು ತಮ್ಮೊಂದಿಗೆ ಬಂದಿದ್ದವರೊಂದಿಗೆ ಅದೇ ಕಟ್ಟಡದಲ್ಲಿದ್ದ ಮತ್ತೊಂದು ಫ್ಲ್ಯಾಟ್‌ಗೆ ತೆರಳಿ ಅದರ ಇಂಟೀರಿಯರ್ ನೋಡಲು ಮುಂದಾಗಿದ್ದರು.

ಆದರೆ ಅಲ್ಲಿ ಭೇಟಿಯಾಗಿದ್ದು ಕಾನೂನು ಕ್ಷೇತ್ರಕ್ಕೆ ಸಂಬಂಧಿಸಿದ AI ಸ್ಟಾರ್ಟ್‌ಅಪ್‌ನ ಸಂಸ್ಥಾಪಕ.

Womans Flat Hunt Takes An Unexpected Turn, Leads To Job Offer
ಬಿಡದಿ: ವೃಷಭಾವತಿ ನದಿ ಸೇತುವೆ ಕೆಳಗೆ ಕಂತೆ ಕಂತೆ ನಕಲಿ ನೋಟು ಪತ್ತೆ; ಪೊಲೀಸರಿಂದ ಪರಿಶೀಲನೆ; Video

ಫ್ಲ್ಯಾಟ್ ನೋಡುತ್ತಾ ಸ್ಟಾರ್ಟ್‌ಅಪ್ ಮಾತುಕತೆ!

ಆ ಸ್ಟಾರ್ಟ್‌ಅಪ್ ಸಂಸ್ಥಾಪಕರು ಕಾನೂನು ಕ್ಷೇತ್ರಕ್ಕಾಗಿ AI ಆಧಾರಿತ ಕಂಪನಿಯನ್ನು ನಿರ್ಮಿಸುತ್ತಿದ್ದರು. ಮಹಿಳೆ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿ, ಅವರು ನಿರ್ಮಿಸುತ್ತಿರುವ ಉತ್ಪನ್ನದ ಬಗ್ಗೆ ಕುತೂಹಲದಿಂದ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ತಮ್ಮ ಕೆಲಸದ ಬಗ್ಗೆ ಮಹಿಳೆ ತೋರಿಸಿದ ಆಸಕ್ತಿ ಮತ್ತು ಕೇಳಿದ ಪ್ರಶ್ನೆಗಳು ಸಂಸ್ಥಾಪಕರ ಗಮನ ಸೆಳೆದವು ಎನ್ನಲಾಗಿದೆ.

ಮಹಿಳೆಯ ಪ್ರಕಾರ, ಅವರು ಏನು ನಿರ್ಮಿಸುತ್ತಿದ್ದಾರೆ ಎಂಬುದರ ಕುರಿತು ನಡೆದ ಸಣ್ಣ ಮಾತುಕತೆಯ ಬಳಿಕ, ಆಕೆಯ ಕುತೂಹಲ ಮತ್ತು ಪ್ರಶ್ನೆಗಳಿಂದ ಸಂಸ್ಥಾಪಕರು ಪ್ರಭಾವಿತರಾಗಿದ್ದಾರೆ. ಅಷ್ಟೇ ಅಲ್ಲ, ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಸಿದ್ಧರಿದ್ದರು ಎಂದು ತಿಳಿಸಿದ್ದಾರೆ.

ಚೆನ್ನೈ, ಬೆಂಗಳೂರಿನಲ್ಲಿ ಕಚೇರಿ

ಮಹಿಳೆ ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ಸ್ಟಾರ್ಟ್‌ಅಪ್ ಈಗಾಗಲೇ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಕಚೇರಿಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ದುಬೈ ಮತ್ತು ಮಲೇಷ್ಯಾಗೂ ತನ್ನ ಕಾರ್ಯಾಚರಣೆ ವಿಸ್ತರಿಸಲು ಕಂಪನಿ ಯೋಜಿಸುತ್ತಿದೆ. ಆದರೆ ಮಹಿಳೆಗೆ ಯಾವ ಹುದ್ದೆಯ ಆಫರ್ ನೀಡಲಾಗಿದೆ ಅಥವಾ ಅವರು ಆ ಉದ್ಯೋಗವನ್ನು ಅಂತಿಮವಾಗಿ ಒಪ್ಪಿಕೊಂಡಿದ್ದಾರೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಆದರೂ, ಫ್ಲ್ಯಾಟ್ ಹುಡುಕಲು ಹೋಗಿ ಅನಿರೀಕ್ಷಿತವಾಗಿ ಉದ್ಯೋಗದ ಆಫರ್ ಪಡೆದ ಅನುಭವ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಈ ಘಟನೆಯನ್ನು ಹಂಚಿಕೊಂಡ ಮಹಿಳೆ, ‘ಬೆಂಗಳೂರು ಎಂದಿಗೂ ಅಚ್ಚರಿ ಮೂಡಿಸುವುದನ್ನು ನಿಲ್ಲಿಸುವುದಿಲ್ಲ’ ಎಂಬ ಅರ್ಥದಲ್ಲಿ ತಮ್ಮ ಅನುಭವವನ್ನು ‘ಪೀಕ್ ಬೆಂಗಳೂರು’ ಕ್ಷಣ ಎಂದು ಬಣ್ಣಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com