ಒಳಚರಂಡಿ ಯೋಜನೆಗಾಗಿ ತಲಾ 50 ಲಕ್ಷ ರೂ. ಗೆದ್ದ ಬೆಂಗಳೂರಿನ ಎರಡು ಕಂಪನಿಗಳು!

ಭಾರತದಾದ್ಯಂತ ನೀರಿನ ಬಿಕ್ಕಟ್ಟು ಮತ್ತು ನಿರ್ವಹಣೆಯ ಮೇಲೆ ಈ ವರ್ಷದ ಗಮನ ಕೇಂದ್ರೀಕರಿಸಿದ ಡಿಸೈನ್ ಇಂಪ್ಯಾಕ್ಟ್ ಪ್ರಶಸ್ತಿಯ ಎರಡನೇ ಆವೃತ್ತಿಯಲ್ಲಿ ಬೆಂಗಳೂರಿನ ಈ ಎರಡು ಕಂಪನಿಗಳು ಮತ್ತು ಇತರ ನಾಲ್ಕು ಕಂಪನಿಗಳಿಗೆ ಪ್ರಶಸ್ತಿ ನೀಡಲಾಗಿದೆ.
Two Bengaluru firms win Rs 50 lakhs each for sewage water projects
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರು ಮೂಲದ ಎರಡು ಕಂಪನಿಗಳಾದ ಇಕೋಎಸ್‌ಟಿಪಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಟ್ರಾನ್ಸ್‌ವಾಟರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಟಾಟಾ ಗ್ರೂಪ್‌ನ ಟೈಟಾನ್‌ನಿಂದ ಕೃಷಿ ಮತ್ತು ನಗರ ನೀರು ನಿರ್ವಹಣೆಯಲ್ಲಿನ ಕೆಲಸಕ್ಕಾಗಿ ತಲಾ 50 ಲಕ್ಷ ರೂ. ಬಹುಮಾನ ಗೆದ್ದಿವೆ.

ಭಾರತದಾದ್ಯಂತ ನೀರಿನ ಬಿಕ್ಕಟ್ಟು ಮತ್ತು ನಿರ್ವಹಣೆಯ ಮೇಲೆ ಈ ವರ್ಷದ ಗಮನ ಕೇಂದ್ರೀಕರಿಸಿದ ಡಿಸೈನ್ ಇಂಪ್ಯಾಕ್ಟ್ ಪ್ರಶಸ್ತಿಯ ಎರಡನೇ ಆವೃತ್ತಿಯಲ್ಲಿ ಬೆಂಗಳೂರಿನ ಈ ಎರಡು ಕಂಪನಿಗಳು ಮತ್ತು ಇತರ ನಾಲ್ಕು ಕಂಪನಿಗಳಿಗೆ ಪ್ರಶಸ್ತಿ ನೀಡಲಾಗಿದೆ.

ಇಕೋಎಸ್‌ಟಿಪಿ ಟೆಕ್ನಾಲಜೀಸ್‌ನ ಪೇಟೆಂಟ್ ಪಡೆದ ಯೋಜನೆಯಾದ ನೆಟ್ ಝೀರೋ ಸ್ಯೂವೇಜ್ ಟ್ರೀಟ್‌ಮೆಂಟ್ ಟೆಕ್ನಾಲಜಿ, ವಿದ್ಯುತ್, ರಾಸಾಯನಿಕಗಳು ಮತ್ತು ಮಾನವ ಹಸ್ತಕ್ಷೇಪವಿಲ್ಲದೆ ಕೊಳಚೆನೀರನ್ನು ಸಂಸ್ಕರಿಸಲಾಗುತ್ತದೆ. ಈ ಯೋಜನೆಯನ್ನು ಬೆಂಗಳೂರಿನ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ(EMPRI)ಯಲ್ಲಿ ಪರೀಕ್ಷಿಸಲಾಗಿದ್ದು, ಅಲ್ಲಿ ಇದು ತ್ಯಾಜ್ಯನೀರು ಸಂಸ್ಕರಣಾ ದಕ್ಷತೆಯನ್ನು ಶೇ. 15 ರಷ್ಟು ಹೆಚ್ಚಿಸಿದೆ.

Two Bengaluru firms win Rs 50 lakhs each for sewage water projects
ಬೆಂಗಳೂರು: CSR ಅಡಿಯಲ್ಲಿ ಅಭಿವೃದ್ಧಿ; ಮರಳಿ ಗತವೈಭವ ಪಡೆದ 'ಕನೆಕಲ್ಲು' ಕೆರೆ!

ಟ್ರಾನ್ಸ್‌ವಾಟರ್ ಸಿಸ್ಟಮ್ಸ್‌ನ ಬೋಸನ್ ವೈಟ್ ವಾಟರ್ ಸಿಸ್ಟಮ್, ಅಪಾರ್ಟ್‌ಮೆಂಟ್‌ಗಳು ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ವಿಕೇಂದ್ರೀಕೃತ ಸಂಸ್ಕರಣಾ ಘಟಕಗಳನ್ನು ಒದಗಿಸುತ್ತದೆ. ಕೈಗಾರಿಕಾ ಬಳಕೆಗಾಗಿ ಕುಡಿಯುವ-ಗುಣಮಟ್ಟದ ನೀರನ್ನು ಉತ್ಪಾದಿಸುತ್ತದೆ.

ಕಾಡುಬೀಸನಹಳ್ಳಿ ಬಿಡಬ್ಲ್ಯೂಎಸ್ಎಸ್ಬಿ ಒಳಚರಂಡಿ ಸಂಸ್ಕರಣಾ ಘಟಕದಲ್ಲಿ ದಿನಕ್ಕೆ 50 ಮಿಲಿಯನ್ ಲೀಟರ್ ಸಂಸ್ಕರಣಾ ಸೌಲಭ್ಯವನ್ನು ಸ್ಥಾಪಿಸುವ ಪ್ರಾಯೋಗಿಕ ಯೋಜನೆಗಾಗಿ ಈ ಕಂಪನಿಯು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್ಎಸ್ಬಿ) ಜೊತೆ ಎಂಒಯುಗೆ ಸಹಿ ಹಾಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com