ಬೆಂಗಳೂರು ಏರ್​ಪೋರ್ಟ್​ ನಲ್ಲಿ 'ಬಾಯಿಯಲ್ಲಿ ಚಿನ್ನ' ಬಚ್ಚಿಟ್ಟುಕೊಂಡಿದ್ದ ಪ್ರಯಾಣಿಕನ ಬಂಧನ! Video

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ರಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ಈ ಘಟನೆ ನಡೆದಿದೆ. ಆ ಪ್ರಯಾಣಿಕ ದುಬೈನಿಂದ ಬೆಳಗಿನ ಜಾವ ವಿಮಾನದಲ್ಲಿ ಬಂದಿಳಿದಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.
Dubai-returning passenger held
ಬಾಯಿಯಲ್ಲಿ ಚಿನ್ನ ಇಟ್ಟುಕೊಂಡಿದ್ದ ವ್ಯಕ್ತಿಯ ಬಂಧನ
Updated on

ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳ ಕಣ್ಣುತಪ್ಪಿಸಿ ಬಾಯಿಯಲ್ಲಿ ಚಿನ್ನ ಬಚ್ಚಿಟ್ಟುಕೊಂಡಿದ್ದ ದುಬೈನಿಂದ ಬಂದ ಪ್ರಯಾಣಿಕನೊಬ್ಬನನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಗಾಜಿಯಾಬಾದ್‌ಗೆ ವಿಮಾನದಲ್ಲಿ ತೆರಳಲು ಭದ್ರತಾ ತಪಾಸಣೆ ವೇಳೆ ಬಾಯಿಯೊಳಗೆ ಸುಮಾರು 82 ಗ್ರಾಂ ತೂಕದ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಭಾರತೀಯ ಪ್ರಯಾಣಿಕನೊಬ್ಬನನ್ನು ಬುಧವಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ರಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ಈ ಘಟನೆ ನಡೆದಿದೆ. ಆ ಪ್ರಯಾಣಿಕ ದುಬೈನಿಂದ ಬೆಳಗಿನ ಜಾವ ವಿಮಾನದಲ್ಲಿ ಬಂದಿಳಿದಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

Dubai-returning passenger held
ಬೆಂಗಳೂರು ಏರ್​ಪೋರ್ಟ್​​ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯ ಬಂಧನ; 1.37 ಕೋಟಿ ರೂ ಮೌಲ್ಯದ ಬಂಗಾರ ವಶಕ್ಕೆ!

ಪ್ರಯಾಣಿಕರ ಸಾಮಾನ್ಯ ಭದ್ರತಾ ತಪಾಸಣೆ ವೇಳೆ ಆ ವ್ಯಕ್ತಿಯು ಅನುಮಾನಾಸ್ಪದವಾಗಿ ವರ್ತಿಸಿದ್ದು, ಸೂಕ್ತವಾಗಿ ಸ್ಪಂದಿಸುತ್ತಿಲ್ಲದಿರುವುದನ್ನು ಸಿಐಎಸ್‌ಎಫ್ ಸಿಬ್ಬಂದಿ ಗಮನಿಸಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆ ನಡೆಸಿದಾಗ ಆತನ ಬಾಯಿಯಲ್ಲಿ ಸುಮಾರು 82 ಗ್ರಾಂ ತೂಕದ ಚಿನ್ನವನ್ನು ಇಟ್ಟುಕೊಂಡಿದ್ದು ಪತ್ತೆಯಾಗಿದೆ ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ಅಧಿಕಾರಿ ತಿಳಿಸಿದ್ದಾರೆ.

ಹೆಚ್ಚಿನ ತನಿಖೆಗಾಗಿ ಆ ವ್ಯಕ್ತಿಯನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿದೆ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com